ಟ್ವಿಟ್ಟರ್: ಕೇಂದ್ರ ಸರಕಾರದ ಯಾವ ಸಚಿವರನ್ನೂ ಫಾಲೋ ಮಾಡದ ಗೌಡ್ರು, ಫಾಲೋ ಮಾಡುತ್ತಿರುವ 10 ಅಕೌಂಟ್ ಗಳು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಇಂದು (ಮೇ 18) 87ನೇ ಹುಟ್ಟು ಹಬ್ಬದ ಸಂಭ್ರಮ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲರೂ, ನಾಡಿನ ಹಿರಿಯ ಜೀವಕ್ಕೆ ಶುಭಾಶಯ ಕೋರಿದ್ದಾರೆ.

ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮುಖ್ಯಮಂತ್ರಿ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆದಿಯಾಗಿ ಎಲ್ಲರೂ, ಗೌಡ್ರಿಗೆ ಹ್ಯಾಪ್ಪೀ ಬರ್ತಡೇ ಎಂದಿದ್ದಾರೆ.

ಮೊದಮೊದಲು ಟ್ವಿಟ್ಟರ್ ನಲ್ಲಿ ಅಷ್ಟೇನೂ ಸಕ್ರಿಯವಾಗಿರದ ಗೌಡ್ರು, ಇತ್ತೀಚೆಗೆ ಆಕ್ಟೀವ್ ಆಗಿದ್ದಾರೆ. ಗೌಡ್ರನ್ನು ಟ್ವಿಟ್ಟರ್ ನಲ್ಲಿ ಸುಮಾರು 66 ಸಾವಿರ ಜನ ಹಿಂಬಾಲಿಸುತ್ತಿದ್ದಾರೆ.

ದೇವೇಗೌಡ್ರ ತಮ್ಮ ವೈಯಕ್ತಿಕ ಟ್ವಿಟ್ಟರ್ ಅಕೌಂಟ್ ನಲ್ಲಿ ಫಾಲೋ ಮಾಡುತ್ತಿರುವುದು ಕೇವಲ ಹತ್ತು ಜನರನ್ನು. ಮೋದಿ ನೇತೃತ್ವದ ಕೇಂದ್ರ ಸರಕಾರದ ಯಾರನ್ನೂ ಹಿಂಬಾಲಿಸದ (ಕಂಪಲ್ಸರಿ ಅಲ್ಲ) ಗೌಡ್ರು, ಫಾಲೋ ಮಾಡುತ್ತಿರುವ ಹತ್ತು ಅಕೌಂಟ್ ಗಳು ಹೀಗಿವೆ:

ಶುಭಾಶಯ ಕೋರಿದ ಸಿಎಂ ಯಡಿಯೂರಪ್ಪ

ಶುಭಾಶಯ ಕೋರಿದ ಸಿಎಂ ಯಡಿಯೂರಪ್ಪ

"ಭಾರತದ ಪ್ರಧಾನಮಂತ್ರಿಗಳಾಗಿ, ಕರ್ನಾಟಕದ ಮುಖ್ಯಮಂತ್ರಿಗಳಾಗಿ ಮಹತ್ವದ ಸೇವೆ ಸಲ್ಲಿಸಿರುವ, ಜನತಾದಳ (ಜಾತ್ಯತೀತ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ ರಾಜಕೀಯ ಮುತ್ಸದ್ಧಿ ಸನ್ಮಾನ್ಯ ಶ್ರೀ @H_D_Devegowda ರವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಕಾಮನೆಗಳು. ದೇವರ ಅನುಗ್ರಹ ತಮ್ಮ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ" ಇದು ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿರುವ ಟ್ವೀಟ್.

ಕೇಂದ್ರ ಸರಕಾರದ ಯಾವ ಸಚಿವರನ್ನೂ ಟ್ವಿಟ್ಟರ್ ನಲ್ಲಿ ಫಾಲೋ ಮಾಡದ ಗೌಡ್ರು

ಕೇಂದ್ರ ಸರಕಾರದ ಯಾವ ಸಚಿವರನ್ನೂ ಟ್ವಿಟ್ಟರ್ ನಲ್ಲಿ ಫಾಲೋ ಮಾಡದ ಗೌಡ್ರು

ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆದಿಯಾಗಿ, ಕೇಂದ್ರ ಸರಕಾರದ ಆಯಕಟ್ಟಿನ ಯಾವ ಸಚಿವಾಲಯವನ್ನೂ ದೇವೇಗೌಡ್ರು, ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿಲ್ಲ. ರಾಷ್ಟ್ರಪತಿ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳ ಅಧಿಕೃತ ಅಕೌಂಟ್ ಫಾಲೋ ಮಾಡುತ್ತಿರುವ ಗೌಡ್ರು, ಪ್ರಧಾನಿಗಳ ಅಧಿಕೃತ ಅಕೌಂಟ್ ಫಾಲೋ ಮಾಡುತ್ತಿಲ್ಲ.

ಗೌಡ್ರು ಫಾಲೋ ಮಾಡುತ್ತಿರುವ ಹತ್ತು ಅಕೌಂಟ್ ಗಳು - 1

ಗೌಡ್ರು ಫಾಲೋ ಮಾಡುತ್ತಿರುವ ಹತ್ತು ಅಕೌಂಟ್ ಗಳು - 1

1. ಜಾತ್ಯಾತೀತ ಜನತಾದಳ
2. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
3. ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು
4. ಒರಿಸ್ಸಾದ ಸಿಎಂ ನವೀನ್ ಪಟ್ನಾಯಕ್
5. ಕೇರಳದ ಸಿಎಂ ಪಿಣರಾಯಿ ವಿಜಯನ್

ಗೌಡ್ರು ಫಾಲೋ ಮಾಡುತ್ತಿರುವ ಹತ್ತು ಅಕೌಂಟ್ ಗಳು - 2

ಗೌಡ್ರು ಫಾಲೋ ಮಾಡುತ್ತಿರುವ ಹತ್ತು ಅಕೌಂಟ್ ಗಳು - 2

6. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
7. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್
8. ಭಾರತದ ರಾಷ್ಟ್ರಪತಿಗಳ ಅಧಿಕೃತ ಅಕೌಂಟ್
9. ಕರ್ನಾಟಕದ ಮುಖ್ಯಮಂತ್ರಿಗಳ ಅಧಿಕೃತ ಅಕೌಂಟ್
10. ಮಾಜಿ ಕರ್ನಾಟಕದ ಸಿಎಂ ಎಚ್.ಡಿ.ಕುಮಾರಸ್ವಾಮಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+