ಫೇಸ್‌ಬುಕ್ ಮೂಲಕ ಸಾಹಿತ್ಯ ಸಮ್ಮೇಳನದ ಮಾಹಿತಿ ಪಡೆಯಿರಿ
ಹಾಸನ, ಜ.12 : ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆಯಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಬಾರಿ ಹೈಟೆಕ್ ಸ್ಪರ್ಶ ಸಿಗಲಿದೆ. ಹೌದು, ಮೊಬೈಲ್ ಅಪ್ಲಿಕೇಷನ್ ಮತ್ತು ಫೇಸ್‌ಬುಕ್ ಪುಟಗಳ ಮೂಲಕ ಸಮ್ಮೇಳನದ ಮಾಹಿತಿಯನ್ನು ಜನರಿಗೆ ತಲುಪಿಸಲು ನಿರ್ಧರಿಸಲಾಗಿದೆ.
ಈಗಾಗಲೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತ ಫೇಸ್‌ಬುಕ್ ಪುಟವನ್ನು ತೆರೆಯಲಾಗಿದ್ದು, 821 ಜನರು ಪುಟವನ್ನು ಲೈಕ್ ಮಾಡಿದ್ದಾರೆ. ಸಮ್ಮೇಳನದ ಸಿದ್ಧತೆ, ಸಿಎಂಗೆ ಆಹ್ವಾನ ನೀಡಿರುವುದು ಮುಂತಾದ ಚಿತ್ರ, ವರದಿಗಳು ಈ ಫೇಸ್‌ಬುಕ್ ಪುಟದಲ್ಲಿವೆ. [ಸಾಹಿತ್ಯ ಸಮ್ಮೇಳನಕ್ಕೆ ಕವಿ ಸಿದ್ದಲಿಂಗಯ್ಯ ಅಧ್ಯಕ್ಷ]

ಭಾನುವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಸಮ್ಮೇಳನದ ಮಾಹಿತಿ ನೀಡುವ ಮೊಬೈಲ್ ಅಪ್ಲಿಕೇಷನ್ ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದಲ್ಲದೇ ಟೋಲ್ ಫ್ರೀ ನಂಬರ್‌ನ ಕಾಲ್ ಸೆಂಟರ್‌ಅನ್ನು ಆರಂಭಿಸಲು ತೀರ್ಮಾನಿಸಲಾಗಿದೆ. [ಸಮ್ಮೇಳನದ ಫೇಸ್ ಬುಕ್ ಪುಟ]
ಸಮ್ಮೇಳನದ ಯಾವ ವೇದಿಕೆಯಲ್ಲಿ ಯಾವ ಕಾರ್ಯಕ್ರಮವಿದೆ, ಶ್ರವಣಬೆಳಗೊಳದ ಸುತ್ತ-ಮುತ್ತಲಿನ ಪ್ರವಾಸಿ ಸ್ಥಳಗಳ ಮಾಹಿತಿ ಮುಂತಾದ ವಿವರಗಳನ್ನು ನೀಡುವಂತೆ ಅಪ್ಲಿಕೇಷನ್ ಸಿದ್ಧಪಡಿಸಲು ತೀರ್ಮಾನಿಸಲಾಗಿದೆ. ಕೆಲವು ದಿನಗಳಲ್ಲಿ ಈ ಅಪ್ಲಿಕೇಷನ್ ಬಿಡುಗಡೆಗೊಳ್ಳಲಿದೆ.
ಅಂದಹಾಗೆ ಫೆ.1ರಿಂದ ಮೂರು ದಿನಗಳ ಕಾಲ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶ್ರವಣಬೆಳಗೊಳದಲ್ಲಿ ನಡೆಯಲಿದೆ. ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.












Click it and Unblock the Notifications