ರಾಗಿಗುಡ್ಡ PFI ಲಿಂಕ್, ನಕ್ಸಲ್ ಚಟುವಟಿಕೆ ಪುನಾರಂಭ: NIA ತನಿಖೆಗೆ ಕೆ ಎಸ್ ಈಶ್ವರಪ್ಪ ಒತ್ತಾಯ
ಶಿವಮೊಗ್ಗ, ಅಕ್ಟೋಬರ್ 14: ಶಿವಮೊಗ್ಗ ನಗರದ ರಾಗಿಗುಡ್ಡ ಪ್ರಕರಣ ಮುಸ್ಲಿಂ ಗೂಂಡಾಗಿರಿ ಪೂರ್ವ ನಿಯೋಜಿತವಾಗಿದ್ದು, ಈ ಪ್ರಕರಣವನ್ನು ಎನ್ಐಎಗೆ ಕೊಡಬೇಕು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಒತ್ತಾಯಿಸಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಪಿಎಫ್ಐ ಬ್ಯಾನ್ ಅಗಿದೆ. ಇಂತಹ ಪಿಎಫ್ಐ ಸಂಘಟನೆಯ ಏಳು ಜನ ಪ್ರಮುಖರಲ್ಲಿ ಮೂವರು ಅರೆಸ್ಟ್ ಅಗಿದ್ದಾರೆ. ಇನ್ನು ನಾಲ್ಕು ಜನ ಅರೆಸ್ಟ್ ಅಗಬೇಕು. ಪೊಲೀಸ್ ಇಲಾಖೆ ತನಿಖೆ ಮಾಡುತ್ತಿದೆ. ಈ ವರದಿ ಗುಪ್ತಚರ ಇಲಾಖೆ ಮೂಲಕ ಸರ್ಕಾರಕ್ಕೂ ಹೋಗಿದೆ ಎಂದು ಹೇಳಿದರು.

ತಕ್ಷಣವೇ ಪೊಲೀಸ್ ಇಲಾಖೆ ಅವರನ್ನ ಬಂಧಿಸಬೇಕು. ಎಸ್ಪಿ ಅವರು ಚಾರ್ಜ್ ಶೀಟ್ ಹಾಕಿ, ಉಳಿದವರ ಬಂಧಿಸಬೇಕು. ರಾಜ್ಯ ಸರ್ಕಾರ ಎನ್ಐಎ ಗೆ ಕೊಡವರೆಗೂ ತನಿಖೆ ಮಾಡಬೇಕು. ಗೂಂಡಾಗಳು ಮೆರವಣಿಗೆಯಲ್ಲಿ ನಡೆದುಕೊಂಡ ರೀತಿ ನೋಡಿದ್ರೇ ಸರ್ಕಾರದ ಕುಮ್ಮಕ್ಕು ಇದೆ ಅನಿಸುತ್ತೆ. ಪೊಲೀಸ್ ಸಿಬ್ಬಂದಿಗೂ ಕಲ್ಲು ತೂರಿದ್ರು. ಅದನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ರು. ಆಸ್ಪತ್ರೆಗೆ ಹೋದ್ರೇ ಕೆಲವೇ ಗಂಟೆಯಲ್ಲಿ ಡಿಸ್ಚಾರ್ಜ್ ಅಗಿ ಹೋಗಿದ್ರು. ಎಸ್ಪಿ ಬಳಿ ಮಾಹಿತಿ ಕೇಳಿದ್ರೇ ಮುಚ್ಚಿಡೋ ಪ್ರಯತ್ನ ಮಾಡಿದ್ರು. ಎಸ್ಪಿ ಮೇಲೆ ಕಲ್ಲು ತೂರಿದ್ರೂ ತಲೆ ಕೆಡಿಸಿಕೊಳ್ಳಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.
