ಕರ್ನಾಟಕದ ನಾಲ್ಕು ನೂತನ ರೈಲುಗಳ ವೇಳಾಪಟ್ಟಿ

ಬೆಂಗಳೂರು, ಅ.31 : ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕಕ್ಕೆ ನಾಲ್ಕು ರೈಲುಗಳನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಸದಾನಂದ ಗೌಡ ಕಳೆದವಾರ ಹೇಳಿದ್ದರು. ಸದ್ಯ ರೈಲುಗಳ ವೇಳಾಪಟ್ಟಿ ಪ್ರಕಟವಾಗಿದ್ದು ನ.1ರ ಶನಿವಾರದಿಂದ ಈ ರೈಲುಗಳು ಸಂಚಾರವನ್ನು ಆರಂಭಿಸಲಿವೆ.

ಶನಿವಾರ ಯಶವಂತಪುರ-ಹೊಸೂರು (ಡೆಮು), ಬೆಂಗಳೂರು-ತುಮಕೂರು ಪ್ಯಾಸೆಂಜರ್, ಬೆಂಗಳೂರು-ಚಾಮರಾಜನಗರ ಮತ್ತು ಹುಬ್ಬಳ್ಳಿ-ಬೆಳಗಾವಿ ಪ್ಯಾಸೆಂಜರ್ ರೈಲುಗಳಿಗೆ ಚಾಲನೆ ದೊರೆಯಲಿದೆ. ನಾಲ್ಕು ರೈಲುಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಬಿಡುಗಡೆ ಮಾಡಲಾಗಿದೆ. [ರಾಜ್ಯಕ್ಕೆ 4 ನೂತನ ರೈಲುಗಳು]

Railways

ಯಶವಂತಪುರ-ಹೊಸೂರು ಬೆಳಗ್ಗೆ ಮತ್ತು ಮಧ್ಯಾಹ್ನ ವಿಶೇಷ ರೈಲುಗಳು ಸಂಚರಿಸುತ್ತಿತ್ತು. ಅದರಲ್ಲಿ ಮಧ್ಯಾಹ್ನದ ರೈಲನ್ನು ವಿಶೇಷ ರೈಲಿಗೆ ಬದಲಾಗಿ ಪ್ರತಿದಿನವೂ ಸಂಚರಿಸುವಂತೆ ಬದಲಾವಣೆ ಮಾಡಲಾಗಿದೆ. ಇನ್ನು ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಯಶವಂತಪುರ-ತುಮಕೂರು ರೈಲನ್ನು ಬೆಂಗಳೂರು ಸಿಟಿ-ತುಮಕೂರು ಆಗಿ ಬದಲಾವಣೆ ಮಾಡಲಾಗಿದೆ. [ಮೋದಿ ಕನಸಿನ ರೈಲು ಓಡಾಟಕ್ಕೆ ಮುಹೂರ್ತ ಫಿಕ್ಸ್]

ಹೊಸ ರೈಲುಗಳ ವೇಳಾಪಟ್ಟಿ ಹೀಗಿದೆ

* ಯಶವಂತಪುರ-ಹೊಸೂರು (76523/24) ಡೀಸೆಲ್ ಮಲ್ಟಿಪಲ್ ಯುನಿಟ್ (ಡೆಮು) ರೈಲು ಪ್ರತಿದಿನ ಮಧ್ಯಾಹ್ನ 2.55ಕ್ಕೆ ಯಶವಂತಪುರದಿಂದ ಹೊರಟು ಸಂಜೆ 4.30ಕ್ಕೆ ಹೊಸೂರು ತಲುಪುತ್ತದೆ. ಹೊರಟು ಲೊಟ್ಟೆಗೊಲ್ಲಹಳ್ಳಿ, ಬಾಣಸವಾಡಿ, ಬೆಳ್ಳಂದೂರು ರೋಡ್, ಕಾರ್ಮೆಲ್‌ರಾಮ್, ಆನೇಕಲ್ ಮಾರ್ಗವಾಗಿ ಹೊಸೂರು ತಲುಪುವ ರೈಲು ಸಂಜೆ 5.50ಕ್ಕೆ ಹೊಸೂರಿನಿಂದ ಹೊರಟು ಸಂಜೆ 7.20ಕ್ಕೆ ಯಶವಂತಪುರ ಮರಳಲಿದೆ.

* ಬೆಂಗಳೂರು-ತುಮಕೂರು ಪ್ಯಾಸೆಂಜರ್ (56925/26) ಬೆಂಗಳೂರು ಸಿಟಿ ನಿಲ್ದಾಣದಿಂದ ಬೆಳಗ್ಗೆ 5.30ಕ್ಕೆ ಹೊರಟು 6.50ಕ್ಕೆ ತುಮಕೂರು ನಿಲ್ದಾಣ ತಲುಪಲಿದೆ. ತುಮಕೂರಿನಿಂದ ಬೆಳಗ್ಗೆ 8.15ಕ್ಕೆ ಹೊರಟು 9.50ಕ್ಕೆ ಬೆಂಗಳೂರು ತಲುಪಲಿದೆ.

* ಬೆಂಗಳೂರು-ಚಾಮರಾಜನಗರ (56281/81) ಪ್ಯಾಸೆಂಜರ್ ಬೆಳಗ್ಗೆ 6.55ಕ್ಕೆ ಚಾಮರಾಜನಗರದಿಂದ ಹೊರಡುವ ರೈಲು ಮಧ್ಯಾಹ್ನ 12ಕ್ಕೆ ಬೆಂಗಳೂರು ತಲುಪುತ್ತದೆ. ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 8.30ಕ್ಕೆ ಚಾಮರಾಜನಗರ ತಲುಪುತ್ತದೆ.

* ಹುಬ್ಬಳ್ಳಿ-ಬೆಳಗಾವಿ (56921/22) ಪ್ಯಾಸೆಂಜರ್ ರೈಲು ಬೆಳಗ್ಗೆ 6.30ಕ್ಕೆ ಬೆಳಗಾವಿಯಿಂದ ಹೊರಟು 9.50ಕ್ಕೆ ಹುಬ್ಬಳ್ಳಿ ತಲುಪುತ್ತದೆ. ಸಂಜೆ 6ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 9.30ಕ್ಕೆ ಬೆಳಗಾವಿ ತಲುಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+