Akka Cafe: ಅಕ್ಕ ಕೆಫೆಗೆ ಡಿಮ್ಯಾಂಡೋ.. ಡಿಮ್ಯಾಂಡ್.. ಮಹತ್ವದ ನಿರ್ಧಾರಕ್ಕೆ ಮುಂದಾದ ಸರ್ಕಾರ.?
Akka Cafe: ಈಗಾಗಲೇ ಕಾಂಗ್ರೆಸ್ ಸರ್ಕಾರ ಬಡವರಿಗೆ ಕಡಿಮೆ ವೆಚ್ಚದಲ್ಲಿ ಆಹಾರ ಸಿಗಲೆಂದು ರಾಜ್ಯಾದ್ಯಂತ ಇಂಧಿರಾ ಕ್ಯಂಟಿನ್‌ಗಳನ್ನು ತೆರೆದಿತ್ತು. ಬಳಿಕ ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ 'ಅಕ್ಕ ಕೆಫೆ'ಯನ್ನು ಶುರು ಮಾಡಿತ್ತು. ಇದೀಗ ಈ ಕೆಫೆಗೆ ಡಿಮ್ಯಾಂಡ್ ಹೆಚ್ಚಾದ ಬೆನ್ನಲ್ಲೇ ಸರ್ಕಾರ ಮಹತ್ವದ ನಿರ್ಧಾರಕ್ಕೆ ಕೈಹಾಕಿದೆ. ಹಾಗಾದರೆ ಆ ನಿರ್ಧಾರ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ 'ಅಕ್ಕ ಕೆಫೆ' ಯೋಜನೆಯನ್ನು ಕರ್ನಾಟಕ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಎನ್‌ಎಲ್‌ಎಂ ಜೊತೆಗೂಡಿ ಅನುಷ್ಠಾನಕ್ಕೆ ತಂದಿದೆ. 'ಅಕ್ಕ ಕೆಫೆ'ಗಳು ದುಡಿಯುವ ಮಹಿಳೆಯರ ಕೈಗಳಿಗೆ ಕೆಲಸ ನೀಡುವುದರ ಜೊತೆಗೆ ಕಡಿಮೆ ದರದಲ್ಲಿ ಶುಚಿ, ರುಚಿಯಾದ ಊಟ ಉಪಾಹಾರ ಒದಗಿಸುತ್ತಿವೆ.

ಮೊದಲ ಹಂತದಲ್ಲಿ, ಗ್ರಾಮೀಣ, ನಗರ ಸ್ಥಳಗಳನ್ನು ಆಯ್ಕೆ ಮಾಡಿ ರಾಜ್ಯಾದ್ಯಂತ 50 ಕೆಫೆಗಳನ್ನು ಸ್ಥಾಪನೆ ಮಾಡಲು ಸರ್ಕಾರ ಮುಂದಾಗಿದೆ. ಸ್ವ ಸಹಾಯ ಮಹಿಳಾ ಗುಂಪುಗಳು ಈ ಕೆಫೆಗಳನ್ನು ನಿರ್ವಹಿಸುತ್ತವೆ. ಮೂಲಸೌಕರ್ಯ ಬೆಂಬಲ ಸೇರಿದಂತೆ ಸೆಟಪ್ ವೆಚ್ಚಗಳಿಗಾಗಿ 15 ಲಕ್ಷ ರೂಪಾಯಿವರೆಗೆ ಅನುದಾನವನ್ನು ಒದಗಿಸಲಾಗುವುದು. ಅಲ್ಲದೇ ರಾಜ್ಯಾದ್ಯಂತ 2,500 ಕಾಫಿ ಕಿಯೋಸ್ಕ್‌ಗಳನ್ನು ತೆರೆಯಲಾಗುವುದು. ಕೇಂದ್ರ ಕಾಫಿ ಮಂಡಳಿಯ ನೆರವಿನಿಂದ ಗ್ರಾಮೀಣ ಮಹಿಳೆಯರಿಗೆ ತರಬೇತಿ ನೀಡಲಾಗುವುದು. ಇದಕ್ಕಾಗಿ 25,00,00,000 ರೂಪಾಯಿ ಅನುದಾನ ಮೀಸಲಿರಿಸಲಾಗಿದೆ.
ಬೆಂಗಳೂರಿನಂತಹ ಮಹಾನಗರಗಳಲ್ಲೂ ಸ್ತ್ರೀ ಶಕ್ತಿ ಗುಂಪುಗಳ ಮೂಲಕ ಮಹಿಳೆಯರಿಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವ ಕನಸನ್ನು ಈ ಯೋಜನೆ ಸಾಕಾರಗೊಳಿಸಿದೆ. ಅಕ್ಕ ಕೆಫೆಯಿಂದಲೇ ಸರ್ಕಾರಿ ಕಚೇರಿಗಳಿಗೆ ಆಹಾರ ಪೂರೈಕೆ ಆಗುತ್ತಿದೆ. ವಿಧಾನಸೌಧ, ವಿಕಾಸಸೌಧ, ಎಂ.ಎಸ್. ಬಿಲ್ಡಿಂಗ್ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ 'ಅಕ್ಕಕೆಫೆ'ಯ ತಿಂಡಿ ಹಾಗೂ ಊಟಕ್ಕೆ ಭಾರಿ ಬೇಡಿಕೆ ಬಂದಿದೆ.
