ಬಿಜೆಪಿಯವರು ನಮ್ಮ ಬಳಿ ಸಿಡಿ ಇದೆ ಎಂದು ಹೇಳಿ, ಬಟ್ಟೆ ಹಾವು ತೋರಿಸುತ್ತಿದ್ದಾರೆ : ಪ್ರಿಯಾಂಕ್‌ ಖರ್ಗೆ

ರಾಜ್ಯ ಬಿಜೆಪಿ ನಾಯಕರಲ್ಲಿ ಸಮರ್ಥತೆ ಕಂಡು ಬರುತ್ತಿಲ್ಲ ಹೀಗಾಗಿ ಕೇಂದ್ರದಿಂದ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ, ನಡ್ದಾ ಅವರು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

ಕಲಬುರಗಿ,ಜನವರಿ31: ಬಿಜೆಪಿಯವರು ನಮ್ಮ ಬಳಿ ಸಿಡಿ ಇದೆ ಎಂದು ಹೇಳಿ, ಬಟ್ಟೆ ಹಾವು ತೋರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಂಗಳವಾರ ಕಲಬುರಗಿಯಲ್ಲಿ ರಮೇಶ್‌ ಜಾರಕಿಹೊಳಿ ಸಿಡಿ ಕೇಸ್‌ಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಯವರ ಬಳಿ ಸಿಡಿ ಇದ್ದರೆ ಕಳೆದ ನಾಲ್ಕು ವರ್ಷದಿಂದ ಐಟಿ ಇಡಿ ಪ್ರಕರಣದ ತನಿಖೆ ನಡೆಯುತ್ತಿದೆ. ಇವರ ಬಳಿ ಸಿಡಿ ಇದ್ರೆ ಈಗಾಗಲೇ ಬಿಡುಗಡೆ ಮಾಡಬೇಕಿತ್ತು. ಬಿಜೆಪಿ ಅವರ ಬಳಿ ಸಿಡಿಯಿಲ್ಲ ಅವರು ದಾರಿ ತಪ್ಪಿಸಲು ಬುಟ್ಟಿಯಲ್ಲಿ ಹಾವಿದೆ ಎಂದು ಬಟ್ಟೆ ಹಾವು ಬಿಡ್ತಿದ್ದಾರೆ. ಸ್ವತಃ ಡಿ ಕೆ ಶಿವಕುಮಾರ್ ಅವರೇ ಹೇಳಿದ್ದಾರೆ ಧಾರಾಳವಾಗಿ ಕೊಡಿ ಎಂದು ಬಿಜೆಪಿಯವರಿಗೆ ಕಾನೂನಿನ ಅರಿವೆ ಇಲ್ಲ ಎಂದು ಹೇಳಿದರು.

ಇನ್ನೂ ವೈಯಕ್ತಿಕ ಕೇಸ್‌ಗಳನ್ನು ಸಿಬಿಐಗೆ ನೀಡಲು ಸಾಧ್ಯವಿಲ್ಲ. ಈಗಾಗಲೇ ತನಿಖೆ ನಡೆದಿದೆ ನಿಮ್ಮ ಬಳಿ ಸಿಡಿ ಇದ್ರೆ ಕೊಡಿ ಅದರ ತನಿಖೆಯಗಾಲಿ. ಯಾವುದೇ ಹಗರಣದ ಬಗ್ಗೆ ನಡೆದರೆ ನಿಮ್ಮ ಕಾಲದಲ್ಲಿ ನಡೆದಿಲ್ವಾ ಅಂತಾರೆ. ಪಿಎಸ್ಐ ಹಗರಣದ ಬಗ್ಗೆ ಕೇಳಿದ್ರೆ ಕಾಂಗ್ರೆಸ್‌ ಹೆಸರು ಬರುತ್ತದೆ ಎನ್ನುತ್ತಾರೆ. ನಿಮ್ಮ ಬಳಿ ಏನಿದೆ ಕೊಡಿ ತನಿಖೆಯಾಗಲಿ ಎಲ್ಲರ ತಪ್ಪು ಹೊರ ಬರುತ್ತೆ. ಕರ್ನಾಟಕದ ಜನರು ಇದರಿಂದ ಬೇಸತ್ತಿದ್ದಾರೆ ಎಂದರು.

Former Minister Priyank kharge Slams BJP leader

ಪಿ ರಾಜು ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಿಂದ ಯಾರೇ ಅಭ್ಯರ್ಥಿ ಸ್ಪರ್ಧಿಸಿದರೂ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ನಾನು ಸಿದ್ಧನಿದ್ದೇನೆ. ರಾಜ್ಯ ಬಿಜೆಪಿ ನಾಯಕರಲ್ಲಿ ಸಮರ್ಥತೆ ಕಂಡು ಬರುತ್ತಿಲ್ಲ ಹೀಗಾಗಿ ಕೇಂದ್ರದಿಂದ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ, ನಡ್ದಾ ಅವರು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+