ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿ ಲಂಕೇಶ್ ಹತ್ಯೆ: ರಾಮಚಂದ್ರಾಪುರ ಮಠದ ಸ್ಪಷ್ಟನೆ

ಗೌರಿ ಲಂಕೇಶ್ ಹತ್ಯೆ ತನಿಖೆ ನಡೆಸಲು ನೇಮಿತವಾದ ವಿಶೇಷ ತನಿಖಾ ತಂಡ (SIT) ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಶ್ರೀಗಳ ವಿಚಾರಣೆ ನಡೆಸುವ ಕುರಿತಾಗಿ ಬಂದ ವರದಿ ವಿಷಯದಲ್ಲಿ ಮಠವು ಎಸ್ ಐಟಿಗೆ ಪತ್ರವನ್ನು ನೀಡಿದ್ದು ಈ ಕುರಿತು ಪತ್ರಿಕಾ

|
Google Oneindia Kannada News

ಗೌರಿ ಲಂಕೇಶ್ ಹತ್ಯೆ ತನಿಖೆ ನಡೆಸಲು ನೇಮಿತವಾದ ವಿಶೇಷ ತನಿಖಾ ತಂಡ (SIT) ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಶ್ರೀಗಳ ವಿಚಾರಣೆ ನಡೆಸುವ ಕುರಿತಾಗಿ ಬಂದ ವರದಿ ವಿಷಯದಲ್ಲಿ ಮಠವು ಎಸ್ ಐಟಿಗೆ ಪತ್ರವನ್ನು ನೀಡಿದ್ದು ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಪತ್ರಿಕಾ ಹೇಳಿಕೆಯ ಸಾರಾಂಶ ಇಂತಿದೆ: ಪತ್ರಕರ್ತೆ ಗೌರಿ ಲಂಕೇಶ್ ರವರ ಹತ್ಯೆಯ ಹಿನ್ನೆಲೆಯಲ್ಲಿ ತನಿಖೆಗಾಗಿ ಮಾನ್ಯ ರಾಜ್ಯ ಸರ್ಕಾರವು ರಚಿಸಿದ ವಿಶೇಷ ತನಿಖಾ ತಂಡಕ್ಕೆ ಶ್ರೀಮತಿ ಪ್ರೇಮಲತಾ ಹಾಗೂ ಸಿ.ಎಂ. ದಿವಾಕರ ಶಾಸ್ತ್ರೀ ಎಂಬುವವರು ಅರ್ಜಿ ಸಲ್ಲಿಸಿ, ರಾಘವೇಶ್ವರ ಶ್ರೀಗಳು ಈ ಕೃತ್ಯದ ಹಿಂದಿದ್ದಾರೆಂದು ಹೇಳಿರುವ ವಿಚಾರ ಹಾಗೂ ಈ ಕೋನದಿಂದ ತನಿಖೆ ನಡೆಸಬೇಕೆಂದು ಹೇಳಿರುವ ವಿಚಾರ ದೃಶ್ಯ ಮಾಧ್ಯಮಗಳ, ವಾರ್ತಾಪತ್ರಿಕೆಗಳ ಮೂಲಕ ತಿಳಿದುಬಂದಿತ್ತು.

ಗೌರಿ ಲಂಕೇಶ್ ಹತ್ಯೆ: ತನಿಖಾಧಿಕಾರಿಗಳಿಗೆ ಸಿಕ್ಕಿತು ಮತ್ತೊಂದು ಟ್ವಿಸ್ಟ್ಗೌರಿ ಲಂಕೇಶ್ ಹತ್ಯೆ: ತನಿಖಾಧಿಕಾರಿಗಳಿಗೆ ಸಿಕ್ಕಿತು ಮತ್ತೊಂದು ಟ್ವಿಸ್ಟ್

ಪತ್ರಕರ್ತೆ ಗೌರಿ ಲಂಕೇಶ್ ರವರನ್ನು ಗುಂಡಿಕ್ಕಿ ಕೊಲೆಗೈದಿರುವುದು ಅತ್ಯಂತ ವಿಷಾದನೀಯ ಹಾಗೂ ಖಂಡನೀಯ. ಆದರೆ, ಈ ಹತ್ಯೆಗೂ ಮತ್ತು ರಾಮಚಂದ್ರಾಪುರ ಮಠಕ್ಕೂ ಹಾಗೂ ರಾಘವೇಶ್ವರ ಶ್ರೀಗಳಿಗೂ ಯಾವುದೇ ಸಂಬಂಧವಿರುವುದಿಲ್ಲ.

