ಪ್ರಕಾಶ್ ರಾಜ್ ಅಪ್ಪ-ಅಮ್ಮಂಗೆ ಹುಟ್ಟಿದಿನ ಎನ್ನುವುದಕ್ಕೆ ಗ್ಯಾರೆಂಟಿ ಏನು? : ಕೆ ಎಸ್ ಈಶ್ವರಪ್ಪ ಕಿಡಿ
ವಿಜಯಪುರು, ಸೆಪ್ಟೆಂಬರ್ 07: ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವುದಾಗಿ ಹೇಳಿಕೆ ಬೆನ್ನಲ್ಲೇ ನಟ ಪ್ರಕಾಶ್ ರಾಜ್, ನಾನು ಹಿಂದೂ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪ-ಅಮ್ಮನಿಗೆ ಹುಟ್ಟಿದ್ದೇನೆ ಎಂಬ ಹೇಳಿಕೆಗೆ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ವಿಜಯಪುರದಲ್ಲಿ ಮಾಧ್ಯಮಗಳ ಜೊತೆಗೆ ಕೆ ಎಸ್ ಈಶ್ವರಪ್ಪ ಮಾತನಾಡಿ, ಪ್ರಕಾಶ ರಾಜ್ ಅಯ್ಯೋಗ್ಯ. ಅಪ್ಪ-ಅಮ್ಮಂಗೆ ಹುಟ್ಟಿದಿನಿ ಅಂತಾನೆ.ಅಪ್ಪ-ಅಮ್ಮಂಗೆ ಹುಟ್ಟಿದಿನ ಅನ್ನೋಕೆ ಗ್ಯಾರೆಂಟಿ ಏನು ಎಂದು ತಿರುಗೇಟು ನೀಡಿದ್ದಾರೆ. ನನಗೆ ಅವರ ಅಮ್ಮನ ಬಗ್ಗೆ ಗೌರವ ಇದೆ. ಅವರ ಅಪ್ಪ ಯಾರು ಎಂದು ಕೇಳಿದ್ದಾನಾ?ಆದರೆ, ಇವರೇ ಅಪ್ಪ ಎಂದು ಅವರ ತಾಯಿ ಹೇಳಿದಾಗ ಅಪ್ಪ ಅನ್ನೋದು ಗೊತ್ತಾಗಿದೆ ತಾನೆ. ಪ್ರಪಂಚಕ್ಕೆ ಶಾಂತಿ, ಧರ್ಮವನ್ನು ಹೇಳಿದ್ದು ಭಾರತ ಎಂದು ಪ್ರಕಾಶ್ ರಾಜ್ ವಿರುದ್ದ ಕಿಡಿಕಾರಿದ್ದಾರೆ.

ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾವನ್ರೀ ಅವನು ಸ್ಟಾಲಿನ್? ಉದಿಯನಿಧಿಗೂ ಸನಾತನ ಧರ್ಮಕ್ಕೂ ಏನು ಸಂಬಂಧ? ಅವನೊಬ್ಬ ಅಯ್ಯೋಗ್ಯ, ಹುಚ್ಚ. ಸನಾತನ ಧರ್ಮ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.ಈ ಧರ್ಮದ ಬಗ್ಗೆ ಯಾರ್ಯಾರು ಮಾತಾಡಿದಾರೋ, ಧರ್ಮವನ್ನು ಮುದಟ್ಟಿದವನು ಯಾರಾದ್ರೂ ಉದ್ದಾರ ಆಗಿದಾರಾ? ಎಂದು ವಾಗ್ದಾಳಿ ನಡೆಸಿದರು.
ಉದಯನಿಧಿ ಸ್ಟಾಲಿನ್ ಹೇಳ್ತಾನೆ ಸನಾತನ ಧರ್ಮವನ್ನು ನಾಶ ಮಾಡ್ತಿನಿ ಅಂತ. ಅವರಪ್ಪ, ಅವರ ತಾತನ ಕಡೆಯಿಂದಲೇ ಆಗಿಲ್ಲ. ಧರ್ಮವನ್ನು ನಾಶ ಮಾಡಲು ಹೋದವರು ಯಾರೂ ಉಳಿದಿಲ್ಲ, ಇವನ್ಯಾವನು ಬಚ್ಚಾ. ಅವನಿಗೆ ತಾಕತ್ ಇದ್ರೆ ಮುಸ್ಲಿಂ ಬಗ್ಗೆ ಈ ರೀತಿ ಕಾಮೆಂಟ್ ಮಾಡಿ ಬದುಕಲಿ ನೊಡೋಣ ಅವನು? ಎಂದು ಸವಾಲು ಹಾಕಿದ ಅವರು, ಹಿಂದೂಗಳು ಶಾಂತಿಪ್ರಿಯರು. ಸನಾತನ ಧರ್ಮದ ಬಗ್ಗೆಯೂ ಅನೇಕರು ಪಾಸಿಟಿವ್ ಕೊಟ್ಟಿದಾರೆ. ಯಾಕಂದ್ರೆ ಅವರಿಗೆ ಗೊತ್ತು ಧರ್ಮದ ವಿಚಾರಕ್ಕೆ ಬಂದ್ರೆ ಭಸ್ಮ ಆಗ್ತಿವಿ ಎಂದು ಎಂದರು.
