ಬೊಮ್ಮಾಯಿ ಸರ್ಕಾರದ ಮೀಸಲಾತಿ ಕುರಿತ ತೀರ್ಮಾನ ಪ್ರಾಮಾಣಿಕವಲ್ಲ, ಚುನವಣಾ ಗಿಮಿಕ್ಕು: ಸಿದ್ದರಾಮಯ್ಯ

ಬೆಂಗಳೂರು, ಮಾರ್ಚ್25:‌ ರಾಜ್ಯ ಸರ್ಕಾರ ಶುಕ್ರವಾರ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿಯ ಕುರಿತು ತೆಗೆದುಕೊಂಡ ತೀರ್ಮಾನಗಳು ಸಮುದಾಯಗಳಲ್ಲಿ ಹಲವು ರೀತಿಯ ಗೊಂದಲ, ಅಶಾಂತಿಯನ್ನು ಹುಟ್ಟು ಹಾಕಿವೆ. ಬೊಮ್ಮಾಯಿ ಸರ್ಕಾರದ ಮೀಸಲಾತಿ ಕುರಿತ ತೀರ್ಮಾನಗಳು ಪ್ರಾಮಾಣಿಕವಲ್ಲ, ಚುನವಣಾ ಗಿಮಿಕ್ಕುಗಳು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಮುಖ್ಯಮಂತ್ರಿಗಳು ಮೀಸಲಾತಿಯ ಸಮಸ್ಯೆಯನ್ನು ಬಗೆಹರಿಸಿದ್ದೇನೆಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ ಸಮಸ್ಯೆಯನ್ನು ಪರಿಹರಿಸುವ ಬದಲಿಗೆ ಹೆಚ್ಚಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂಬುದು ಜನರ ಪ್ರತಿಕ್ರಿಯೆಗಳನ್ನು ನೋಡಿದ ಮೇಲೆ ಸ್ಪಷ್ಟವಾಗುತ್ತಿದೆ.

ಪರಿಶಿಷ್ಟ ಜಾತಿಗಳ ಬಹುಪಾಲು ಮುಖಂಡರು ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಡಿಲ್ಲ. ನಾಗಮೋಹನ ದಾಸ್ ಅವರ ಸಮಿತಿಯ ಶಿಫಾರಸ್ಸುಗಳಂತೆ ಮೀಸಲಾತಿ ಹೆಚ್ಚಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು 6 ತಿಂಗಳುಗಳಾಗುತ್ತಾ ಬಂದಿದೆ.

Former Chief Minister Siddaramaiah Fierce Attack Against BJP Government

ಅದನ್ನು ಲೋಕಸಭೆಯ ಅಧಿವೇಶನ ಮುಗಿಯುವಾಗ ಶೆಡ್ಯೂಲ್9 ಕ್ಕೆ ಸೇರಿಸಿ ಎಂದು ಇದೆ 23 ನೆ ತಾರೀಖು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗುವುದಕ್ಕೆ ಕೆಲವೆ ದಿನಗಳಿರುವಾಗ ಒಳಮೀಸಲಾತಿಯ ನಾಟಕ ಆಡಲಾಗಿದೆ.

ಬಿಜೆಪಿ ಸರ್ಕಾರಕ್ಕೆ ನೈಜ ಕಾಳಜಿ ಇದ್ದರೆ ಪರಿಶಿಷ್ಟ ಜಾತಿಯ ಎಲ್ಲ ಜಾತಿಗಳ ಮುಖಂಡರುಗಳ ಜೊತೆ ಚರ್ಚಿಸಿ ಎಲ್ಲರ ಹಿತಾಸಕ್ತಿಗಳನ್ನು ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗಿತ್ತು. ಇಡಬ್ಲ್ಯುಎಸ್ ಮೀಸಲಾತಿಯನ್ನು ಕೇವಲ ನಾಲ್ಕೇ ದಿನಗಳಲ್ಲಿ ಮುಗಿದು ಸಂವಿಧಾನಕ್ಕೆ ತಿದ್ದುಪಡಿ ತಂದು ಅನುಷ್ಠಾನ ಮಾಡಲಾಯಿತು.