ಶ್ರೀಮಠಕ್ಕಾಗಲೀ, ಶ್ರೀಗಳಿಗಾಗಲಿ ಯಾರ ಬಗ್ಗೆಯೂ ಕೂಡಾ ಪೂರ್ವಾಗ್ರಹ ಅಥವಾ ಸೇಡು ಯಾ ವೈಮನಸ್ಸು ಇರುವುದಿಲ್ಲ. ಯಾವುದೇ ಜೀವಹಿಂಸೆಯಾಗಲೀ, ಜೀವಹರಣವಾಗಲೀ ಎಂದಿಗೂ ಶ್ರೀಮಠದ ಕಾರ್ಯವಾಗಿರುವುದಿಲ್ಲ, ಬದಲಿಗೆ ಜೀವರಕ್ಷಣೆಗಾಗಿ ಶ್ರೀಮಠ ಅವಿರತವಾಗಿ ಶ್ರಮಿಸುತ್ತಿರುವುದು ಸರ್ವವಿಧಿತ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸುತ್ತೇವೆ.

ಶ್ರೀಮತಿ ಪ್ರೇಮಲತಾ ಹಾಗೂ ದಿವಾಕರ ಶಾಸ್ತ್ರೀ ದಂಪತಿಗಳು ರಾಮಚಂದ್ರಾಪುರ ಮಠ ಮತ್ತು ಶ್ರೀಗಳ ವಿರುದ್ಧ ನಡಿಸಿಕೊಂಡು ಬಂದಿರುವ ಹಲವಾರು ಷಡ್ಯಂತ್ರ ಹಾಗೂ ಪಿತೂರಿಗಳನ್ನು ಮುಂದುವರೆದ ಭಾಗ ಇದಾಗಿದೆ. ಮುಂದೆ ಓದಿ..

ಆರೋಪಿಗಳನ್ನು ರಕ್ಷಿಸುವ ರೀತಿಯಲ್ಲಿ 'ಬಿ' ಅಂತಿಮ ವರದಿ

ಆರೋಪಿಗಳನ್ನು ರಕ್ಷಿಸುವ ರೀತಿಯಲ್ಲಿ 'ಬಿ' ಅಂತಿಮ ವರದಿ

ಪ್ರಾರಂಭದಲ್ಲಿ ದಾಖಲಾದ ಹೊನ್ನಾವರ ಪೊಲೀಸ್ ಠಾಣಾ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಸದರಿ ಆರೋಪಿಗಳಾದ ದಿವಾಕರ ಶಾಸ್ತ್ರೀ ದಂಪತಿಗಳನ್ನು ರಕ್ಷಿಸುವ ರೀತಿಯಲ್ಲಿ 'ಬಿ' ಅಂತಿಮ ವರದಿ ಸಲ್ಲಿಸಿದ್ದರು. ದಿನಾಂಕ 04.09.2017 ರಂದು ದೂರುದಾರ ಬಿ.ಆರ್. ಚಂದ್ರಶೇಖರ್ ಇದು ಪ್ರೇಮಲತಾ, ದಿವಾಕರಶಾಸ್ತ್ರಿ ಮತ್ತು ಇತರರು ಶ್ರೀಮಠ ಮತ್ತು ಶ್ರೀಗಳವರ ಮೇಲೆ ಹೂಡಿರುವ ಷಡ್ಯಂತ್ರವಾಗಿದೆ ಎಂದು ಸಕಲ ಸಾಕ್ಷಾಧಾರಸಹಿತವಾಗಿ ತಮ್ಮ ಖಾಸಗಿ ಪಿರ್ಯಾದು ರೂಪದ ತಕರಾರು ಅರ್ಜಿಯನ್ನು ಕೋರ್ಟಿಗೆ ಸಲ್ಲಿಸಿದ್ದರು.

