ದೇಶ ಉಳೀಬೇಕು ಅಂದ್ರೆ 2 ಮಕ್ಕಳು ಸಾಕಾಗೋದಿಲ್ಲ,ಕನಿಷ್ಠ ನನ್ನ ತರಹ 5 ಮಕ್ಕಳನ್ನಾದರೂ ಮಾಡಿ ಎಂದ ಈಶ್ವರಪ್ಪ

ಶಿವಮೊಗ್ಗ, ಅಕ್ಟೋಬರ್‌ 12: ಈ ಕಾನೂನು ಒಪ್ಪುವುದಾದರೇ ಇಲ್ಲಿ ಇರಿ ಇಲ್ಲ ಪಾಕಿಸ್ತಾನಕ್ಕೆ ಹೋಗಿ. ಕನಿಷ್ಠ ಐದು ಮಕ್ಕಳಾದರೂ ಮಾಡಿಕೊಳ್ಳಿ, ನನಗೆ ಐದು ಮಕ್ಕಳು,ಎಂಟು ಮೊಮ್ಮಕ್ಕಳು.
ನೀವು ಅಷ್ಠಾದರೂ ಮಾಡಿಕೊಳ್ಳಿ ಎಂದು ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಹೇಳಿದರು.

ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದ ಕುತಂತ್ರಿ ಸಿಎಂ ಸಿದ್ದರಾಮಯ್ಯ, ಅವರ ಮೈ ಯಲ್ಲಿ ಹಸಿರು ರಕ್ತ ಹರಿತ್ತಿದೆಯೋ.. ಹಿಂದೂ ರಕ್ತ ಹರಿತೀದಿಯೋ ತೀರ್ಮಾನ ಮಾಡಬೇಕು ಎಂದರು.

former-minister-ks-eshwarappa

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಇನ್ನೂ ಶಾಂತಿ ಸಿಕ್ಕಿಲ್ಲ.ಅವರಿಗೆ ಹಿಂದೂಸ್ತಾನ್, ಪಾಕಿಸ್ತಾನ ಎಂಬುದು ಬೇಡವಾಗಿತ್ತು.‌ ದೇಶದಲ್ಲಿ ಹಸಿರು ಬಣ್ಣ ತೆಗೆದು ಕೇಸರಿ ಬಣ್ಣ ಬಳಿಯಬೇಕಿದೆ. ಸಿದ್ದರಾಮಯ್ಯನವರೆ ಹಸಿರು ಬೇಕೋ..? ಕೇಸರಿ ಬೇಕೋ ತೀರ್ಮಾನಿಸಿ. ನೀವು ಆರಿಸಿಕೊಳ್ಳೋದೆ ಹಸಿರು ಎಂದು ನನಗೆ ಗೊತ್ತು. ನೀವು ಮೊದಲು ದೇವಸ್ಥಾನಕ್ಕೆ ಹೋಗ್ತಾ ಇರಲಿಲ್ಲ.. ಈಗ ಕದ್ದು ಹೋಗ್ತಿರಿ. ಹೇಡಿ ಹಿಂದೂ ಕೈಯಲ್ಲಿ ರಾಷ್ಟ್ರಭಕ್ತ ಹಿಂದೂಗಳ ರಕ್ಷಣೆ ಮಾಡಲು ಸಾಧ್ಯವಿಲ್ಲ.

ಏಕರೂಪ ನಾಗರಿಕ ಸಂಹಿತೆ ಮಾಡಲು ಮೋದಿ ಹೊರಟಿದ್ದಾರೆ. ಒಂದೇ ಹೆಂಡತಿ- ಎರಡು ಮಕ್ಕಳು.‌ ಸಾಬ್ರಿಗಿಂತ ಮೊದಲು ಕಾಂಗ್ರೆಸ್ ನವರೇ ಇದನ್ನ ವಿರೋಧ ಮಾಡ್ತಾರೆ. ನಮಗೆಲ್ಲಾ ನಾವು ಇಬ್ಬರು- ನಮಗೆ ಇಬ್ಬರು. ಆದರೆ, ಮುಸಲ್ಮಾನರಿಗೆ ಹಮ್ ಪಾಂಚ್, ಹಮಾರೆ ಪಚ್ಚೀಸ್. ಇವರು ಐದು,‌ ಇವರಿಗೆ 25 ಮಕ್ಕಳು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರಿಗೆ ಮುಸಲ್ಮಾನರು ಜಾಸ್ತಿಯಾದ್ರೇ ಓಕೆ. ಆದ್ರೇ, ಹಿಂದೂಗಳು ಬೆಳಯಬಾರದು.‌

ನನಗೆ ಐದು ಮಕ್ಕಳು- ಎಂಟು ಮೊಮ್ಮಕ್ಕಳು. ಕನಿಷ್ಟ ಅಷ್ಟಾದರೂ ನಮ್ಮ‌ ಹಿಂದೂಗಳು ಮಾಡಿಕೊಳ್ಳಲಿ. ನಮ್ಮ ಜೊತೆಗೆ ಭಾರತ್ ಮಾತಾ ಕೀ ಜೈ ಅನ್ನಬೇಕು. ಇಲ್ಲಿಯ ಅನ್ನ ತಿಂದೂ ಪಾಕಿಸ್ತಾನಕ್ಕೆ ಜೈ ಎಂದರೇ ಬಿಡಲ್ಲ ಎಂದಿದ್ದು ಬಿಜೆಪಿ. ರಾಗಿಗುಡ್ಡದ ಮುಸಲ್ಮಾನರ ಮನೆಗಳಲ್ಲಿ ಲಾಂಗ್, ಮಚ್ಚು ಇಟ್ಕೊಂಡಿದ್ದಾರೆ. ಅವರಲ್ಲಿ ಎಷ್ಟು ಮಂದಿ ಮೇಲೆ ಏಫ್ಐಆರ್ ಅಗಿದೆ..? ಎಂದು ಪ್ರಶ್ನಿಸಿದರು.

former-minister-ks-eshwarappa

ನಮ್ಮ ಹಿಂದೂ ಹುಡುಗ ಕಲ್ಲು ಹೊಡದನಂತೆ, ಅವನ ಮೇಲೆ ಕೇಸ್. ನಾವು ಉಫ್ ಅಂದ್ರೇ ತುಂಗಾ ನದಿಗೆ ಹಾರಿ ಬೀಳ್ತಾರೆ. ಮುಸಲ್ಮಾನರಿಗೆ ಸಿದ್ದರಾಮಯ್ಯ ರಕ್ಷಣೆ ಕೊಡ್ತಾರೆ. ಎಸ್ಪಿಗೆ ರಾಗಿಗುಡ್ಡದಲ್ಲಿ ಕಲ್ಲು ಹೊಡಿತ್ತಾರೆ.‌ ಹಿಂದೂ ಸಮಾಜ ಶಿವಮೊಗ್ಗದಲ್ಲಿ ಶಾಂತಿಯುತವಾಗಿ ಇದೆ. ಹಿಂದೂ ಹರ್ಷ ಹತ್ಯೆ ಆದಾಗ ಹಿಂದೂ ಸಮಾಜ ಎದ್ದಿದ್ರೇ. ಮಾರಿಜಾತ್ರೆಯಲ್ಲಿ ಕುರಿ ಕಡಿದಂಗೆ ಕಡಿದು ಹಾಕ್ತಿದ್ವೀ.‌ ಪಾಕಿಸ್ತಾನ ಜಿಂದಾಬಾದ್ ಬದಲು ಹಿಂದೂಸ್ತಾನ್ ಜಿಂದಾಬಾದ್ ಅನ್ನಿಸೋ ತಾಕತ್ ನಮಗಿದೆ. ಸಿದ್ದರಾಮಯ್ಯರಿಗೆ ಓಂ ಸಿನಿಮಾ‌ ತೋರಿಸಬೇಕು. ಮನೆಯಲ್ಲಿ ಗಂಡು ಮಕ್ಕಳು ಇಲ್ಲದಾಗ ರಾಗಿಗುಡ್ಡಕ್ಕೆ ಹೋಗಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡ್ತಾರೆ ಎಂದು ಕಿಡಿಕಾರಿದರು.

