CT Ravi: ‘ಹಿಂದೂ ಹುಲಿ’ ಸಿಟಿ ರವಿಗೆ ಭಾರಿ ದೊಡ್ಡ ಸಂಕಷ್ಟ?
ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿ, ಕರ್ನಾಟಕ ರಾಜಕೀಯದಲ್ಲಿ ಮಾತ್ರ ಅಲ್ಲದೆ ಭಾರತೀಯ ರಾಜಕೀಯದಲ್ಲೂ ಹವಾ ಎಬ್ಬಿಸಲು ಪ್ರಯತ್ನಿಸಿದ್ದ ಮಾಜಿ ಸಚಿವರಾದ ಸಿಟಿ ರವಿಗೆ ಇದೀಗ ಸಂಕಷ್ಟ ಎದುರಾಗಿದೆ. 'ಹಿಂದೂ ಹುಲಿ' ಎಂಬ ಬಿರುದು ಪಡೆದಿದ್ದ & ಮಾಜಿ ಸಿಎಂ ಯಡಿಯೂರಪ್ಪ ವಿರೋಧಿ ಬಣದಲ್ಲಿ ಪರೋಕ್ಷವಾಗಿ ಗುರುತಿಸಿಕೊಂಡಿರುವ, ಕರ್ನಾಟಕದ ಮಾಜಿ ಸಚಿವರಿಗೆ ಇದೀಗ ಜೈಲು ಕಂಬಿಯೇ ಗತಿಯಾಗಿದೆ. ಇಷ್ಟೆಲ್ಲದರ ನಡುವೆ ನಾಳೆ ಕೋರ್ಟ್‌ಗೆ ಸಿಟಿ ರವಿ ಹಾಜರ್ ಆಗೋದು ಬಹುತೇಕ ಗ್ಯಾರಂಟಿ ಆಗಿದೆ!
ಕರ್ನಾಟಕದ ಗಡಿ ಜಿಲ್ಲೆ ಅಂತಾ ಕರೆಸಿಕೊಳ್ಳುವ ಬೆಳಗಾವಿ ಇಂದು ಅನಗತ್ಯ ವಿಚಾರಕ್ಕೆ ಭಾರಿ ದೊಡ್ಡ ಸೌಂಡ್ ಮಾಡಿದ್ದು, ಇಡೀ ಭಾರತ ಇಂದು ಬೆಳಗಾವಿ ಕಡೆ ತಿರುಗಿ ನೋಡುವಂತಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರವಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ದೊಡ್ಡ ಚರ್ಚೆ ಆರಂಭವಾಗಿತ್ತು. ಆದ್ರೆ ಈ ವೇಳೆ ಪರಿಷತ್ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕರ ಜೊತೆ ಬಿಜೆಪಿ ನಾಯಕರ ಕಿರಿಕ್ ಶುರುವಾಗಿದೆ. ಇದೇ ಸಂದರ್ಭದಲ್ಲಿ ಮಾಜಿ ಸಚಿವರೂ ಆಗಿರುವ ಬಿಜೆಪಿ ಪಕ್ಷದ ಪರಿಷತ್ ಸದಸ್ಯ ಸಿಟಿ ರವಿ, ಬಾಯಿಗೆ ಬಂದಂತೆ ಮಾತನಾಡಿ ಅಶ್ಲೀಲ ಪದದ ಬಳಕೆ ಮಾಡಿರುವ ಆರೋಪ ಕೇಳಿ ಬಂದಿದೆ.

'ಹಿಂದೂ ಹುಲಿ' ಸಿಟಿ ರವಿಗೆ ಸಂಕಷ್ಟ?
ಸಿಟಿ ರವಿ ಈ ರೀತಿಯಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಅಶ್ಲೀಲ ಪದ ಬಳಸಿರುವ ಆರೋಪ ಕೇಳಿಬಂದ ತಕ್ಷಣ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪ್ರಮುಖರಿಗೆ ಸುದ್ದಿ ಮುಟ್ಟಿತು. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ವಿರುದ್ಧ ಬಿಎನ್‌ಎಸ್ ಕಾಯ್ದೆ ಅಡಿಯಲ್ಲೇ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ದಾಖಲಿಸಿ ಪೊಲೀಸರು ಸಿಟಿ ರವಿ ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಈ ಮೂಲಕ ಬೆಳಗಾವಿ ಜಿಲ್ಲೆ ಕಾದ ಕಬ್ಬಿಣದಂತೆ ಆಗಿದೆ. ಮತ್ತೊಂದು ಕಡೆ ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಎಲ್ಲಾ ಒಟ್ಟಾಗಿ ಹೋರಾಡಲು ಮುಂದಾಗಿದ್ದಾರೆ. ಸಿಎಂಗೆ ಕೂಡ ಈ ಕುರಿತು ದೂರು ನೀಡಲಾಗಿದೆ. ಇಷ್ಟೆಲ್ಲದರ ನಡುವೆ, 'ಹಿಂದೂ ಹುಲಿ' ಸಿಟಿ ರವಿಗೆ ಭಾರಿ ದೊಡ್ಡ ಸಂಕಷ್ಟ ಎದುರಾಯ್ತಾ? ಎಂಬ ಪ್ರಶ್ನೆ ಕೂಡ ಮೂಡಿದೆ.
ತೊಡೆತಟ್ಟಿದ ಬಿಜೆಪಿ & ಕಾಂಗ್ರೆಸ್ ಲೀಡರ್ಸ್!
ಒಟ್ಟಾರೆ, ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗೆ ವೇದಿಕೆ ಆಗಬೇಕಿದ್ದ ಬೆಳಗಾವಿ ಇದೀಗ ಬೇಡವಾದ ವಿಚಾರಕ್ಕೆ ಸದ್ದು ಮಾಡುತ್ತಿದೆ. ಹಾಗೇ ಈ ವಿಚಾರ ಮತ್ತಷ್ಟು ತಿರುವು ಪಡೆಯುವ ಸಾಧ್ಯತೆ ಕೂಡ ಇದೆ. ಇನ್ನೊಂದು ಕಡೆ ಕಾಂಗ್ರೆಸ್ & ಬಿಜೆಪಿ ನಾಯಕರ ಪಡೆ ಈ ವಿಚಾರದಲ್ಲಿ ತೊಡೆತಟ್ಟಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯದ ಈ ಘಟನೆ ರಾಷ್ಟ್ರೀಯ ಸುದ್ದಿ ಆಗುತ್ತಿದೆ. ಮತ್ತೊಂದು ಕಡೆ ಸಿಟಿ ರವಿ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.












Click it and Unblock the Notifications