ಸಿ.ಐ.ಡಿ ಪೊಲೀಸರು ಸಲ್ಲಿಸಿರುವ ಬಿ. ಅಂತಿಮ ವರದಿ

ಸಿ.ಐ.ಡಿ ಪೊಲೀಸರು ಸಲ್ಲಿಸಿರುವ ಬಿ. ಅಂತಿಮ ವರದಿ

ಸಿ.ಐ.ಡಿ ಪೊಲೀಸರು ಸಲ್ಲಿಸಿರುವ ಬಿ. ಅಂತಿಮ ವರದಿಯನ್ನು ತಿರಸ್ಕರಿಸಿ, ಪ್ರಕರಣದ ವಿಚಾರಣೆ ನಡೆಸಿ, ಮಾನ್ಯ ಘನ ನ್ಯಾಯಾಲಯವು ಆರೋಪಿತರ ಮೇಲೆ ಕಾನೂನು ಪ್ರಕಾರ ದಂಡನೆ ವಿಧಿಸಬೇಕೆಂದು ಪ್ರಾರ್ಥಿಸಿ, ಷಡ್ಯಂತ್ರವನ್ನು ಬಯಲು ಮಾಡಿದ್ದಕ್ಕೆ ಗಲಿಬಿಲಿಗೊಂಡ ದಂಪತಿಗಳು ಈ ಆರೋಪದಿಂದ ತಪ್ಪಿಸಿಕೊಳ್ಳಲು ಇದಾಗಿ ನಾಲ್ಕೇ ದಿನಕ್ಕೆ ಗೌರಿ ಲಂಕೇಶ್ ಹತ್ಯೆಯ ವಿಚಾರದಲ್ಲಿ ಶ್ರೀಮಠದ ಹಾಗೂ ಶ್ರೀಗಳ ಮೇಲೆ 500 ಪುಟಗಳನ್ನೊಳಗೊಂಡ ದೂರು ಅರ್ಜಿ ಸಲ್ಲಿಕೆಯಾಗಿರುವುದು ಷಡ್ಯಂತ್ರದ ಮುಂದುವರಿದ ಭಾಗವಲ್ಲದೇ ಮತ್ತೇನು?

ದಂಪತಿಗಳಿಂದ ಪದೇ ಪದೇ ಸುಳ್ಳು ಆರೋಪ

ದಂಪತಿಗಳಿಂದ ಪದೇ ಪದೇ ಸುಳ್ಳು ಆರೋಪ

ಶ್ರೀಗಳವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ಈ ದಂಪತಿಗಳಿಂದ ಪದೇ ಪದೇ ನಡೆಯುತ್ತಿದ್ದು, ಶ್ರೀಗಳವರ ಮೇಲೆ ಸುಳ್ಳು ಆರೋಪ ಹೊರಿಸುವ ಯಾ ದೂರು ನೀಡುವ ವ್ಯಕ್ತಿಗಳನ್ನು ತೀವ್ರ ತನಿಖೆಯನ್ನು ಮಾಡಬೇಕೆಂದು ಶ್ರೀಮಠವು ಆಗ್ರಹಿಸುತ್ತದೆ.

ದೂರಿನ ಒಂದು ಪ್ರತಿಯನ್ನು ನಮಗೆ ತುರ್ತಾಗಿ ಒದಗಿಸಿ

ದೂರಿನ ಒಂದು ಪ್ರತಿಯನ್ನು ನಮಗೆ ತುರ್ತಾಗಿ ಒದಗಿಸಿ

ದಿವಾಕರ ಶಾಸ್ತ್ರೀ ದಂಪತಿಗಳ ಮೇಲೆ ಶ್ರೀಮಠ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಕ್ಕೋಸ್ಕರ, ಸದರಿ ದಂಪತಿಗಳು ನೀಡಿದ್ದಾರೆನ್ನಲಾದ ದೂರಿನ ಒಂದು ಪ್ರತಿಯನ್ನು ನಮಗೆ ತುರ್ತಾಗಿ ಒದಗಿಸಬೇಕೆಂದು ಕೇಳಿದ್ದೇವೆ. ಪ್ರತಿ ಲಭಿಸಿದ ನಂತರ, ಒಂದೇ ಒಂದು ಸಾಕ್ಷಿ ಇಲ್ಲದೆ ದೂರು ನೀಡಿ ಶ್ರೀಮಠ ಹಾಗೂ ಶ್ರೀಗಳ ತೇಜೋವಧೆ ಮಾಡಿರುವವರ ಮೇಲೆ ಒಂದು ಕೋಟಿ ರೂಗಳ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುತ್ತೇವೆ

ಸುಳ್ಳು ಆರೋಪ ಹೊರಿಸುತ್ತಿರುವ ಪ್ರೇಮಲತಾ ಹಾಗೂ ದಿವಾಕರ ಶಾಸ್ತ್ರಿ

ಸುಳ್ಳು ಆರೋಪ ಹೊರಿಸುತ್ತಿರುವ ಪ್ರೇಮಲತಾ ಹಾಗೂ ದಿವಾಕರ ಶಾಸ್ತ್ರಿ

ಜೊತೆಗೆ, ಸುಳ್ಳು ಆರೋಪ ಹೊರಿಸುತ್ತಿರುವ ಪ್ರೇಮಲತಾ ಹಾಗೂ ದಿವಾಕರ ಶಾಸ್ತ್ರಿ ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣದ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬೆಳಕಿಗೆ ತರಬೇಕಾಗಿ ವಿಶೇಷ ತನಿಖಾ ತಂಡವನ್ನು ಶ್ರೀಮಠವು ವಿನಂತಿಸುತ್ತದೆ.

English summary
Gauri Lankesh murder: Ramachandrapura Math press release and letter to SIT. It was reported that, Pramalatha Diwakar has given 500 pages documents against Raghaveshwara Seer of Ramachandrapura Mutt involvement in Gauri Lankesh murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X