ಮುಸಲ್ಮಾನ್ ಗುಂಡಾಗಳೇ ನೀವು ಗಂಡಸ್ರಾ‌‌‌‌... ನಾಮಾರ್ಧಗಳು ಅಂತಾ ಕರೀಬೇಕು. ಕೆಂಪು ಕೋಟೆಯಲ್ಲಿ ಮುಂದೆ ಭಗವಾದ್ವಜ ಹಾರಿಸ್ತೀವಿ ಅಂದಿದ್ದಾಗ ಡಿಕೆಶಿ ರಾಷ್ಟ್ರದ್ರೋಹಿ ಅಂದ. ಆಗ ನಾನು ನಿನ್ನಪ್ಪ ರಾಷ್ಟ್ರದ್ರೋಹಿ ಅಂದೆ. ಕದ್ದು ಮುಚ್ಚಿ ನೀರು ಕೊಟ್ಟವನಿಗೆ ಏನೆನ್ನಬೇಕು. ನೀವು ಹೇಳಿದಂತೆ ನಾನೂ ಕಳ್ಳ ಅಂದೆ. ಡಿಕೆ ಶಿವಕುಮಾರ್ ಸೆಟ್ಲಮೆಂಟ್ ಮಾಡ್ತೀನಿ ಅಂದ್ರು. ಡಿಕೆಶಿ ಡಿಸಿಎಂ ಆಗೋ ಮೊದ್ಲು ನನಗೆ ನನ್ನ ಪಕ್ಷ ಡಿಸಿಎಂ ಮಾಡಿತ್ತು. ರಾಘವೇಂದ್ರ ಅವರನ್ನು ಗೆಲ್ಲಿಸಿ ಮೋದಿ ಮೂಲಕ ಹಿಂದು ರಾಷ್ಟ್ರ ಮಾಡೋಣ ಎಂದು ಹೇಳಿದರು.

ಶಿವಮೊಗ್ಗಕ್ಕೆ ಬಂದ್ರೆ ಯಡಿಯೂರಪ್ಪ, ರಾಘವೇಂದ್ರ ನೆನಪಾಗ್ತಾರೆ.‌ ಅದನ್ನು ಸ್ವತಃ ಕಾಂಗ್ರೆಸ್ ನ ಬಿ ಎಲ್ ಶಂಕರ್ ಹೇಳಿದ್ರು. ಡಿಕೆಶಿ ಸಿದ್ದರಾಮಯ್ಯ ಬಡಿದಾಡಿಕೊಳ್ತಿದ್ದಾರೆ. ಡಿಕೆ ಶಿವಕುಮಾರ್ ಹೆಂಡದ ಅಂಗಡಿ ತೆರೀತಾರೆ ಅಂತೆ. ನಾನು ಬಿಡಲ್ಲ ಅಂತ ಸಿದ್ದರಾಮಯ್ಯ ಹೇಳ್ತಾರೆ. ಮುಸಲ್ಮಾನ ಗುಂಡಾಗಳು ಹಿಂದು ಹರ್ಷ ಸೇರಿದಂತೆ ಹಲವರನ್ನು ಕೊಲೆ ಮಾಡಿದ್ರು. ಮಗ ಯತೀಂದ್ರನನ್ನ ಕೊಲೆ ಮಾಡಿದ್ರೆ ನಿಮಗೆ, ನಿಮ್ಮ ಹೆಂಡ್ತಿಗೆ ಏನಾಗುತ್ತಿತ್ತು..? ಡಿ ಕೆ ಸುರೇಶ್ ಕೊಲೆ ಮಾಡಿದ್ರೆ ಡಿಕೆಶಿಗೆ ಏನೂ ಅನ್ನಿಸ್ತಿರಲಿಲ್ವ..? ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+