ಔರಂಗಜೇಬ್ ಫೋಟೊ ಆಖಂಡ ಭಾರತ, ಹಸಿರು ಬಣ್ಣ, ಸಾಬ್ರು ಸಾಮ್ರಾಜ್ಯ ಎಂದು ಹಾಕಿದ್ರು. ಯಾರೋ ಅಮಾಯಕರನ್ನು ಕೊಲೆ ಮಾಡಿ, ತಪ್ಪಿಸಿಕೊಂಡು ಹೋಗುವ ಕೆಲಸ ಮಾಡ್ತಿದ್ದಾರೆ. ರಕ್ಷಣೆ ಕೊಡಬೇಕಾದ ಪೊಲೀಸರೇ ಗೂಂಡಾಗಳಿಂದ ತಪ್ಪಿಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಕೂಡಲೇ ಪರಮೇಶ್ವರ್ ಅವರು ರಾಜೀನಾಮೆ ಕೊಡಬೇಕು. ಅಮಾಯಕ ಹಿಂದು ಯುವಕರ ಬಂಧನ ಆಗಿದೆ. ಅಮಾಯಕ ಹಿಂದು ಯುವಕರನ್ನು ಬೇಕು ಅಂತಾನೆ ರಾಷ್ಟ್ರದ್ರೋಹಿಗಳು ಸಿಕ್ಕಿಸಿದ್ದಾರೆ.
ಶಿವಮೊಗ್ಗ ಭಯೋತ್ಪಾದಕರ ತಾಣ ಆಗುತ್ತಿದೆ. ಮುಖ್ಯಮಂತ್ರಿ ಮಗನ ಕೊಲೆಯಾದರೆ, ಡಿಸಿಎಂ ತಮ್ಮನ ಕೊಲೆಯಾದರೆ ಏನಾಗುತ್ತದೆ. ಮುಖ್ಯಮಂತ್ರಿ, ಡಿಸಿಎಂ ಮನೆಯಲ್ಲಿ ಇಂತಹ ಘಟನೆ ಅಗಬಾರದು. ಇಂತಹ ಚಟುವಟಿಕೆಯಲ್ಲಿ ಇರುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಈ ಸರಕಾರ ಬಂದ ನಂತರ ನಕ್ಸಲ್ ವಾದದ ಚಟುವಟಿಕೆ ಹೆಚ್ಚಾಗಿದೆ. ಸರಕಾರ ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ವರ್ಗಾವಣೆ ದಂಧೆ, ಗ್ಯಾರಂಟಿ ಯೋಜನೆ ಜಾರಿಯಲ್ಲಿ ತೊಡಗಿದೆ. ಹೀಗಾಗಿ ಬೇರೆ ವಿಷಯದ ಕಡೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಹಣವನ್ನು ಲೂಟಿ ಮಾಡ್ತಿದ್ದಾರೆ. ಇವರಿಬ್ಬರೇ ಹಣ ಲೂಟಿ ಮಾಡ್ತಿರೋದು ಅವರ ಪಕ್ಷದ ಶಾಸಕರೇ ಅಸಮಾಧಾನ ಹೊರ ಹಾಕಿದ್ದಾರೆ. ಈ ಸರಕಾರ ಬಂದಿರೋದೆ ಸಿದ್ದರಾಮಯ್ಯ, ಡಿಕೆಶಿ ಅವರಿಬ್ಬರಿಗೆ ಮಾತ್ರ. ರಾಜ್ಯದ ಗಡಿ ಭಾಗಗಳಲ್ಲಿ ನಕ್ಸಲ್ ಚಟುವಟಿಕೆ ಇದೆ. ಈ ಬಗ್ಗೆ ಗೃಹ ಸಚಿವರು ಇಲ್ಲ ಅಂತಾ ಹೇಳಿ ಬಿಡಲಿ ಎಂದು ಪ್ರಶ್ನಿಸಿದರು.
ಶಿವಮೊಗ್ಗ ಮುಖಾಂತರ ರಾಷ್ಟ್ರ ದ್ರೋಹಿ ಚಟುವಟಿಕೆ ಆರಂಭವಾಗ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ದೇಶದಲ್ಲೇ ರಾಜ್ಯಕ್ಕೆ ಕಪ್ಪುಚುಕ್ಕೆ ಬಂದಿದೆ. ಇತಿಹಾಸದಲ್ಲಿ ದೊಡ್ಡ ಮಟ್ಟದ ಹಣ ಮಾಜಿ ಕಾರ್ಪೊರೇಟರ್ ಮನೆಯಲ್ಲಿ ಸಿಕ್ಕಿದೆ. ಕಾಂಗ್ರೆಸ್ ಇರೋ ಕಡೆ ಏಕೆ ಐಟಿ ರೇಡ್ ಮಾಡ್ತಾರೆ ಅಂತಾರೆ.












Click it and Unblock the Notifications