ಸೂಡಾನಿನಲ್ಲಿ ಉಗ್ರರ ಗುಂಡಿಗೆ ಗಂಗಾವತಿ ಯುವಕ ಬಲಿ

ಆಫ್ರಿಕಾದ ದಕ್ಷಿಣ ಸೂಡಾನ್ ದೇಶದಲ್ಲಿ ಉದ್ಯೋಗದಲ್ಲಿದ್ದ ಗಂಗಾವತಿಯ ಸೈಯದ್ ಫರೂಕ್ ಬಾಷಾ ಶುಕ್ರವಾರ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.

ಕೊಪ್ಪಳ, ಫೆಬ್ರವರಿ 19: ಆಫ್ರಿಕಾದ ದಕ್ಷಿಣ ಸೂಡಾನ್ ದೇಶದಲ್ಲಿ ಉದ್ಯೋಗದಲ್ಲಿದ್ದ ಗಂಗಾವತಿಯ ಸೈಯದ್ ಫರೂಕ್ ಬಾಷಾ ಶುಕ್ರವಾರ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.

ದಕ್ಷಿಣ ಸೂಡಾನಿನ ಜ್ಯೂಬಾದಲ್ಲಿರುವ ಒಮಸ್ಕಿ ಸಾಯಿ ಇನ್ಫ್ರಾ ಕೊ ಲಿಮಿಟೆಡ್ ಎಂಬ ಕಂಪನಿಯಲ್ಲಿ ಸೈಯದ್ ಫಾರೂಕ್ ಬಾಷಾ ಸುಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರ ಕಾರ್ಯದರ್ಶಿ ಎಸ್.ಬಿ ಖಾದ್ರಿಯವರ ಎರಡನೇ ಮಗನಾಗಿದ್ದಾರೆ.[ಐಸಿಸ್ ನಂಟು, ಕಾಸರಗೋಡಿನ ವ್ಯಕ್ತಿ ದೆಹಲಿಯಲ್ಲಿ ಬಂಧನ]

 Gangavati resident Syed Farooq Basha shot dead in South Sudan

ಮೊದಲು ಎರಡು ವರ್ಷ ಜ್ಯೂಬಾದಲ್ಲಿದ್ದ ಫರೂಕ್ ಕಳೆದ ಮೂರು ತಿಂಗಳ ಹಿಂದೆಯಷ್ಟೆ ಗಂಗಾವತಿಗೆ ಬಂದು ಹೋಗಿದ್ದರು. ಶುಕ್ರವಾರ ನಮಾಜ ಮುಗಿಸಿ ಮಸೀದಿಯಿಂದ ಮರಳುತ್ತಿದ್ದಾಗ ಉಗ್ರರು ಫರೂಕ್ ಗೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದು ಬಂದಿದೆ.[ವಿಚಾರಣೆಗಾಗಿ ಕರೆತಂದ ಆರೋಪಿ ಮುನಿರಾಬಾದ್ ಠಾಣೆಯಿಂದ ಪರಾರಿ]

ಸದ್ಯ ಮೃತನ ಕುಟುಂಬಸ್ಥರು ಆಂಧ್ರ ಪ್ರದೇಶದ ಕರ್ನೂಲಿನಲ್ಲಿದ್ದಾರೆ. ಮೃತನ ದೇಹವನ್ನು ಭಾರತಕ್ಕೆ ಕಳುಹಿಸಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ಟರ್ ಮುಖಾಂತರ ಮನವಿ ಸಲ್ಲಿಸಿದ್ದಾರೆ. ಮಂಗಳವಾರದಂದು ಪಾರ್ಥಿವ ಶರೀರ ಗಂಗಾವತಿಗೆ ಬರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+