ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಾರಿದ್ದ ಅಶ್ವಿನ್ ರಾವ್
ಬೆಂಗಳೂರು, ಜುಲೈ 04 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರ ಪುತ್ರ ಅಶ್ವಿನ್ ರಾವ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದಲ್ಲಿಯೂ ಅಶ್ವಿನ್ ರಾವ್ ವಿರುದ್ಧ ಹಿಂದೆ ಎಫ್‌ಐಆರ್ ದಾಖಲಾಗಿದೆ.
ಅಶ್ವಿನ್ ರಾವ್ ಮತ್ತು ಅವರ ಸ್ನೇಹಿತರ ವಿರುದ್ಧ 16 ಎಕರೆ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ. 2008ರ ಜುಲೈ 13ರಂದು ವಿಕಾರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದ ಅಶ್ವಿನ್ ರಾವ್ ಜಾಮೀನು ಪಡೆದಿದ್ದರು. [ಅಶ್ವಿನ್ ರಾವ್ ವಿರುದ್ಧ ಎಫ್ ಐಆರ್]

ಅಶ್ವಿನ್ ರಾವ್ ಮತ್ತು ಅವರ ಸ್ನೇಹಿತರು 16 ಎಕರೆ ಜಾಗವನ್ನು ಎರಡು ರಿಯಲ್ ಎಸ್ಟೇಟ್ ಕಂಪೆನಿಗೆ 33 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಆದರೆ, ಈ ಜಾಗವನ್ನು ಖರೀದಿಸಿದ ಎರಡು ರಿಯಲ್ ಎಸ್ಟೇಟ್ ಕಂಪನಿಗಳು ನಕಲಿ ದಾಖಲೆ ಸೃಷ್ಟಿಸಿ ನಮಗೆ ಭೂಮಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. [ಅಶ್ವಿನ್ ರಾವ್ ವಿರುದ್ಧದ ತನಿಖೆಗೆ ತಡೆಯಾಜ್ಞೆ]
2008ರ ಜುಲೈ 13ರಂದು ವಿಕಾರಾಬಾದ್ ಪೊಲೀಸರು ದೂರಿನ ಅನ್ವಯ ಎಫ್‌ಐಆರ್ ದಾಖಲಿಸಿದ್ದರು. 2010 ಆಗಸ್ಟ್ 9ರಂದು 8 ಜನರ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಶ್ರೀನಿವಾಸ್ ಮೊದಲ ಆರೋಪಿಯಾಗಿದ್ದು, ಅಶ್ವಿನ್ ರಾವ್ 2 ಆರೋಪಿಯಾಗಿದ್ದಾರೆ. ಈ ಆರೋಪದಲ್ಲಿ ಅಶ್ವಿನ್ ರಾವ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಜಾಮೀನು ಪಡೆದಿದ್ದರು.












Click it and Unblock the Notifications