ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರ ತೆರಿಗೆ ಹಣ ದುರ್ಬಳಕೆ ಮಾಡಿದರೆ ಸಿದ್ದರಾಮಯ್ಯ?

By Prasad
|
Google Oneindia Kannada News

ಬೆಂಗಳೂರು, ಜೂನ್ 20 : ಕರ್ನಾಟಕದ ಜನರ ತೆರಿಗೆ ಹಣವನ್ನು ತಮ್ಮ ಸರಕಾರದ ಪ್ರಚಾರಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಭಾರತೀಯ ಜನತಾ ಪಕ್ಷ ಕರ್ನಾಟಕ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರಿಗೆ ದೂರು ನೀಡಿದೆ.
ಬಿಬಿಎಂಪಿ ಬಸ್ ಶೆಲ್ಟರ್ ಗಳಲ್ಲಿ, ಬಿಬಿಎಂಪಿಯ ಅನುಮತಿಯನ್ನು ಕೂಡ ಪಡೆಯದೆ ಸಿದ್ದರಾಮಯ್ಯನವರು ಸರಕಾರದ ಸಾಧನೆಯ ಕುರಿತು ಜಾಹೀರಾತು ನೀಡಿ 68.14 ಕೋಟಿ ರುಪಾಯಿಯಷ್ಟು ಸಾರ್ವಜನಿಕರ ಹಣವನ್ನು ಪೋಲು ಮಾಡಿದ್ದಾರೆ ಎಂದು ಬಿಜೆಪಿ ಕಾರ್ಪೊರೇಟರ್ ಎನ್ಆರ್ ರಮೇಶ್ ಅವರು ದೂರು ನೀಡಿದ್ದಾರೆ.

ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೆ ಕಿಡಿಕಾರಿದ ಎಚ್.ವಿಶ್ವನಾಥ್ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೆ ಕಿಡಿಕಾರಿದ ಎಚ್.ವಿಶ್ವನಾಥ್

siddaramaiah


ಕರ್ನಾಟಕ ಮುನಿಸಿಪಲ್ ಕಾಯ್ದೆಯ ಪ್ರಕಾರ, ಬಿಬಿಎಂಪಿ ಅಧೀನದಲ್ಲಿ ಬರುವ ಎಲ್ಲ ಜಾಹೀರಾತುಗಳಿಗೆ ಜಾಹೀರಾತುದಾರರು ಹಣ ನೀಡಬೇಕು. ಈ ಪ್ರಕರಣದಲ್ಲಿ ಜನರನ್ನು ಸುಲಭವಾಗಿ ತಲುಪುವ ಬಿಬಿಎಂಪಿಯ ಬಸ್ ನಿಲ್ದಾಣಗಳನ್ನು ಜಾಹೀರಾತಿಗಾಗಿ ಬಳಸಿಕೊಳ್ಳಲಾಗಿದ್ದರೂ ಸಿದ್ದರಾಮಯ್ಯ ಸರಕಾರ ಬಿಬಿಎಂಪಿಗೆ ಹಣ ನೀಡಿಲ್ಲ ಎಂದು ಆರೋಪಿಸಲಾಗಿದೆ.
ಕಾಂಗ್ರೆಸ್ಸಿಗೆ ಎಚ್ ವಿಶ್ವನಾಥ್ ರಾಜೀನಾಮೆ: ಮುಂದಿನ ನಡೆ ನಿಗೂಢ
ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಮತ್ತು ಅವರೇ ಸ್ಥಾಪಿಸಿದ ಭ್ರಷ್ಟಾಚಾರ ನಿಗ್ರಹ ದಳದಲ್ಲಿಯೂ ಒಟ್ಟಾರೆ 56 ದೂರುಗಳನ್ನು ನೀಡಲಾಗಿದೆ. ಆದರೆ, ಇಲ್ಲಿಯವರೆಗೆ ಯಾವ ಪ್ರಕರಣವನ್ನೂ ವಿಚಾರಣೆಗೆ ತೆಗೆದುಕೊಂಡಿಲ್ಲ. ಸಿದ್ದರಾಮಯ್ಯ ಅವರನ್ನು ರಕ್ಷಿಸಲು ಈ ತಂತ್ರ ಬಳಸಲಾಗುತ್ತಿದೆ ಎಂದೂ ಆರೋಪವಿದೆ.

English summary
Case registered against Siddaramaiah for using BBMP bus shelters for advertising achievements of Congress govt without permission. BJP has filed a complaint before Karnataka Lokayukta Vishwanath Shetty to probe against Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X