ಈಗಲೂ ಮೀಸಲಾತಿಯ ಹೆಚ್ಚಳ ಮತ್ತು ಒಳಮೀಸಲಾತಿಯ ಕುರಿತು ಅಷ್ಟೆ ಕಾಳಜಿ ಮತ್ತು ಬದ್ಧತೆಯನ್ನು ತೋರಿಸಬೇಕೆಂದು ಹಲವು ಮುಖಂಡರುಗಳು ಒತ್ತಾಯಿಸುತ್ತಿದ್ದಾರೆ. ಇಷ್ಟನ್ನು ಮಾಡದೆ ಹೋದರೆ ಸರ್ಕಾರ ಕೇವಲ ಚುನಾವಣಾ ಗಿಮಿಕ್ಕು ಮಾಡುತ್ತಿದೆ. ಸರ್ಕಾರಕ್ಕೆ ಪ್ರಾಮಾಣಿಕ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು.

Former Chief Minister Siddaramaiah Fierce Attack Against BJP Government

ಸರ್ಕಾರಕ್ಕೆ ನಿಜವಗಿಯೂ ಸಂವಿಧಾನದ ಆಶಯಗಳಲ್ಲಿ ನಂಬಿಕೆ ಇದ್ದರೆ, ಅದಕ್ಕೆ ಕರುಣೆ, ತಾಯ್ತನದ ಗುಣಗಳು ಇದ್ದಿದ್ದರೆ ಇಡಬ್ಲ್ಯುಎಸ್‍ನಲ್ಲಿ ಶೇ.10 ರಷ್ಟು ಜನಸಂಖ್ಯೆ ಇಲ್ಲದ ಕಾರಣ ಅದರಲ್ಲಿನ ಕೆಲವು ಪರ್ಸೆಂಟ್ ಮೀಸಲಾತಿಯನ್ನು ಉಳಿದ ಹಿಂದುಳಿದ ವರ್ಗಗಳಿಗೆ ಹಂಚಿಕೆ ಮಾಡಬಹುದಾಗಿತ್ತು. ಹಾಗೆ ಮಾಡುವುದರಿಂದ ಹಲವು ಸಮಸ್ಯೆಗಳು ಬಗೆಹರಿಯುತ್ತಿದ್ದವು. ನಾನು ಸರ್ಕಾರಕ್ಕೆ ಹಲವು ಬಾರಿ ಇದೆ ಸಲಹೆ ಕೊಟ್ಟಿದ್ದೆ. ಆದರೆ ಇದನ್ನೆಲ್ಲ ಕಾಲ ಕೆಳಕ್ಕೆ ಹಾಕಿಕೊಂಡು ಹೊಸಕಿ ಹಾಕಲಾಗಿದೆ.

ಸರ್ಕಾರದ ಅಮಾನವೀಯ ನಿರ್ಧಾರದಿಂದ ಅತಿ ಹೆಚ್ಚು ಅನ್ಯಾಯಕ್ಕೆ ಒಳಗಾಗಿರುವವರು ಪ್ರವರ್ಗ-1, ಪ್ರವರ್ಗ- 2 ಗಳಲ್ಲಿ ಹಿಂದುಳಿದವರು ಮತ್ತು ಪ್ರವರ್ಗ- 2 ಬಿರಲ್ಲಿದ್ದ ಮುಸ್ಲಿಮರು. ಈ ಮೂರೂ ಪ್ರವರ್ಗಗಳಲ್ಲಿ ಶೇ.48-50 ರಷ್ಟು ಜನಸಂಖ್ಯೆ ಇದೆಯೆಂದು ಹಲವು ವರದಿಗಳು ಹೇಳಿವೆ. ಇಷ್ಟು ಜನಸಂಖ್ಯೆಗೆ ಈಗ ಕೇವಲ ಶೇ.19 ರಷ್ಟು ಮಾತ್ರ ಮೀಸಲಾತಿ ಇದೆ.

