ಮ್ಯಾಪ್‌ನಿಂದ 'ನಿಖಿಲ್ ಎಲ್ಲಿದ್ದೀಯಪ್ಪ' ಸ್ಥಳ ಕಿತ್ತು ಹಾಕಿದ ಗೂಗಲ್

ಬೆಂಗಳೂರು, ಏಪ್ರಿಲ್ 10: 'ಜಾಗ್ವಾರ್' ಚಿತ್ರದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದ 'ನಿಖಿಲ್ ಎಲ್ಲಿದ್ದೀಯಪ್ಪ' ಮಾತು ಅನೇಕ ಕಡೆ ತಮಾಷೆಯ ಸಂಗತಿಯಾಗಿ ಬಳಕೆಯಾಗುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಿಡಿಗೇಡಿಗಳು 'ನಿಖಿಲ್ ಎಲ್ಲಿದ್ದೀಯಪ್ಪ' ಎನ್ನುವುದನ್ನು ಗೂಗಲ್ ಮ್ಯಾಪ್‌ನಲ್ಲಿಯೂ ಬರುವಂತೆ ಮಾಡಿದ್ದರು. ಗೂಗಲ್ ಮ್ಯಾಪ್‌ನಲ್ಲಿ 'ನಿಖಿಲ್ ಎಲ್ಲಿದ್ದೀಯಪ್ಪ (Nikhil ellidiyappa) ಎಂದು ಟೈಪಿಸಿದರೆ ಮಂಡ್ಯ ಜಿಲ್ಲೆಯ ಹೊರವಲಯದ ಸ್ಥಳವೊಂದನ್ನು ತೋರಿಸುತ್ತಿತ್ತು. ಇದು ಸಾಕಷ್ಟು ವೈರಲ್ ಆಗಿತ್ತು ಕೂಡ.

'ನಿಖಿಲ್ ಎಲ್ಲಿದ್ದೀಯಪ್ಪ...' ಯಾರಿಗೆ ಸಿಗಲಿದೆ ಈ ಟೈಟಲ್?

ಎರಡು ದಿನಗಳಲ್ಲೇ ಸಾವಿರಾರು ಮಂದಿ ತಮ್ಮ ಗೂಗಲ್ ಮ್ಯಾಪ್ ಆಪ್‌ನಲ್ಲಿ Nikhil ellidiyappa ಎಂದು ಟೈಪ್ ಮಾಡಿ ಮಜಾ ತೆಗೆದುಕೊಳ್ಳುತ್ತಿದ್ದರು. ಈಗ ಗೂಗಲ್ ಇಂಡಿಯಾ ಈ ಸ್ಥಳ ಸೂಚಕವನ್ನು ತೆಗೆದುಹಾಕಿದೆ.

Google removed Nikhil ellidiyappa locations from its map

ಭಾನುವಾರ ಗೂಗಲ್ ಮ್ಯಾಪ್‌ನಲ್ಲಿ ಯಾರೋ Nikhil ellidiyappa ಸ್ಥಳ ಸೂಚಕವನ್ನು ಅಪ್ಡೇಟ್ ಮಾಡಿದ್ದರು. ಇದು ಮಂಡ್ಯದ ಹೊರವಲಯದ ಕೆರೆಯೊಂದನ್ನು ತೋರಿಸುತ್ತಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಹೆಬ್ಬಾಳದ ಬಳಿ ಕೂಡ ಇದೇ ಹೆಸರಿನ ಸ್ಥಳ ಸೂಚಕ ಲಭ್ಯವಾಗುತ್ತಿತ್ತು.

Nikhil ellidiyappa ಸ್ಥಳವನ್ನು ಗೂಗಲ್ ಮ್ಯಾಪ್‌ನಲ್ಲಿ ಅಪ್ಲೋಡ್ ಮಾಡಿರುವುದು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ, ಅದರಲ್ಲಿ ಲಭ್ಯವಾಗುವ ಸಂಪರ್ಕ ಸಂಖ್ಯೆಯು ಪೊಲೀಸ್ ಸಿಬ್ಬಂದಿ ಒಬ್ಬರದ್ದು ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

'ನನ್ನ ಮೊಬೈಲ್ ಸಂಖ್ಯೆಯನ್ನು ಯಾರು ಅಪ್ಲೋಡ್ ಮಾಡಿದ್ದಾರೋ ನನಗೆ ತಿಳಿದಿಲ್ಲ. ಆದರೆ ಅದರ ಬಗ್ಗೆ ವಿಚಾರಿಸಿ ನನಗೆ ಅನೇಕ ಕರೆಗಳು ಬಂದಿವೆ. ಈ ಬಗ್ಗೆ ವಿಚಾರಣೆ ನಡೆಸಲು ಸೈಬರ್ ಕ್ರೈಮ್ ಪೊಲೀಸ್‌ನಲ್ಲಿರುವ ನನ್ನ ಸಹೋದ್ಯೋಗಿಗಳಿಗೆ ಮನವಿ ಮಾಡಿದ್ದೇನೆ' ಎಂದು ತಿಳಿಸಿರುವುದಾಗಿ ಪತ್ರಿಕೆ ವರದಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+