ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಚೆಕ್ಕನ್ನು ನಾನು ಹಿಂಪಡೆಯಲು ಯಾರಿಗೂ ಹೇಳಿಲ್ಲ'

|
Google Oneindia Kannada News

ಅದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ 1 ಲಕ್ಷ ರೂ.ಗಳ ಚೆಕ್ಕನ್ನು ಸಂತ್ರಸ್ತ ಕುಟುಂಬಕ್ಕೆ ಶ್ರೀ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಈ ವಿಷಯ ಅದೇ ದಿನ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಇದಾದ ನಂತರ ಮರುದಿನ ಇದಕ್ಕೆ ಸಂಬಂಧಪಟ್ಟಂತೆ ಕೆಲ ರಾಜಕೀಯ ಮುಖಂಡರು ಇಲ್ಲ ಸಲ್ಲದ ಆರೋಪ ಮಾಡಿರುವುದು ಮಾಧ್ಯಮದ ಮುಖಾಂತರ ತಿಳಿಯಿತು. [ಚೆಕ್ ವಿವಾದ : ಮೌನ ಮುರಿದ ಸಿದ್ದರಾಮಯ್ಯ]

ಈ ಪತ್ರದ ಮೂಲಕ ಸ್ಪಷ್ಟ ಪಡಿಸುವುದೇನೆಂದರೆ ಆ ಚೆಕ್ಕನ್ನು ನಾನು ಹಿಂಪಡೆಯಲು ಯಾರಿಗೂ ಹೇಳಿಲ್ಲ. ರೈತರ ಭಾವನೆಗಳ ಜೊತೆ ಆಟ ಆಡುವ ವ್ಯಕ್ತಿತ್ವವು ನನ್ನದಲ್ಲ. ನನ್ನ ಕಾರ್ಯನಿಷ್ಠೆ , ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆ, ಮನಸ್ಸಿಗೆ ಅಗಾಧ ನೋವುಂಟು ಮಾಡಿದೆ. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ನನಗೂ, ಮಾಧ್ಯಮಗಳಲ್ಲಿ ಪ್ರಸಾರವಾದ ವಿಷಯಕ್ಕೂ ಯಾವುದೇ ಸಂಬಂಧ ಇಲ್ಲ.

Former MP Ramya reacts on compensation cheque issue

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಸಹಾಯ ಮಾಡಿ ಅವರಿಗೆ ಆತ್ಮಸ್ಥೈರ್ಯ ತುಂಬುವುದು ನನ್ನ ಉದ್ದೇಶವಾಗಿತ್ತು. ಕರ್ನಾಟಕಕ್ಕೆ ರಾಹುಲ್ ಗಾಂಧಿಯವರ ಭೇಟಿ ವೇಳೆ ರಾಜ್ಯ ಸರ್ಕಾರ ರೈತರಿಗೆ, ಮಹಿಳೆಯರಿಗೆ, ವೃದ್ಧರಿಗೆ ಕೆಲವೊಂದು ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದೆ. ರೈತರ ಕಷ್ಟದಲ್ಲಿ ಅವರೊಂದಿಗೆ ಭಾಗಿಯಾಗುವ ಒಂದು ಸದುದ್ದೇಶವನ್ನು ನನ್ನ ಮಂಡ್ಯದ ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. [ಮಂಡ್ಯ ರಾಹುಲ್ ಭೇಟಿಯ ಚಿತ್ರಗಳು]

ಈಗ ಪಾಂಡವಪುರದ ಶೋಭಾ ಅವರು ಮತ್ತು ಕೊತ್ತತ್ತಿ ಗ್ರಾಮದ ಲಕ್ಷ್ಮೀ ಅವರ ಕುಟುಂಬದ ಸದಸ್ಯರು ಮತ್ತು ಎರಡೂ ಗ್ರಾಮದವರು KPCC ವತಿಯಿಂದ ನೀಡಲಾದ ಚೆಕ್ ಅನ್ನು ಅವರ ದೊಡ್ಡ ಮನಸ್ಸಿನಿಂದ ಪಡೆಯುವುದರೊಂದಿಗೆ ಎಲ್ಲ ರಾಜಕೀಯದ ಕಟ್ಟು ಕಥೆಗಳಿಗೆ ತೆರೆ ಎಳೆದಿದ್ದಾರೆ.

ಕಡೆಯದಾಗಿ ಹೇಳುವುದೇನೆಂದರೆ ಸಂಸದರು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುವುದನ್ನು ನಿಲ್ಲಿಸಿ. ರಾಜ್ಯದ ರೈತರ ಸಾಲ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 29000 ಕೋಟಿ ಇದ್ದು, ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಅರ್ಧದಷ್ಟಾದರೂ ಸಾಲ ಮನ್ನಾ ಮಾಡಲು ವಿನಂತಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸಂಸದರು ತಮ್ಮ ಸಂಸದ ಸ್ಥಾನದ ಜವಾಬ್ದಾರಿ ಅರಿತು ಮಂಡ್ಯ ಲೋಕಸಭಾ ಕ್ಷೇತ್ರದ ರೈತರ ಹಾಗೂ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಲಿ ಎಂದು ಆಶಿಸುತ್ತೇನೆ.

ನಿಮ್ಮ ನಂಬಿಕೆ, ನನಗೆ ಸ್ಪೂರ್ತಿ,
ನಿಮ್ಮ ಪ್ರೀತಿ, ನನ್ನ ಶಕ್ತಿ .
ನೀವೆಲ್ಲರೂ ಇನ್ನು ಮೇಲೆ ದಯವಿಟ್ಟು, ಯಾವುದೇ ಗಾಳಿ ಸುದ್ದಿಗೆ ಕಿವಿ ಕೊಡಬೇಡಿ ಎಂದು ವಿನಂತಿಸುತ್ತೇನೆ.
ನಿನ್ನ ಕಣ್ ಕಿವಿ ಮನಗಳಿರುವಷ್ಟು ನಿನ್ನ ಜಗ
ನಿನ್ನನಳಿಸುವ ನಗಿಸುವೆಲ್ಲ ನಿನ್ನಂಶ !!
ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ
ಸಣ್ಣತನ ಸವೆಯುವುದು ಮಂಕುತಿಮ್ಮ !!
ಧನ್ಯವಾದಗಳೊಂದಿಗೆ,
ನಿಮ್ಮ ಪ್ರೀತಿಯ - ರಮ್ಯಾ

English summary
Former MP Ramya today reacted sharply on the issue of a compensation cheque of Rs 1 lakh issued by KPCC to family of the farmer Lokesh in Mandya district district has been withdrawn and hand over to the family on Thursday, October 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X