ಪ್ರವರ್ಗ-1 ರಲ್ಲಿ ಬೆಸ್ತರು, ಮೊಗವೀರರು, ಗೊಲ್ಲರು, ಉಪ್ಪಾರರು, ದಾಸರು ಸೇರಿದಂತೆ 95 ಜಾತಿಗಳಿವೆ. ಈ ಜಾತಿಗಳಲ್ಲಿ ಸುಮಾರು 80 ಲಕ್ಷದಷ್ಟು ಜನಸಂಖ್ಯೆ ರಾಜ್ಯದಲ್ಲಿದೆ. ಒಟ್ಟಾರೆ ಜನಸಂಖ್ಯೆಯ ಶೇ.12 ರಷ್ಟು ಜನರು ಈ ಪ್ರವರ್ಗದಲ್ಲಿದ್ದಾರೆ.

Former Chief Minister Siddaramaiah Fierce Attack Against BJP Government

ಹಾವನೂರು ಸಮಿತಿಯು 58 ಜಾತಿಗಳನ್ನು ಹಿಂದುಳಿದ ಬುಡಕಟ್ಟುಗಳು ಎಂದು ಗುರ್ತಿಸಿತ್ತು. ಅದಕ್ಕೂ ಮೊದಲು 46 ಜಾತಿಗಳನ್ನು ಅಲೆಮಾರಿಗಳು ಎಂದು ಗುರ್ತಿಸಲಾಗಿತ್ತು. ಹಾವನೂರು ಆಯೋಗದ ಪ್ರಕಾರ ಬ್ಯಾಕ್‍ವರ್ಡ್ ಟ್ರೈಬ್ಸ್ ಎಂದು ಕರೆಯುವ ಈ ಜಾತಿಗಳು ಇಂದಿಗೂ ಅತ್ಯಂತ ದಯನೀಯ ಸ್ಥಿತಿಯಲ್ಲಿವೆ.

ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹೀಗೆ ಎಲ್ಲ ರೀತಿಯಲ್ಲೂ ಹಿಂದುಳಿದಿವೆ. ಹಿಂದೆ ಈ ಜಾತಿಗಳ ಜನರಿಗೆ ಪರಿಶಿಷ್ಟ ಜಾತಿ/ ಪಂಗಡಗಳಿಗೆ ಸಿಗುವ ಎಲ್ಲ ಸವಲತ್ತುಗಳು ಸಿಗುತ್ತಿದ್ದವು. ಉಚಿತ ಶಿಕ್ಷಣ, ಉಚಿತ ಹಾಸ್ಟೆಲ್ ವ್ಯವಸ್ಥೆ ಇತ್ತು. ಇತ್ತೀಚೆಗೆ ಈ ಎಲ್ಲ ಸವಲತ್ತುಗಳು ನಿಂತು ಹೋಗಿವೆ.

ಹಿಂದೆ ಹಾವನೂರರ ಶಿಫಾರಸ್ಸುಗಳನ್ನು ನ್ಯಾಯಾಲಯಗಳು ಅಂಗೀಕರಿಸಿದ್ದವು. ಇಂದು ಬಿಜೆಪಿ ಸರ್ಕಾರದ ನೀತಿಯಿಂದ ಅತಿ ಹೆಚ್ಚು ಹಾನಿಗೆ ಒಳಗಾದ ಜಾತಿಗಳು ಪ್ರವರ್ಗ-1 ರಲ್ಲಿವೆ. ಸರ್ಕಾರ ಮೀಸಲಾತಿಯಲ್ಲಿ ಮೊದಲ ಆದ್ಯತೆಯನ್ನು ಈ ವರ್ಗಕ್ಕೆ ಕೊಡಬೇಕಾಗಿತ್ತು. ಕೊಡದೆ ಅನ್ಯಾಯ ಮಾಡಿದೆ. ಪ್ರವರ್ಗ -1 ರ ಹಾಗೆಯೆ ಪ್ರವರ್ಗ- 2 ಎ ಗೂ ಸಹ ಅನ್ಯಾಯವಾಗಿದೆ. ಅತಿ ಹೆಚ್ಚು ಶೋಷಣೆಗೆ ಒಳಗಾದ ಜಾತಿ ಜನರ ನೋವು ನಿವಾರಿಸುವುದು ಸರ್ಕಾರದ ಆದ್ಯತೆಯಾಗಬೇಕು.

ಅದನ್ನು ಬಿಟ್ಟು ಸಂವಿಧಾನದ ಆಶಯಗಳನ್ನು ಬದಿಗೆ ಒತ್ತಿ ಅರಣ್ಯನ್ಯಾಯಕ್ಕೆ ಮುನ್ನುಡಿ ಬರೆಯಲು ಹೊರಟಿರುವ ಬಸವರಾಜ ಬೊಮ್ಮಾಯಿಯವರ ಸರ್ಕಾರ ಹಾಗೂ ಸರ್ಕಾರದ ಈ ನಿರ್ಧಾರದ ಹಿಂದೆ ಕೆಲಸ ಮಾಡಿರುವ ಕೇಂದ್ರ ಸರ್ಕಾರ ಹಾಗೂ ಆರೆಸ್ಸೆಸ್‍ನ ಜನರು ಕ್ಷಮೆಗೆ ಅರ್ಹರಲ್ಲ.ಆದ್ದರಿಂದ ಕೂಡಲೇ ಪರಿಶಿಷ್ಟ ಜಾತಿ ಪಂಗಡಗಳ ಜನರ ಮೂಲಭೂತ ಹಕ್ಕಾಗಿರುವ ಜನಸಂಖ್ಯೆಗೆ ಅನುಗುಣವಾದ ಮೀಸಲಾತಿಯ ಪ್ರಮಾಣವನ್ನು ಶೆಡ್ಯೂಲ್ 9 ಕ್ಕೆ ಸೇರಿಸಿ ಆದೇಶ ಹೊರಡಿಸಬೇಕು.

ಒಳಮೀಸಲಾತಿಯ ಕುರಿತು ಈಗ ಪ್ರಾರಂಭವಾಗಿರುವ ಭಿನ್ನಾಭಿಪ್ರಾಯಗಳನ್ನು ಎಲ್ಲ ಸಂಬಂಧಿತ ಸಮುದಾಯಗಳ ಮುಖಂಡರ ಜೊತೆ ಚರ್ಚಿಸಿ ಸಮ್ಮತವಾಗುವ ತೀರ್ಮಾನವನ್ನು ಕೂಡಲೆ ತೆಗೆದುಕೊಂಡು ಇದನ್ನೂ ಸಹ ಶೆಡ್ಯೂಲ್ 9ಕ್ಕೆ ಸೇರಿಸಿ ಆದೇಶ ಹೊರಡಿಸಬೇಕು.

ಅತಿ ಹೆಚ್ಚು ಅನ್ಯಾಯಕ್ಕೆ ಒಳಗಾಗಿರುವ ಅತಿ ಹಿಂದುಳಿದ ಬುಡಕಟ್ಟು ಸ್ವಭಾವದ ಜಾತಿಗಳು ಇರುವ ಪ್ರವರ್ಗ 1 ಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನೀಡಬೇಕು ಹಾಗೂ ಹಿಂದೆ ಪ.ಜಾತಿ/ ಪ.ಪಂಗಡಗಳಿಗೆ ಸಿಗುತ್ತಿದ್ದಂತೆ ಈ ಜಾತಿಗಳಿಗೂ ಸಿಗುತ್ತಿದ್ದ ಎಲ್ಲ ಸವಲತ್ತುಗಳನ್ನು ನೀಡಬೇಕು.

ಮುಖ್ಯವಾಗಿ ಶಿಕ್ಷಣದ ವಿಚಾರದಲ್ಲಿ ಇರುವ ಕೆನೆಪದರದ ಶರತ್ತುಗಳನ್ನು ತೆಗೆದು ಹಾಕಬೇಕು. ಉನ್ನತ ಶಿಕ್ಷಣದಲ್ಲೂ ಉಚಿತ ಹಾಸ್ಟೆಲ್ ಸೇರಿದಂತೆ ಎಲ್ಲ ಸವಲತ್ತುಗಳನ್ನು ನೀಡುವ ಕೂಡಲೆ ಆದೇಶ ಹೊರಡಿಸಬೇಕು. ಈ ಪ್ರವರ್ಗದಲ್ಲಿನ ಅನೇಕ ಜಾತಿಗಳು ಬುಡಕಟ್ಟು ಸ್ವಭಾವ ಹೊಂದಿರುವುದರಿಂದ ಅವುಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಪ್ರಸ್ತಾವನೆಗಳು ಕೇಂದ್ರ ಸರ್ಕಾರದ ಮುಂದೆ ಇವೆ. ಅವುಗಳನ್ನು ಚುನಾವಣೆಗೆ ಮೊದಲೆ ಅನುಮೋದಿಸಬೇಕು.