ಹಿಂದೂ ಧರ್ಮದ ಬಗ್ಗೆ ಪರಮೇಶ್ವರ ಹೇಳಿಕೆ ವಿಚಾರವಾಗಿ ಮಾತನಾಡಿ, ಜಿ ಪರಮೇಶ್ವರ ಬಗ್ಗೆ ನಾನು ವಿಚಾರಿಸಿದೆ. ಅವರ ತಾತನ ಬಗ್ಗೆ ಕೇಳಿದಾಗ ಮರಿಯಪ್ಪ ಅಂದ್ರು.
ಮುತ್ತಜ್ಜನ ಹೆಸರು ಕೇಳಿದಾಗ ಗೊತ್ತಿಲ್ಲಾ ಎಂದ್ರು.ಇನ್ನೂರು ವರ್ಷದ ನಿಮ್ಮ ಮುತ್ತಜ್ಜ ಗೊತ್ತಿಲ್ಲ. ಸಾವಿರಾರು ವರ್ಷದ ಹಿಂದೂ ಧರ್ಮದ ಬಗ್ಗೆ ಕೇಳ್ತಾರಲ್ಲಾ ಏನು ಹೇಳಬೇಕು ಇವರಿಗೆ ಎಂದರು.
ರಾಜ್ಯದ ಹಲವೆಡೆ ಬರ ಆವರಿಸಿದೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳು ರೈತರ ಬಗ್ಗೆ ಗಮನ ಕೊಡಬೇಕಿದೆ, ಅವರು ಗಮನ ಕೊಡದೆ ಇರುವುದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಬರದಿಂದಾಗಿ ರಾಜ್ಯದಲ್ಲಿ 139 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆದರೆ, ಕೆಲ ಸಚಿವರುಗಳು ಬೇರೆ ಬೇರೆ ಕಾರಣದಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.
ಹೀಗೆ ಹೇಳುವ ಮೂಲಕ ರೈತರಿಗೆ ಅಪಮಾನ ಮಾಡಿದ್ದಾರೆ. ಪರಿಹಾರ ಕೊಡುವುದರಲ್ಲೂ ಅನ್ಯಾಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.
ರೈತನ ಪ್ರಾಣಿಕತೆ ಬಗ್ಗೆ ಅಪಮಾನ ಮಾಡಿದ್ದೀರಿ. ಈ ರೀತಿ ಹೇಳಿಕೆ ಕೊಡುವುದು ತಪ್ಪಾಗುತ್ತದೆ. ತಕ್ಷಣ ರೈತರಿಗೆ ಪರಿಹಾರ ಕೊಡುವ ಕೆಲಸ ಆಗಬೇಕಿದೆ. ಎಲ್ಲರೂ ಇನ್ನೂ ಹನಿಮೂನ ಪಿರಿಯಡ್ ನಲ್ಲಿದ್ದಾರೆ, ರೈತರ ಕಷ್ಟಗಳನ್ನು ಕೇಳುವ ಸ್ಥಿತಿಯಲ್ಲಿಲ್ಲ. ಅತಿವೃಷ್ಠಿ, ಅನಾವೃಷ್ಠಿ ಸ್ಥಳಗಳಿಗೆ ಉಸ್ತುವರಿ ಸಚಿವರುಗಳು ಹೋಗಿ ರೈತರನ್ನ ಭೇಟಿ ಆಗುತ್ತಿಲ್ಲ. ಮಂತ್ರಿಗಳು ಅವರ ಕ್ಷೇತ್ರದಲ್ಲಿ ಓಡಾಟ ಮಾಡಿ, ರೈತರ ಸಂಕಷ್ಟ, ಬೆಳೆ ನಷ್ಟದ ಬಗ್ಗೆ ಗಮನ ಕೊಡಿ. ಬರದ ತಾಲೂಕುಗಳ ಅಂಕಿಅಂಶ ನಿಮ್ಮ ಬಳಿಇದೆ ಅಂತ ಗೊತ್ತಿದೆ, ಪಟ್ಟಿ ಬಿಡುಗಡೆ ಮಾಡಿ ಎಂದರು.
-
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ












Click it and Unblock the Notifications