ಗೌರಿ ಲಂಕೇಶ್ ಹತ್ಯೆ : ಆರೋಪಿಗಳಿಗೆ ಪ್ರಚೋದನೆ ನೀಡಿದ್ದೇನು?
ಬೆಂಗಳೂರು, ಮೇ 06 : ಕೋಕಾ ವಿಶೇಷ ನ್ಯಾಯಾಲಯ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ವಿಚಾರಣೆಯನ್ನು ಏಪ್ರಿಲ್ 25ರಿಂದ ಆರಂಭಿಸಿದೆ. ಯಾವುದೇ ಆರೋಪಿಗಳು ಗೌರಿ ಲಂಕೇಶ್ ಅವರೊಂದಿಗೆ ವೈಯಕ್ತಿಕ ದ್ವೇಷ ಹೊಂದಿರಲಿಲ್ಲ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.
ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದೆ. 'ಆರೋಪಿಗಳಿಗೆ ಗೌರಿ ಲಂಕೇಶ್ ಅವರ ಬಗ್ಗೆ ವೈಯಕ್ತಿಯ ದ್ವೇಷವಿರಲಿಲ್ಲ, ಸೈದ್ಧಾಂತಿಕ ಭಿನ್ನಾಭಿಪ್ರಾಯವಿತ್ತು' ಎಂದುಎಸ್‌ಪಿಪಿ ಎಸ್.ಬಾಲನ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
'ಆರೋಪಿಗಳು ಹತ್ಯೆ ಮಾಡಲು ಬೇರೆ ಯಾವುದೇ ಕಾರಣಗಳಿರಲಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಸತಾನತ ಸಂಸ್ಥೆ ಜೊತೆ ಒಡನಾಟ ಹೊಂದಿರುವ ಆರೋಪಿಗಳು ದುರ್ಜನರನ್ನು ಕೊಲ್ಲುವುದು ಹಿಂಸೆಯಲ್ಲ ಎಂದು ಅವರು ನಂಬಿದ್ದರು' ಎಂದು ಬಾಲನ್ ತಿಳಿಸಿದರು.

ಗೌರಿ ಲಂಕೇಶ್ ಹತ್ಯೆಯ ಪ್ರಕರಣದಲ್ಲಿ 18 ಆರೋಪಿಗಳು ನೇರವಾಗಿ ಭಾಗಿಯಾಗಿದ್ದು, ಇವರಲ್ಲಿ 10 ಜನರು ಕರ್ನಾಟಕದವರು ಉಳಿದವರು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದವರು. ಗೌರಿ ಮತ್ತು ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆ ಎಲ್ಲರಿಗೂ ನಿರ್ದೇಶನವನ್ನು ನೀಡಿದ್ದ.
ಈ ಪ್ರಕರಣದಲ್ಲಿ ಇಬ್ಬರು ಪುರುಷ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ವಿಕಾಸ್ ಪಾಟೀಲ್ ಅಲಿಯಾಸ್ ದಾದ ಮತ್ತು ರಿಶಿಕೇಶ್ ಅಲಿಯಾಸ್ ಮುರಳಿಗಾಗಿ ಇನ್ನೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಆರೋಪಿಗಳ 30 ದುರ್ಜನರ ಪಟ್ಟಿಯನ್ನು ತಯಾರು ಮಾಡಿದ್ದರು. ಇವರಲ್ಲಿ ಎಡಪಂಥೀಯ ಚಿಂತನೆ ಹೊಂದಿರುವವರು, ಬರಹಗಾರರು, ಸಾಮಾಜಿಕ ಕಾರ್ಯಕರ್ತರು ಸೇರಿದ್ದರು. ಚಾರ್ಜ್ ಶೀಟ್ ಸಲ್ಲಿಸುವಾಗ ಎಲ್ಲಾ ಆರೋಪಿಗಳ ಹೇಳಿಕೆ ಜೊತೆಗೆ ಎರಡು ಪ್ರತ್ಯೇಕ ತಪ್ಪೊಪ್ಪಿಗೆ ಹೇಳಿಕೆಗಳನ್ನು ಸೀಲ್ ಮಾಡಿದ ಕವರ್‌ನಲ್ಲಿ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ 1053 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಮ್ಯಾಜಿಸ್ಟ್ರೇಟ್ ಅವರ ಮುಂದೆ 41 ಸಾಕ್ಷಿಗಳು ನೀಡಿದ ಹೇಳಿಕೆಯನ್ನು ಸಹ ಸಲ್ಲಿಕೆ ಮಾಡಲಾಗಿದೆ.
2017ರ ಸೆಪ್ಟೆಂಬರ್ 5ರ ರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆ ಮುಂದೆ ಗೌರಿ ಲಂಕೇಶ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಕರ್ನಾಟಕ ಸರ್ಕಾರ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿತ್ತು.











Click it and Unblock the Notifications