ಪ್ರವರ್ಗ 2ಎ ಗೆ ಸಂಬಂಧಿಸಿದಂತೆಯೂ ಮೀಸಲಾತಿಯ ಪ್ರಮಾಣವನ್ನು ವೈಜ್ಞಾನಿಕವಾಗಿ ಉಳಿದ ಜಾತಿಗಳಿಗೆ ಸಿಗುತ್ತಿರುವಂತೆ ಹೆಚ್ಚಿಸಬೇಕು. ಈ ಪ್ರವರ್ಗದಲ್ಲಿರುವ ಅನೇಕ ಜಾತಿಗಳು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿಸಬೇಕೆಂದು ಶೀಫಾರಸ್ಸುಗಳಾಗಿವೆ ಹಾಗೂ ಬೇಡಿಕೆಗಳನ್ನು ಮಂಡಿಸಲಾಗಿದೆ. ಅವುಗಳನ್ನು ಸರ್ಕಾರ ಶೀಘ್ರವಾಗಿ ಈಡೇರಿಸಬೇಕು.

ಪ್ರವರ್ಗ2-ಬಿ ರಲ್ಲಿರುವ ಮುಸ್ಲಿಮರಿಗೆ ಹಿಂದೆ ಇದ್ದ ಮೀಸಲಾತಿಯನ್ನು ಮುಂದುವರೆಸಬೇಕು. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದವರು ಧರ್ಮ ಬೇರೆ ಎಂಬ ಕಾರಣಕ್ಕೆ ತಾರತಮ್ಯ ಮಾಡುವುದು ಅಮಾನವೀಯ ಹಾಗೂ ಸಂವಿಧಾನ ಬಾಹಿರ.

ಪ್ರವರ್ಗ-2ಸಿ, 2ಡಿ ಎಂದು ಹೊಸ ಪ್ರವರ್ಗಗಳನ್ನು ಸೃಷ್ಟಿಸಿ ಎ ಮತ್ತು 3 ಬಿ ಪ್ರವರ್ಗಗಳನ್ನು ರದ್ದು ಮಾಡಿರುವ ಕುರಿತಂತೆ ನಮ್ಮ ವಿರೋಧವೇನೂ ಇಲ್ಲ. ಆದರೆ ಈ ಪ್ರವರ್ಗಗಳಿಗೆ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ವಿಚಾರದಲ್ಲೂ ನಮ್ಮ ಸಹಮತಿ ಇದೆ. ಆದರೆ ಪ್ರವರ್ಗ 2ಬಿಯಲ್ಲಿನ ಮುಸಲ್ಮಾನರ ಮೀಸಲಾತಿಯನ್ನು ರದ್ದು ಪಡಿಸುವುದರ ಬದಲಿಗೆ ಇಡಬ್ಲ್ಯುಎಸ್‍ನಲ್ಲಿನ ಹೆಚ್ಚುವರಿ ಮೀಸಲಾತಿಯನ್ನು ಈ ಎರಡು ಪ್ರವರ್ಗಗಳಿಗೆ ಹಂಚಿಕೆ ಮಾಡಿ ಸಮಸ್ಯೆಯನ್ನು ಬಗೆಹರಿಸಿದ್ದರೆ ಅದು ಮುತ್ಸದ್ಧಿತನವಾಗುತ್ತಿತ್ತು.

ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಕೇವಲ ಚುನಾವಣಾ ಗಿಮಿಕ್ಕು. ಹಣೆಗೆ ತುಪ್ಪ ಹಚ್ಚಿ, ಕಿವಿಗೆ ಹೂ ಇಡುವ ತಂತ್ರವಲ್ಲದೆ ಬೇರೇನೂ ಅಲ್ಲ ಎಂಬುದು ಸಾಮಾನ್ಯ ತಿಳುವಳಿಕೆ ಇರುವ ಎಲ್ಲರಿಗೂ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+