ಕೋಡಿಮಠಕ್ಕೆಮಾಜಿ ಸಚಿವರ ರಹಸ್ಯ ಭೇಟಿ
ಅರಸೀಕೆರೆ, ಅ.20: ಮಾಜಿ ಸಚಿವ ವಿ. ಸೋಮಣ್ಣ ಸುಕ್ಷೇತ್ರ ಕೋಡಿಮಠಕ್ಕೆ ಭೇಟಿ ನೀಡಿ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯೊಂದಿಗೆ ಕೆಲ ಕಾಲ ರಹಸ್ಯ ಮಾತುಕತೆ ನಡೆಸಿದ ಸಂಗತಿ ಹೊರಬಿದ್ದಿದೆ. ಶನಿವಾರ ಸೋಮಣ್ಣ ಅವರು ಮಠಕ್ಕೆ ಬಂದು ಹೋಗಿದ್ದಾರೆ ಆದರೆ, ಭೇಟಿ ಉದ್ದೇಶ ಮಾತ್ರ ಬಹಿರಂಗಗೊಂಡಿಲ್ಲ, ಸೋಮಣ್ಣ ಅವರ ರಹಸ್ಯ ಭೇಟಿ ರಾಜಕೀಯ ವಲಯದಲ್ಲಿ ಹಲವರು ಹುಬ್ಬೇರಿಸಿದೆ.
ಈ ರಹಸ್ಯ ಮಾತುಕತೆಯಲ್ಲಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಸೇರ್ಪಡೆಯಾಗುವರೇ ಅವರ ಆಗಮನದಿಂದ ಆ ಪಕ್ಷಕ್ಕೆ ಅನುಕೂಲವಾಗುವುದೆ, ತಾವು ಬಿಜೆಪಿಯಲ್ಲಿ ಮುಂದುವರಿಯುವುದು ಸೂಕ್ತವೇ ಇಲ್ಲವೇ ಹಾಗೂ ನರೇಂದ್ರ ಮೋದಿ ಪ್ರಧಾನಿಯಾಗುವರೇ ಇವೇ ಮುಂತಾದ ವಿಚಾರಗಳ ಬಗ್ಗೆ ಸ್ವಾಮೀಜಿ ಜತೆ ಮಾಜಿ ಸಚಿವರು ರಹಸ್ಯ ಮಾತುಕತೆ ನಡೆಸಿದರು ಎನ್ನಲಾಗಿದೆ.
ಕೋಡಿಮಠ ಭೇಟಿ ಬಗ್ಗೆ ಸೋಮಣ್ಣ ಉತ್ತರಿಸಿ, 'ನಾನು ಈ ಹಿಂದಿನಿಂದಲೂ ಕೋಡಿಮಠದ ಭಕ್ತನಾಗಿ ಹಲವಾರು ಬಾರಿ ಭೇಟಿ ನೀಡಿದ್ದೀನಿ. ಈ ಬಾರಿಯೂ ಸ್ವಾಮೀಜಿ ಆಶೀರ್ವಾದ ಪಡೆದು ಶಿವಲಿಂಗಜ್ಜಯ್ಯನವರ ಗದ್ದುಗೆಗೆ ನಮಿಸಲು ಬಂದಿದ್ದೇನೆಯೇ ಹೊರತು ಇದರಲ್ಲಿ ಯಾವುದೇ ರಾಜಕಾರಣ ಇಲ್ಲ' ಎಂದರು.

ಕುತೂಹಲಕಾರಿ ಭೇಟಿ: ಬಿಜೆಪಿ ಆಂತರಿಕ ಕಚ್ಚಾಟ ಹಾಗೂ ಪಕ್ಷದ ಇಬ್ಭಾಗದಿಂದ ಬೇಸತ್ತು ಪಕ್ಷದಿಂದ ಹೊರನಡೆದು ಕಾಂಗ್ರೆಸ್ ಸೇರಿದ್ದ ಜಿಪಂ ಮಾಜಿ ಅಧ್ಯಕ್ಷ ಗೀಜಿಹಳ್ಳಿ ಗುರುಸಿದ್ದಪ್ಪ ಹಾಗೂ ತಾ. ಬಿಜೆಪಿ ಮಾಜಿ ಅಧ್ಯಕ್ಷ ಕಾಟೀಕೆರೆ ಪ್ರಸನ್ನಕುಮಾರ್ ಅವರನ್ನು ಕೂಡಾ ಸೋಮಣ್ಣ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸೋಮಣ್ಣ ಅವರು ನಾನು ಕಾಂಗ್ರೆಸ್ ನಲ್ಲಿ ರಾಜನಾಗಿ ಮೆರೆಯುತ್ತಿದ್ದೆ. ಅದನ್ನೆಲ್ಲ ತೊರೆದು ಯಡಿಯೂರಪ್ಪನವರ ಹಿಂದೆ ಬಂದು ಬಿಜೆಪಿ ಸೇರಿದೆ ಎಂದು ಹೇಳಿದ್ದರು. ಕೋಡಿಮಠದಲ್ಲಿ ಔಪಚಾರಿಕವಾಗಿ ಮಾತನಾಡುವಾಗ ಮನೆಮನೆಗೆ ತೆರಳಿ ಚಪಾತಿ ಎತ್ತುವ ಸಂಸ್ಕೃತಿಯನ್ನು ಬಿಜೆಪಿ ಇನ್ನೂ ಬಿಟ್ಟಿಲ್ಲ, ಈ ಚಡ್ಡಿಗಳ ಕಾಟ ಸಾಕಾಗಿದೆ ಎಂದಿದ್ದಲ್ಲದೆ ಕಾರ್ಯಕರ್ತರನ್ನು ಸೌಜನ್ಯಕ್ಕಾದರೂ ವಿಶ್ವಾಸದಿಂದ ಮಾತನಾಡಿಸದಿದ್ದುದು ಕಾರ್ಯಕರ್ತರ ಮುನಿಸಿಗೆ ಕಾರಣವಾಗಿತ್ತು.
ಇದರಿಂದ ಕೆರಳಿದ ಅನೇಕ ಕಾರ್ಯಕರ್ತರು ಕಾಂಗ್ರೆಸ್ ನಲ್ಲಿ ಸೋತು ಸುಣ್ಣವಾಗಿ ಮನೆ ಸೇರಿದ್ದ ಸೋಮಣ್ಣನನ್ನು ಬಿ.ಎಸ್.ವೈ ಕರೆತಂದು ಮಂತ್ರಿ ಮಾಡಿ ಈಗ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದ್ದಾರೆ. ಆದರೂ ಪಕ್ಷದ ಬಗ್ಗೆ ಇವರಿಗೇ ಗೌರವವಿಲ್ಲ. ಇವರು ಕಾಂಗ್ರೆಸ್ ಸೇರಲು ಜ್ಯೋತಿಷ್ಯ ಕೇಳಲು ಬಂದಿದ್ದಾರೆ ಎಂದು ಜರಿದ ಕಾರ್ಯಕರ್ತರು ವಿ.ಸೋಮಣ್ಣ ಜ್ಯೋತಿಷ್ಯ ಕೇಳಲು ಹೋದ ತಕ್ಷಣವೇ ಹೇಳದೆ ಕೇಳದೆ ವಾಪಸ್ಸಾದರು ಎನ್ನಲಾಗಿದೆ. ಸೋಮಣ್ಣ ಅವರು ಕೇಳಿದ ಪ್ರಶ್ನೆ ಏನು? ಇದಕ್ಕೆ ಸ್ವಾಮೀಜಿಗಳು ಏನು ಉತ್ತರಿಸಿದರು ಎಂಬುದು ಇನ್ನೂ ತಿಳಿಯಬೇಕಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications