ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಶಿಕ್ಷಣ ಮಂಡಳಿಗಳಿಗೆ ಸ್ವಾಯತ್ತತೆ ಕೈತಪ್ಪುವ ಭೀತಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 31: ರಾಜ್ಯ ಸರ್ಕಾರದ ಸುಪರ್ದಿಯಲ್ಲಿರುವ ಶಿಕ್ಷಣಮಂಡಳಿಗಳಿಗೆ ಸ್ವಾಯತ್ತತೆ ಕೈತಪ್ಪುವ ಭೀತಿ ಆರಂಭವಾಗಿದೆ.

ಶಿಕ್ಷಣ ಮಂಡಳಿಗಳನ್ನು , ಮಾನವ ಸಂಪನ್ಮೂಲ ಸಚಿವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವೇ ನಿಯಂತ್ರಿಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ಕರಡು ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

"ಸಾವಿರಾರು ಜನರ ಕೊಂದ ಟಿಪ್ಪು ಕಥೆ ಮಕ್ಕಳಿಗೇಕೆ?" ಪ್ರಹ್ಲಾದ್ ಜೋಶಿ ಸಮರ್ಥನೆ

ಒಂದು ವೇಳೆ ಇದು ಜಾರಿಯಾದರೆ ರಾಜ್ಯ ಶಿಕ್ಷಣ ಮಂಡಳಿಗಳು ಸ್ವಾತತ್ತತೆ ಕಳೆದುಕೊಳ್ಳಲಿವೆ.ಇಸ್ರೋದ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ನೇತೃತ್ವದ ಸಮಿತಿ ಈ ಕರಡು ಪ್ರತಿ ರಚನೆ ಮಾಡಿದ್ದು, ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ವರದಿ ಸಲ್ಲಿಸಿದೆ.

Fear Lapse Of autonomy For state Education Boards

ಕೇಂದ್ರ ಶಿಕ್ಷಣ ಸಚಿವರ ನೇತೃತ್ವದಲ್ಲಿ ರಾಷ್ಟ್ರ ಮಟ್ಟದಲ್ಲಿ ನಿಯಂತ್ರಣ ಸಮಿತಿ ರಚನೆ ಮಾಡಿ , ಎಲ್ಲಾ ಶಿಕ್ಷಣ ಮಂಡಳಿಗಳ ಮೌಲ್ಯ ಮಾಪನ ಮಾಡಬೇಕು. ಮತ್ತು 21ನೇ ಶತಮಾನದ ಕೌಶಲ್ಯ ಅಗತ್ಯಕ್ಕೆ ತಕ್ಕಂತೆ ಮಾನದಂಡಗಳನ್ನು ರೂಪಿಸಬೇಕು ಎಂದು ಕರಡು ಪ್ರತಿಯಲ್ಲಿ ಹೇಳಲಾಗಿದೆ.

ಕಂಠಪಾಠ ಮಾಡಿಸಿ ಪರೀಕ್ಷೆ ಬರೆಯುವುದಕ್ಕಿಂತ , ಹೊಸ ನೀತಿಯಲ್ಲಿ ವಿದ್ಯಾರ್ಥಿ ಸಾಮರ್ಥ್ಯವನ್ನು ಪರಿಗಣಿಸಲಾಗುತ್ತದೆ. ಭಾರಿ ಪ್ರಯತ್ನದ ