ದೇಗುಲಕ್ಕೊಬ್ಬ ಜ್ಯೋತಿಷಿ ನೇಮಿಸಲು ಮುಂದಾದ ಸಿದ್ದು ಸರ್ಕಾರ

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ಮೇ 17: ಕರ್ನಾಟಕದಲ್ಲಿ ಮೂಢನಂಬಿಕೆ ನಿಷೇಧ ಕಾಯ್ದೆ ಯಾವಾಗ ಜಾರಿಗೊಳ್ಳುತ್ತದೆಯೋ ಗೊತ್ತಿಲ್ಲ. ಸದ್ಯಕ್ಕೆ ನಕಲಿ ಜ್ಯೋತಿಷಿಗಳ ಮೇಲೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಹೊಸ ಯೋಜನೆಯೊಂದನ್ನು ಹಾಕಿಕೊಂಡಿದೆ. ಮುಜರಾಯಿ ಇಲಾಖೆ ಅಧೀನದ ದೇಗುಲಗಳಿಗೆ ಜ್ಯೋತಿಷಿಗಳನ್ನು ನೇಮಿಸಲು ಮುಂದಾಗಿರುವ ಸುದ್ದಿ ಬಂದಿದೆ.

ಮೂಢನಂಬಿಕೆ, ಕಂದಾಚಾರಗಳ ಮೇಲೆ ನಿಯಂತ್ರಣ ಸಾಧಿಸಲು ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದ ಸಿದ್ದರಾಮಯ್ಯ ಅವರ ಸರ್ಕಾರ ಈಗ ಜ್ಯೋತಿಷಿಗಳ ನೇಮಕಕ್ಕೆ ಮುಂದಾಗಿರುವುದು ಹಲವರ ಹುಬ್ಬೇರಿಸಿದೆ.

Forget anti-superstition bill, Karnataka government mulls appointing astrologers

ಜ್ಯೋತಿಷ್ಯ ಶಿಕ್ಷಕರ ಸಂಘಟನೆಯ ರಾಜ್ಯ ಘಟಕದ ಸದಸ್ಯರು, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮುಜರಾಯಿ ದೇಗುಲಗಳಲ್ಲಿ ಜ್ಯೋತಿಷಿಗಳ ನೇಮಕಾತಿ ಕುರಿತಂತೆ ಮನವಿ ಸಲ್ಲಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Karnataka government is mulling the possibility of appointing astrologers in temples run by the Muzrai department. While the recommendation is still in the consideration process, the move is said to be aimed at stopping 'fake astrologers' from duping people.
Please Wait while comments are loading...