ರಾಜಿ ಸಂಧಾನ ಪ್ರಕರಣಗಳಲ್ಲಿನ ವಂಚನೆ ತಡೆಗೆ ಹೈಕೋರ್ಟ್ ಮಾರ್ಗಸೂಚಿ
ಬೆಂಗಳೂರು ಏ.8. ಇತ್ತೀಚಿನ ದಿನಗಳಲ್ಲಿ ರಾಜಿ ಸಂಧಾನ ಪ್ರಕರಣಗಳಲ್ಲಿ ಸಲ್ಲಿಸುತ್ತಿರುವ ಭೂ ದಾಖಲೆಗಳಲ್ಲಿ ವ್ಯಾಪಕ ವಂಚನೆ ನಡೆಯುತ್ತಿರುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಹೈಕೋರ್ಟ್ ಮಾರ್ಗಸೂಚಿಯನ್ನು ಹೊರಡಿಸಿದೆ.
ವಿಚಾರಣಾ ನ್ಯಾಯಾಲಯಗಳು ಆಸ್ತಿ ವಿವಾದಗಳಲ್ಲಿ ನಕಲಿ ದಾಖಲೆ ಆಧಾರದ ಮೇಲೆ ರಾಜಿ ತೀರ್ಪುಗಳನ್ನು ಜಾರಿಗೊಳಿಸಿದ್ದರಿಂದ ಆಗಿರುವ ವಂಚನೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ವಿಚಾರಣಾ ನ್ಯಾಯಾಲಯಗಳು ಮತ್ತು ಲೋಕ ಅದಾಲತ್‌ಗಳಲ್ಲಿ ರಾಜಿ ಮಾಡಿಕೊಳ್ಳಲು 9 ಮಾರ್ಗಸೂಚಿಗಳನ್ನು ನೀಡಿದೆ.
ಮುಂಬೈನ ರೇಣುಕಾ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ 2014ರ ಜುಲೈ 26ರಂದು ಲೋಕ ಅದಾಲತ್ ಅಂಗೀಕರಿಸಿದ ರಾಜಿ ಆದೇಶವನ್ನು ರದ್ದುಗೊಳಿಸಿದೆ ಮತ್ತು ಮೂಲ ದಾವೆಯನ್ನು ಮರುಸ್ಥಾಪನೆಗೆ ಆದೇಶ ನೀಡಿದೆ.

ಆಸ್ತಿಯ ಮೂಲ ಮಾಲೀಕರಾದ ರೇಣುಕಾ ಅವರು ತಮ್ಮ ಉತ್ತರಾಧಿಕಾರಿಯೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ತಮಗೆ ತಿಳಿಯದಂತೆ ಲೋಕ ಅದಾಲತ್‌ನಲ್ಲಿ ರಾಜಿ ಅರ್ಜಿ ಸಲ್ಲಿಸುವ ಮೂಲಕ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ತನ್ನ ವಿರುದ್ಧ ಪವರ್ ಆಫ್ ಅಟಾರ್ನಿ ಹೋಲ್ಡರ್ ರಮಾನಂದ್ ಪ್ರತಿನಿಧಿಯಾಗಿ ಹುಬ್ಬಳ್ಳಿಯ ಕೇಶ್ವಾಪುರದ ಗಜಾನನ್ ದಾವೆ ಹೂಡಿದ್ದರು. 2014ರ ಏಪ್ರಿಲ್ 25ರಂದು ರಮಾನಂದ್ ಆ ಜಿಪಿಎ ಕಾರ್ಯಗತಗೊಳಿಸಿದ್ದಾರೆ ಎನ್ನಲಾಗಿದೆ. ಆದರೆ ಒಪ್ಪಂದದ ನೈಜತೆ ಪ್ರಶ್ನಿಸಿ ಮೊಕದ್ದಮೆ ಹೂಡಿದ್ದಾರೆ.
ಮೊಕದ್ದಮೆಯಲ್ಲಿ ರೇಣುಕಾ ಅವರಿಗೆ ನೋಟಿಸ್ ಜಾರಿ ಮಾಡದೆ ರಮಾನಂದ್ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ನೋಟಿಸ್ ವಾಪಸ್ ಪಡೆಯುವ ಮುನ್ನವೇ ರಮಾನಂದ್ ರಾಜೀ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಲೋಕ ಅದಾಲತ್‌ಗೆ ಒಪ್ಪಿಸಲಾಗಿದ್ದು, ರಾಜಿ ಸಂಧಾನಕಾರರಿಂದ ರಾಜಿ ದಾಖಲಿಸಿಕೊಂಡು ರಾಜಿ ಸುಗ್ರೀವಾಜ್ಞೆ ಜಾರಿಗೊಳಿಸುವಂತೆ ಸೂಚಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ನ್ಯಾಯಾಲಯ ವಂಚನೆ ಆಗಿರುವುದನ್ನು ಪತ್ತೆ ಹಚ್ಚಿ, ಮುಂದಿನ ದಿನಗಳಲ್ಲಿ ಅಂತಹ ಪ್ರಕರಣಗಳು ಮರುಕಳಿಸದಂತೆ ನಿರ್ದೇಶನಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು ನೀಡಿ, ಅವುಗಳನ್ನು ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಮುನ್ನ ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಲಾಗಿದೆ.
