BPL, APL Card: ಪಡಿತರ ಚೀಟಿ ಪರಿಷ್ಕರಣೆ ಮುಕ್ತಾಯ; ಅರ್ಹ ಬಿಪಿಎಲ್‌ ಕಾರ್ಡುದಾರರಿಗೆ ಗುಡ್‌ ನ್ಯೂಸ್

BPL, APL Card: ನಕಲಿ ದಾಖಲೆ ನೀಡಿ ಪಡೆದಂತಹ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಿ ಅಂತಹವರನ್ನು ಎಪಿಎಲ್‌ಗೆ ವರ್ಗಾಯಿಸುವ ಕೆಲಸವನ್ನು ಸರ್ಕಾರ ಮಾಡಿತ್ತು. ಅಲ್ಲದೆ, ಇದೀಗ ರದ್ದಾಗಿದ್ದ ಅರ್ಹರ ಬಿಎಪಿಎಲ್ ಕಾರ್ಡ್‌ಗಳ ಪರಿಷ್ಟರಣೆ ಮಾಡುವ ಕೆಲಸ ಮುಕ್ತಾಯ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಪಿಎಲ್‌ ಕಾರ್ಡ್‌ ಅನೇಕ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ಬಡವರಿಗೆ ನೀಡಲಾಗುತ್ತದೆ. ಆದರೆ, ಅನರ್ಹರೇ ಹೆಚ್ಚಾಗಿ ಈ ಕಾರ್ಡ್‌ ಪಡೆದುಕೊಂಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿತ್ತು. ಇದು ತಿಳಿಯುತ್ತಿದ್ದಂತೆ ಅನರ್ಹರು ಪಡೆದಿದ್ದ ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆ ಹಚ್ಚಿ ರದ್ದು ಮಾಡುವ ಕೆಲಸವನ್ನು ಸರ್ಕಾರ ಮಾಡಿತ್ತು. ಇದೀಗ ಪರಿಷ್ಕರಣೆ ಸಹ ಮುಕ್ತಾಯವಾಗಿದ್ದು, ಈ ಮೂಲಕ ಅರ್ಹರಿಗೆ ಗುಡ್‌ ನ್ಯೂಸ್‌ ನೀಡಿದೆ.

Good News for Eligible BPL Card holders Know details

ರಾಜ್ಯದಲ್ಲಿ ಲಕ್ಷಾಂತರ ಜನರ ಬಿಪಿಎಲ್ ಕಾರ್ಡ್‌ಗಳನ್ನು ಅಮಾನತು ಮಾಡುವ ಮೂಲಕ ಶಾಕ್ ಕೊಟ್ಟಿದ್ದ ಸರ್ಕಾರ ಇದೀಗ ಅಮಾನತ್ತಿನಲ್ಲಿದ್ದ ಎಲ್ಲಾ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಮುಕ್ತಾಯಗೊಳಿಸಿದೆ. ಈ ಮೂಲಕ ಸರ್ಕಾರ ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಶುಭ ಸುದ್ದಿ ನೀಡಿದೆ.

ರಾಜ್ಯದ ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಲಕ್ಷಂತಾರ ಬಿಪಿಎಲ್ ಕಾರ್ಡ್‌ಗಳನ್ನ ಅಮಾನತ್ತಿನಲ್ಲಿಡಲಾಗಿತ್ತು. ಇದರಿಂದ ಅರ್ಹ ಫಲಾನುಭವಿಗಳು ಕಳೆದ ಎರಡು ತಿಂಗಳನಿಂದ ಪಡಿತರ ಪಡೆಯದೇ ವಂಚಿತರಾಗಿದ್ದು, ಇದರಿಣದ ಅವರು ತುಂಬಾ ತೊಂದರೆ ಅನುಭವಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಇದೀಗ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಎರಡು ತಿಂಗಳ ಅಕ್ಕಿ, ಗೋಧಿ ನೀಡಲು ನಿರ್ಧರಿಸಿದೆ. ನವೆಂಬರ್ 28ರೊಳಗೆ ಪರಿಷ್ಕರಣೆಯಾದ ಬಿಪಿಎಲ್ ಕಾರ್ಡ್ ಸಿಗಲಿದೆ. ಅಮಾನತ್ತಿನಲ್ಲಿದ್ದ ಎಲ್ಲಾ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಮುಕ್ತಾಯವಾಗಿದೆ. ಈ ತಿಂಗಳಿನಿಂದಲೇ ಎಲ್ಲರಿಗೂ ಪಡಿತರ ಸಿಗಲಿದೆ ಎಂದು ತಿಳಿದುಬಂದಿದೆ.

ಪಡಿತರ ಚೀಟಿ ತಿದ್ದುಪಡಿ ಮಾಡುವುದೇಗೆ?

* ಅಧಿಕೃತ ವೆಬ್‌ಸೈಟ್ https://ahara.kar.nic.in/homeಗೆ ಭೇಟಿ ನೀಡಿ.
* ಮುಖ್ಯ ಪುಟದಲ್ಲಿ ಇ-ಸೇವೆಗಳನ್ನು ಆಯ್ಕೆ ಮಾಡಿ.
* ತಿದ್ದುಪಡಿ ಅಥವಾ ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು ಕ್ಲಿಕ್ ಮಾಡಿ.
* ಹೊಸ ಪೇಜ್‌ನಲ್ಲಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
* ಬಳಿಕ ಅಲ್ಲಿ ತಿಳಿಸಲಾದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿ.
* ನಂತರ ಫಾರ್ಮ್ ಅನ್ನು ಸಬ್ಮಿಟ್‌ ಮಾಡಿ.
* ಅರ್ಜಿ ಸಲ್ಲಿಕೆ ವೇಳೆ ನೀವು ನೀಡಿರುವಂತಹ ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ ಮಾತ್ರ ನಿಮಗೆ ಅಪ್ಡೇಟ್‌ ಆಗಿರುವ ಹೊಸ ಪಡಿತರ ಚೀಟಿಯನ್ನು ನೀಡಲಾಗುತ್ತದೆ.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?: ರಾಜ್ಯದ ಎಲ್ಲಾ ಖಾಯಂ ನಿವಾಸಿಗಳು ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಮಾನದಂಡಗಳಿಗೆ ಅನುಸಾರವಾಗಿ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಹುದಾಗಿದೆ. ರಾಜ್ಯದ ನಿವಾಸಿಗಳು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಆಹಾರ ಇಲಾಖೆಯ ಕಚೇರಿಗೇ ಹೋಗಬೇಕೆಂದಿಲ್ಲ. ಅರ್ಜಿ ಸಲ್ಲಿಕೆಯ ವೇಳೆ ನೀವು ನೀಡಿರುವಂತಹ ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ ಮಾತ್ರ ಅಪ್ಡೇಟ್‌ ಆಗಿರುವ ಹೊಸ ರೇಷನ್‌ ಕಾರ್ಡ್‌ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+