ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ನಿರ್ಧಾರ: ಮಂಕಳ ವೈದ್ಯ
ಬೆಂಗಳೂರು,ಜೂನ್ 12: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಬಂದರು ಮತ್ತು ಮೀನುಗಾರರ ಸಚಿವ ಮಂಕಳ ವೈದ್ಯ ಹೇಳಿದರು.
ಈ ಕುರಿತು ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಉತ್ತರ ಕನ್ನಡದಲ್ಲಿ ಮೊದಲ ಸಭೆ ಮಾಡಿದ್ದೇನೆ. ಮೆಡಿಕಲ್ ಕಾಲೇಜು ನಾವು ಹಿಂದೆ ತೆಗೆದುಕೊಂಡು ಹೋಗಿದ್ದೆವು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ನಿರ್ಧಾರ ಮಾಡಿದ್ದೇವೆ. ನಮ್ಮ ಜನ ಹೊನ್ನಾವರ, ಭಟ್ಕಳ, ಕುಮಟಾದಲ್ಲಿ ಆಗಬೇಕು ಅಂತ ಒತ್ತಾಯಿಸಿದ್ದಾರೆ. ಶೀಘ್ರವೇ ಎಲ್ಲಿ ನೂರು ಬೆಡ್ ಆಸ್ಪತ್ರೆ ಬೇಕು. ಅಲ್ಲಿ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.

ಮೀನುಗಾರಿಕೆ ಮತ್ತು ಬಂದರು ಇಲಾಖೆ ರಿವ್ಯೂ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ರಿವ್ಯೂ ಮಾಡಿದ್ದೇನೆ, ಪ್ರಾರಂಭ ಮಾಡಿದ್ದೇನೆ. ಎಲ್ಲೆಡೆ ಹೋಗಿ ಸಮಸ್ಯೆ ಆಲಿಸಿ, ಅದನ್ನ ಬಗೆಹರಿಸಲು ಪ್ರಯತ್ನ ಮಾಡ್ತೀನಿ ಎಂದು ಹೇಳಿದರು. ಆ ಸಂದರ್ಭಕ್ಕೆ ಮುಟ್ಟಿಸೋ ಕೆಲಸ ಮಾಡಿದ್ದೆವು.
ಮೀನುಗಾರರು ಮತ್ತು ಬಂದರು ಇರೋ ಕಡಲ ಕೊರೆತ ಹೆಚ್ಚಾಗಿದೆ. ಮುಂಗಾರು ಸಂದರ್ಭದಲ್ಲಿ ಕಡಲ ಕೊರೆತ ಆಗದಂತೆ ಸಮಸ್ಯೆ ತೆಗೆದುಕೊಳ್ಳಲಾಗುವುದು. ಮೀನುಗಾರರ ಸಮಸ್ಯೆ ಬಗೆಹರಿಸೋ ನಿಟ್ಟಿನಲ್ಲಿ ಕ್ರಮ ವಹಿಸ್ತೇವೆ. ಕಡಲ ಕೊರೆತ ಆಗದಂತೆ ಕ್ರಮವಹಿಸಿದ್ದೇವೆ ಎಂದು ಹೇಳಿದರು.
ಕರಾವಳಿ ಭಾಗದಲ್ಲಿ 300 ಕಿ.ಮೀ ದೂರ ಕಡಲು ಇದೆ. ಎಲ್ಲಿ ಹೆಚ್ಚು ಕಡಲ ಕೊರೆತ ಇದೆ ಅದನ್ನ ಗುರುತಿಸೋ ಕೆಲಸ ಆಗಿದೆ. ಕಾರವಾರದಲ್ಲಿ, ಮಲ್ಪೆ, ಬಂದರು ಅರ್ಧಕ್ಕೆ ನಿಂತಿದೆ. ಹೀಗೆ ಪೂರ್ತಿ ಆಗದೆ, ಅರ್ಧಕ್ಕೆ ನಿಂತಿದೆ. ಅರ್ಧ ನಿಂತಿರೋದನ್ನ ಪೂರ್ಣ ಮಾಡುವ ಕೆಲಸ ಮೊದಲು ಮಾಡುತ್ತೇವೆ. ನಂತರ ಪ್ರಾರಂಭ ಆಗದ ಕಾಮಗಾರಿ ಮಾಡುತ್ತೇವೆ.
ಗ್ಯಾರಂಟಿಗಳಿಗೆ ಅನುದಾನ ಕೊರತೆ ಆಗುವುದಿಲ್ಲ. ಪೂರ್ಣ ಆಗುವ ಕೆಲಸ ಮಾತ್ರ ಮಾಡ್ತೇವೆ ಎಂದ ಅವರು, ಐದು ಉಚಿತ ಯೋಜನೆ ಮೀನುಗಾರರಿಗೂ ಸಿಗಲಿದೆ. ಬಡವರಿಗೆ ಮುಟ್ಟಿಸುವ ಕೆಲಸ ಆಗಲಿದೆ. ಉಚಿತ ಯೋಜನೆಯಿಂದ ಅನುದಾನ ಕಡಿತ ಮಾಡುತ್ತೇವೆ ಎಂದು ಸಿಎಂ ಯಾವ ಇಲಾಖೆಗೂ ಹೇಳಲಿಲ್ಲ. ಯಾವುದೇ ರೀತಿಯಲ್ಲಿ ರಾಜ್ಯದ ಜನತೆಗೆ ಅಭಿವೃದ್ಧಿ ಆಗದೆ ಹೋಗಲ್ಲ. ಎಲ್ಲಾ ರೀತಿಯ ಅನುದಾನ ಸಿಕ್ಕಿ ಅಭಿವೃದ್ಧಿ ಆಗಲಿದೆ. 500 ಕೋಟಿ ನಮ್ಮ ಇಲಾಖೆಗೆ ಅನುದಾನ ಬೇಕಿದೆ. ಹಾಗಾಗಿ ಅಧಿಕಾರಿಗಳ ಜೊತೆ ರಿವ್ಯೂ ಸಭೆಯನ್ನು ಮಾಡಿದ್ದೇನೆ ಎಂದರು.
ಇನ್ನೂ ಉತ್ತರ ಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ರತ್ರೆ ಬೇಕೆನ್ನುವುದು ಬಹುಕಾಲದ ಬೇಡಿಕೆಯಾಗಿದೆ. ಈ ಹಿಂದಿನ ಸರಕಾರ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದಾಗಿ ಘೋಷಿಸಿ ಮಾರ್ಚ್ 11ರಂದು ಶಂಕು ಸ್ಥಾಪನೆ ನೆರವೇರಿಸಿತ್ತು. ಆದರೆ ಬಳಿಕ ಚುನಾವಣೆ ಘೋಷಣೆಯಾಗಿದ್ದರಿಂದ ಯಾವ ಪ್ರಗತಿಯೂ ಆಗಿರಲಿಲ್ಲ. ಇದೀಗ ಸಚಿವ ಮಂಕಳ ವೈದ್ಯ ಅವರು ನೀಡಿರುವ ಹೇಳಿಕೆಯಿಂದ ಮತ್ತೆ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನಸು ಚಿಗುರೊಡೆದಿದೆ.












Click it and Unblock the Notifications