9 ನಿರ್ದೇಶನಗಳೇನು?
*ರಾಜಿ ಅರ್ಜಿ ಸಲ್ಲಿಸಿದಾಗ ನ್ಯಾಯಾಲಯವು ಅದನ್ನು ದಾಖಲಿಸಬೇಕು ಆದರೆ ಲೋಕ ಅದಾಲತ್‌ಗೆ ವರ್ಗಾಯಿಸಬಾರದು.
*ನ್ಯಾಯಾಲಯದ ಮುಂದೆ ಯಾವುದೇ ಇತ್ಯರ್ಥವಾಗದಿದ್ದಲ್ಲಿ ಮತ್ತು ಕಕ್ಷಿದಾರರು ರಾಜಿ ಸಂಧಾನಕ್ಕೆ ಕೋರಿದರೆ ಮಾತ್ರ ವ್ಯಾಜ್ಯವನ್ನು ಲೋಕ ಅದಾಲತ್‌ಗೆ ವರ್ಗಾಯಿಸಬಹುದು.
*ವ್ಯಾಜ್ಯವನ್ನು ಲೋಕ ಅದಾಲತ್‌ಗೆ ವರ್ಗಾಯಿಸಿದಾಗ ಪ್ರತ್ಯೇಕ ಆದೇಶ ಪತ್ರವನ್ನು ನಿರ್ವಹಿಸಬೇಕು
*ಪಕ್ಷಗಾರರು ವೈಯಕ್ತಿಕವಾಗಿ ಅಂದರೆ ಖುದ್ದು ಹಾಜರಿರಬೇಕು ಮತ್ತು ಅವರ ಗುರುತನ್ನು ಪತ್ತೆ ಹಚ್ಚಿ ಪರಿಶೀಲನೆ ನಡೆಸಬೇಕು.
*ಸಂಬಂಧಪಟ್ಟ ಪಕ್ಷಗಾರರಿಗೆ ಅಂದರೆ ಪ್ರತಿವಾದಿಗಳಿಗೆ ಅಥವಾ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆಯೇ ಎಂದು ಖಾತ್ರಿಪಡಿಸಿಕೊಳ್ಳಿ
*ವಕೀಲರ ಮೂಲಕ ಜಿಪಿಎ ಮೂಲಪತ್ರತಿಯನ್ನು ಪರಿಶೀಲಿಸಿ ಮತ್ತು ಆದೇಶದಲ್ಲಿ ಅದನ್ನು ಉಲ್ಲೇಖಿಸಿದ ನಂತರ ಅದನ್ನು ಹಿಂತಿರುಗಿಸಬೇಕು
*ಜಿಪಿಎ ಗಿಂತ ಮುಖ್ಯವಾಗಿ ಆ ಅಧಿಕಾರ ಹೊಂದಿರುವ ವ್ಯಕ್ತಿಯ ಉಪಸ್ಥಿತಿ ಇರುವಂತೆ ನೋಡಿಕೊಳ್ಳಬೇಕು ಮತ್ತು ವಕೀಲರ ಸಮಕ್ಷಮದಲ್ಲಿ ಸಹಿಯನ್ನು ಪಡೆದುಕೊಳ್ಳಬೇಕು
* ರಾಜಿಯಾಗುವ ಕೇಸ್ ಗಳಲ್ಲಿ ವಾದಿ ಪ್ರತಿವಾದಿಗಳ ಗುರುತು ಖಾತ್ರಿಪಡಿಸಲು ಹೈಕೋರ್ಟ್ ಆದೇಶ
*ನೋಟಿಸ್ ಜಾರಿಯಾಗುವ ಮೊದಲೇ ಹಾಜರಾಗುವ ಪಕ್ಷಗಾರನ ಬಗ್ಗೆ ಎಚ್ಚರವಹಿಸಬೇಕು
Recommended Video













Click it and Unblock the Notifications