ಬಿಜೆಪಿ ಬೆಂಬಲಿಸಿದ್ದಕ್ಕೆ ಒತ್ತುವರಿ ತೆರವು: ಜಮೀನು ಒತ್ತುವರಿ ತೆರವು ರಾಜಕೀಯಕ್ಕೆ ತಿರುಗಿ ಬೇರೆ ಪಕ್ಷದವರು ನಮ್ಮ ಮೇಲೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆಂದು ಬಿಜೆಪಿ ಬೆಂಬಲಿತ ಕುಟುಂಬ ತಹಸಿಲ್ದಾರ್, ಪೊಲೀಸರ ಎದುರು ಕಣ್ಣೀರಿಟ್ಟ ಘಟನೆ ಚಾಮರಾಜನಗರ ತಾಲೂಕಿನ ಮಸಣಪುರದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಮದ ಗೋಪಾಲನಾಯಕ ಹಾಗೂ ಕುಟುಂಬ ಕಾವೇರಿ ನೀರಾವರಿ ನಿಗಮದ ನಾಲೆ ಸ್ಥಳ ಒತ್ತುವರಿ ಮಾಡಿಕೊಂಡಿದ್ದಾರೆಂದು ಅಧಿಕಾರಿಗಳು ಇಂದು ತೆರವು ಕಾರ್ಯಕ್ಕೆ ಮುಂದಾದ ವೇಳೆ ದೊಡ್ಡ ಹೈಡ್ರಾಮವೇ ನಡೆಯಿತು.
10 ಗುಂಟೆ ಜಾಗಕ್ಕೆ ಪರಿಹಾರ ಕೊಟ್ಟು 17 ಗುಂಟೆ ಜಾಗವನ್ನು ತೆರವು ಮಾಡುತ್ತಿದ್ದಾರೆ, 57 ಮಂದಿ ನಿಗಮದ ಸ್ಥಳದಲ್ಲಿ ಕೃಷಿ ಮಾಡುತ್ತಿದ್ದು ನಮ್ಮ ಕುಟುಂಬದ ಜಮೀನಿನ ಮೇಲಷ್ಟೇ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಅತ್ತು ಅಳಲು ತೋಡಿಕೊಂಡರು. ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ನಾವು ಹಿಂದೆ ಕಾಂಗ್ರೆಸ್ ಬೆಂಬಲಿತರಾಗಿದ್ದೆವು. ಕಳೆದ 5 ವರ್ಷಗಳಿಂದ ಬಿಜೆಪಿ ಬೆಂಬಲಿತರಾದ ಬಳಿಕ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಸುಖಾಸುಮ್ಮನೆ ತೊಂದರೆ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.
ನೋಟಿಸ್ ಕೂಡ ಕೊಡದೇ, ನಮ್ಮ ಮನವಿಯನ್ನೂ ಆಲಿಸದೇ ಜಮೀನಿನಲ್ಲಿ ಒತ್ತುವರಿ ತೆರವು ಮಾಡಿದ್ದು ಬೇರೆಯವರ ಜಮೀನು ಬಿಟ್ಟು ನಮ್ಮನ್ನು ಮಾತ್ರ ಗುರಿ ಪಡಿಸಿದ್ದಾರೆ ಎಂದು ಗೋಪಾಲನಾಯಕ ಕುಟುಂಬ ಆರೋಪಿಸಿದೆ.
ನಿಗಮದ ಅಧಿಕಾರಿಗಳು ಹೇಳಿದ್ದೇನು?: 80ರ ದಶಕದಲ್ಲೇ ನಾಲೆಗಾಗಿ ಭೂಮಿಯನ್ನು ಪಡೆಯಲಾಗಿದೆ. ಈಗ, ಒತ್ತುವರಿ ತೆರವು ಮಾಡಲಾಗುತ್ತಿದೆ, ಗೋಪಾಲನಾಯಕ ಅಷ್ಟೇ ಅಲ್ಲದೇ ಎಲ್ಲರ ಜಮೀನನ್ನು ಹಂತಹಂತವಾಗಿ ತೆರವು ಮಾಡುತ್ತೇವೆ ಎಂದು ಕಾವೇರಿ ನೀರಾವರಿ ನಿಗಮದ ಎಇಇ ವಿಶ್ವನಾರಾಯಣ ಹೇಳಿದ್ದಾರೆ.
ಒಟ್ಟಿನಲ್ಲಿ ಗೋಪಾಲನಾಯಕ ಕುಟುಂಬದ ಫಸಲಿಗೆ ಈಗ ಕುತ್ತು ಬಂದಿದೆ. ಇದು ಮುಂದೆ ಎಷ್ಟರ ಮಟ್ಟಿಗೆ ಪರಿಹಾರವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications