ಸಿಎಂ ಭಾಗವಹಿಸಿದ್ದ ಜಾತ್ರೆಯಲ್ಲಿ ಬೆಂಕಿ ಅವಘಡ: ಏನೇನೋ ಸುದ್ದಿ!

Posted By:
Subscribe to Oneindia Kannada

ಇಲ್ಲಿ ಮೂರು ವರ್ಷಕ್ಕೊಮ್ಮೆ ಗ್ರಾಮದೇವರ ಜಾತ್ರೆ ನಡೆಯುವುದು ಪದ್ದತಿ, ಆದರೆ ದೇವಾಲಯದ ಜೀರ್ಣೋದ್ದಾರ ಕಾರ್ಯ ವಿಳಂಬವಾದ ಹಿನ್ನಲೆಯಲ್ಲಿ ಐದು ವರ್ಷದ ನಂತರ ನಡೆಯುತ್ತಿದ್ದ ವೈಭವದ ಜಾತ್ರೆಯ ನಡುವೆ ಬೆಂಕಿ ಅವಘಡ ಸಂಭವಿಸಿದೆ, ಇದು ಹಲವಾರು ಸುದ್ದಿಗಳಿಗೆ ದಾರಿಮಾಡಿಕೊಟ್ಟಿದೆ.

ಮೈಸೂರು ತಾಲೂಕಿನ ಸಿದ್ದರಾಮನಹುಂಡಿಯ, ಮುಜರಾಯಿ ವ್ಯಾಪ್ತಿಯಲ್ಲಿ ಬರುವ ಸಿದ್ದರಾಮೇಶ್ವರ ಮತ್ತು ಚಿಕ್ಕಮ್ಮದೇವಿ ಜಾತ್ರಾ ಮಹೋತ್ಸವ ಮಾರ್ಚ್ 24-26ರ ವರೆಗೆ ನಡೆಯುತ್ತಿದೆ. ಈ ದೇವಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ರಾಮದೇವರು. (ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟನೆ)

ಸಿದ್ದರಾಮೇಶ್ವರಸ್ವಾಮಿ ಜಾತ್ರೆಯ ಎರಡನೇ ದಿನದಲ್ಲಿ ದೇವರ ರಕ್ಷಣೆಗೆ ಸಾಂಪ್ರದಾಯಿಕವಾಗಿ ಬಳಸುವ ಛತ್ರಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಜಾತ್ರೆಯಲ್ಲಿ ಭಾಗವಹಿಸಿದ್ದವರು ವಿಚಲಿತರಾಗಿದ್ದು, ಜೊತೆಗೆ, ಈ ಘಟನೆಯ ನಂತರ ಹೀಗಾಗುತ್ತೆ, ಹಾಗುಗುತ್ತಂತೆ.. ಎನ್ನುವ ಸುದ್ದಿ ಊರೆಲ್ಲಾ ಹಬ್ಬಿಕೊಂಡಿದೆ.

ದೇವಾಲಯದಲ್ಲಿ ನಡೆದುಕೊಂಡು ಬರುತ್ತಿರುವ ಪದ್ದತಿಯ ಪ್ರಕಾರ, ಹುಲ್ಲಿನ ಮೆದೆಯಿಂದ ಪೂಜೆ ಮಾಡುವ ಸಮಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ತಕ್ಷಣ ಎಚ್ಚರ ಗೊಂಡ ಗ್ರಾಮಸ್ಥರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಹುಟ್ಟೂರ ಜಾತ್ರೆಯಲ್ಲಿ ಸಿದ್ದರಾಮಯ್ಯ)

ಬೆಂಕಿ ನಂದಿತಾದರೂ ಈ ಘಟನೆ ಸಿದ್ದರಾಮಯ್ಯನವರಿಗೆ ಮುಂದಿನ ದಿನಗಳಲ್ಲಿ ಕಂಟಕ ಕಾದಿದೆ ಎನ್ನುವ ಊರಿನವರ ಅಂತೆ ಕಂತೆ ಮಾತುಕತೆ ಮಾತ್ರ ಇನ್ನೂ ಉರಿಯುತ್ತಲೇ ಇದೆ. ಮುಂದಿನ ಪುಟ ಕ್ಲಿಕ್ಕಿಸಿ..

ದೇವರ ರಕ್ಷಣಾ ಛತ್ರಿ

ದೇವರ ರಕ್ಷಣಾ ಛತ್ರಿ

ಆಗಿದ್ದೇನೆಂದರೆ, ಜಾತ್ರೆಯಲ್ಲಿ ದೇವರ ರಕ್ಷಣಾ ಛತ್ರಿಗೆ ಹುಲ್ಲಿನ ಮೆದೆಯಿಂದ ಪೂಜೆ ಮಾಡುವ ಪದ್ದತಿಯಿದೆ. ಐದು ವರ್ಷದ ನಂತರ ನಡೆಯುತ್ತಿರುವ ಜಾತ್ರೆ ಎನ್ನುವುದು ಒಂದು ಕಾರಣವಾದರೆ, ಮುಖ್ಯಮಂತ್ರಿಗಳು ಖುದ್ದು ಜಾತ್ರೆಯಲ್ಲಿ ಭಾಗವಹಿಸಿದ್ದರಿಂದ ವಿಪರೀತ ಜನಸಂದಣಿ ನೆರೆದಿತ್ತು.

ಭಾರೀ ಅನಾಹುತ ತಪ್ಪಿಸಿದ ಗ್ರಾಮಸ್ಥರು

ಭಾರೀ ಅನಾಹುತ ತಪ್ಪಿಸಿದ ಗ್ರಾಮಸ್ಥರು

ಆ ಸಮಯದಲ್ಲಿ ಆಕಸ್ಮತ್ತಾಗಿ ಅಗ್ನಿ ಅವಘಡ ಸಂಭವಿಸಿದೆ. ತಕ್ಷಣ ಎಚ್ಚೆತ್ತುಗೊಂಡ ಗ್ರಾಮಸ್ಥರು ಬೆಂಕಿಯನ್ನು ನಂದಿಸಿ, ಭಾರೀ ಅನಾಹುತವಾಗುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮಸ್ಥರ ವ್ಯಾಖ್ಯಾನ

ಗ್ರಾಮಸ್ಥರ ವ್ಯಾಖ್ಯಾನ

ಜಾತ್ರೆಯಲ್ಲಿ ಬೆಂಕಿ ಕಾಣಿಸಿರುವುದಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿದ್ದ ಜನರಲ್ಲಿ ಹಲವಾರು ಜನ, ಘಟನೆಯ ಬಗ್ಗೆ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿ, ಚರ್ಚಿಸುತ್ತಿದ್ದಾರೆ. ಇದೊಂದು ಅಪಶಕುನ, ಸಿದ್ದರಾಮಣ್ಣ ಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ.

ಕೆಲವೊಂದು ಪದ್ದತಿ ನಿಷೇಧ

ಕೆಲವೊಂದು ಪದ್ದತಿ ನಿಷೇಧ

ನಡೆದುಕೊಂಡು ಬರುತ್ತಿರುವ ಕೆಲವೊಂದು ಸಾಂಪ್ರದಾಯಿಕ ಪದ್ದತಿಗಳನ್ನು ನಿಷೇಧಿಸಲು ಸರಕಾರ ಹೊರಟಿದೆ, ಇದು ಸಿದ್ದರಾಮಯ್ಯ ಅವರಿಗೆ ಮುಳುವಾಗಲಿದೆ. ಅವರು ಸ್ಥಾನ ತ್ಯಜಿಸಬೇಕಾಗುತ್ತದೆ ಎಂದು ಹಲವಾರು ಗ್ರಾಮಸ್ಥರು ಮಾತಾಡಿಕೊಳ್ಳುತ್ತಿದ್ದಾರೆ.

ಕಾಲವಷ್ಟೇ ಉತ್ತರ ಹೇಳಬೇಕಿದೆ

ಕಾಲವಷ್ಟೇ ಉತ್ತರ ಹೇಳಬೇಕಿದೆ

ಇತ್ತೀಚೆಗೆ ಹೊರಬಿದ್ದ ಮೂರು ಅಸೆಂಬ್ಲಿ ಕ್ಷೇತ್ರಗಳ ಫಲಿತಾಂಶ, ಪಂಚಾಯತ್ ಚುನಾವಣೆ, ಎಸಿಬಿ ರಚನೆ ಮುಂತಾದ ವಿದ್ಯಮಾನಗಳಿಂದ ಹೈಕಮಾಂಡ್, ಸಿದ್ದು ವಿರುದ್ದ ಗರಂ ಆಗಿದ್ದಾರೆ, ಅವರ ಸ್ಥಾನಕ್ಕೆ ಕಂಟಕ ಬರಲಿದೆ ಎನ್ನುವ ಸುದ್ದಿಯ ನಡುವೆ, ಸಿದ್ದು ಹುಟ್ಟೂರಿನಲ್ಲಿ ನಡೆದ ಬೆಂಕಿ ಅವಘಡದ ಘಟನೆ ಕಾಕತಾಳೀಯವಾಗಿದ್ದರೂ, ಎಲ್ಲದಕ್ಕೂ ಕಾಲವಷ್ಟೇ ಉತ್ತರ ಹೇಳಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fire accident occurred during annual Jatra Mahotsava at Siddarameshwara temple, Siddaramayyana Hundi in Mysuru. This temple situated at Chief Minister Siddaramaiah's home town.
Please Wait while comments are loading...