BJP vs BJP; ಶಿವಮೊಗ್ಗದಲ್ಲಿ ಈ ಅಸ್ತ್ರ ಬಿಟ್ಟರೇ ಬಿಎಸ್‌ವೈ?

ಕಾಂಗ್ರೆಸ್ #BJPvsBJPಸರಣಿಯಲ್ಲಿ ಮತ್ತೊಂದು ಟ್ವೀಟ್‌ ಮಾಡಿದೆ. ಈ ಟ್ವೀಟ್ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗಕ್ಕೆ ಸಂಬಂಧಿಸಿದ್ದು.

ಬೆಂಗಳೂರು, ಮಾರ್ಚ್ 17; ಕರ್ನಾಟಕ ಬಿಜೆಪಿಯಲ್ಲಿ ಎಲ್ಲರೂ ಸರಿ ಇಲ್ಲ. ಮಾಜಿ ಮುಖ್ಯಮಂತ್ರಿ ಬಿ. ಎಸ್.‌ ಯಡಿಯೂರಪ್ಪರನ್ನು ಕಡೆಗಣಿಸಲಾಗುತ್ತಿದೆ. 'ಸಂತೋಷ' ಕೂಟ ರಚನೆಯಾಗಿದೆ ಎಂದೆಲ್ಲ ಕರ್ನಾಟಕ ಕಾಂಗ್ರೆಸ್ ಟ್ವೀಟ್‌ ಮಾಡುವ ಮೂಲಕ ಆಡಳಿತ ಪಕ್ಷದ ಗುಂಪುಗಾರಿಕೆಯನ್ನು ಬಿಚ್ಚಿಡುತ್ತದೆ. ಇದಕ್ಕೆ BJPvsBJP ಎಂಬ ಹ್ಯಾಷ್‌ ಟ್ಯಾಗ್ ಬಳಕೆ ಮಾಡುತ್ತದೆ.

ಮಂಗಳವಾರ ಸಹ ಕರ್ನಾಟಕ ಕಾಂಗ್ರೆಸ್ ಇದೇ #BJPvsBJP ಸರಣಿಯಲ್ಲಿ ಮತ್ತೊಂದು ಟ್ವೀಟ್‌ ಮಾಡಿದೆ. ಈ ಟ್ವೀಟ್ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗಕ್ಕೆ ಸಂಬಂಧಿಸಿದ್ದು, ಮಾಜಿ ಸಚಿವ ಕೆ. ಎಸ್‌. ಈಶ್ವರಪ್ಪ ಕುರಿತು ಇರುವುದಾಗಿದೆ.

Flex In Shivamogga Congress Question To Yediyurappa And KS Eshwarappa

ಯುಗಾದಿ ಹಬ್ಬ ಮತ್ತು ರಂಜಾನ್ ಶುಭಾಶಯಗಳನ್ನು ಕೋರಿ ಶಿವಮೊಗ್ಗ ನಗರದಲ್ಲಿ ಒಂದು ಫೆಕ್ಸ್‌ ಹಾಕಲಾಗಿದೆ. ಕರ್ನಾಟಕ ಕಾಂಗ್ರೆಸ್ ಈ ಫೆಕ್ಸ್‌ನಲ್ಲಿನ ಬರಹ ಮುಂದಿಟ್ಟುಕೊಂಡು ಟ್ವೀಟ್ ಮಾಡಿ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ಹೇಳಿದೆ. ಇದು ಬಿ. ಎಸ್. ಯಡಿಯೂರಪ್ಪ ಅವರು ಬಿಟ್ಟಿರುವ ಅಸ್ತ್ರವೇ? ಎಂದು ಕರ್ನಾಟಕ ಬಿಜೆಪಿಯನ್ನು ಪ್ರಶ್ನೆ ಮಾಡಿದೆ.

ಕಾಂಗ್ರೆಸ್‌ ತನ್ನ ಟ್ವೀಟ್‌ನಲ್ಲಿ, 'ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಈ ಬ್ಯಾನರ್ ಮೂಲಕ ನೀಡುತ್ತಿರುವ ಸಂದೇಶವೇನು?

Flex In Shivamogga Congress Question To Yediyurappa And KS Eshwarappa

* ಬ್ಯಾನರ್‌ನಲ್ಲಿ ಬಿಜೆಪಿ ಚಿಹ್ನೆಯೇ ಇಲ್ಲ
* "ಹರಕು ಬಾಯಿ"ಗೆ ಹೊಲಿಗೆ ಬೀಳಲಿ ಎಂದು ಈಶ್ವರಪ್ಪರಿಗೆ ತಪರಾಕಿ
* ಕೋಮುವಾದದ ಬಿಜೆಪಿ ವಿರುದ್ದ ಸೌಹಾರ್ದತೆಯ ಅಸ್ತ್ರ. ಇದು ಬಿ. ಎಸ್. ಯಡಿಯೂರಪ್ಪ ಅವರು ಬಿಟ್ಟಿರುವ ಅಸ್ತ್ರವೇ ಬಿಜೆಪಿ ಕರ್ನಾಟಕ? ಎಂದು ಕೇಳಿದೆ.

ಏನಿದು ಫೆಕ್ಸ್; ಈ ಬಾರಿ ಸ್ನೇಹಪ್ರಿಯ ಆಯನೂರು ಮಂಜುನಾಥ ಎಂದು ಇರುವ ಫೆಕ್ಸ್‌ನಲ್ಲಿ ಹಿಂದೂ ಬಾಂಧವರಿಗೆ ಯುಗಾದಿ ಹಬ್ಬದ ಶುಭಾಶಯಗಳು, ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಲಾಗಿದೆ. ಹೊಸ ವರ್ಷದ ಶೋಭಕೃತ ಸಂವತ್ಸರದಲ್ಲಿ ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ, ಮುರಿದ ಮನಸ್ಸುಗಳ ಬೆಸುಗೆಯಾಗಲಿ. ಶಿವಮೊಗ್ಗದಲ್ಲಿ ಶಾಂತಿ-ಸೌಹಾರ್ದತೆ ನೆಲೆಸಲಿ. ಎಲ್ಲರಿಗೂ ಹಬ್ಬದ ಶುಭಾಶಯಗಳು ಎಂದು ಬರೆಯಲಾಗಿದೆ. ಫೆಕ್ಸ್‌ನಲ್ಲಿ ಆಯನೂರು ಮಂಜುನಾಥ ಚಿತ್ರವಿದೆ.

ವಿಧಾನ ಪರಿಷತ್ ಸದಸ್ಯ, ಬಿಜೆಪಿಯ ಹಿರಿಯ ನಾಯಕರು ಆಯನೂರು ಮಂಜುನಾಥ. ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರಾಗಿ ಕೆಲಸ ಮಾಡಿರುವ ಅವರು ಈ ಬಾರಿಯ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂಬ ಸುದ್ದಿಗಳು ಹಬ್ಬಿದೆ. ಇಂತಹ ಸಮಯದಲ್ಲಿಯೇ ಪಕ್ಷದ ಚಿನ್ಹೆ ಇರದ ಇಂತಹ ಫೆಕ್ಸ್ ಶಿವಮೊಗ್ಗ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಶಿವಮೊಗ್ಗ ನಗರ ಕ್ಷೇತ್ರದ ಹಾಲಿ ಶಾಸಕರು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪ್ರಕರಣದಲ್ಲಿ ಕ್ಲೀನ್‌ಚಿಟ್ ಸಿಕ್ಕರೂ ಸಚಿವ ಸ್ಥಾನ ಮಾತ್ರ ಸಿಗಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಹ ಸಿಗುವುದಿಲ್ಲ ಎಂಬ ಮಾತಿದೆ. ಒಂದು ವೇಳೆ ಈಶ್ವರಪ್ಪಗೆ ಟಿಕೆಟ್ ಸಿಗದಿದ್ದರೆ ಆಯನೂರು ಮಂಜುನಾಥ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇಂತಹ ಸಮಯದಲ್ಲಿಯೇ ಈ ಫೆಕ್ಸ್‌ ಚರ್ಚೆ ಹುಟ್ಟುಹಾಕಿದೆ.

ಕೆ. ಎಸ್. ಈಶ್ವರಪ್ಪ ಸದಾ ತಮ್ಮ ಮಾತು, ಹೇಳಿಕೆಗಳಿಂದ ವಿವಾದಲ್ಲಿ ಸಿಲುಕುತ್ತಾರೆ. ಫೆಕ್ಸ್‌ನಲ್ಲಿನ 'ಹರಕು ಬಾಯಿಗೆ ಹೊಲಿಗೆ ಬೀಳಲಿ' ಎಂಬ ಪದವನ್ನು ಇಟ್ಟುಕೊಂಡು ಇದು ಈಶ್ವರಪ್ಪರಿಗೆ ನೀಡಿದ ತಪರಾಕಿ ಎಂದು ಕಾಂಗ್ರೆಸ್‌ ಹೇಳಿದೆ. ಆಯನೂರು ಮಂಜುನಾಥ ಮಾತ್ರವಲ್ಲ ಶಿವಮೊಗ್ಗದ ಖ್ಯಾತ ವೈದ್ಯ ಡಾ. ಧನಂಜಯ ಸರ್ಜಿ ಅವರು ಸಹ ಕೆಲವು ದಿನಗಳ ಹಿಂದೆ ಬಿಜೆಪಿ ಸೇರಿದ್ದಾರೆ, ಅವರು ಸಹ ಈ ಬಾರಿಯ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+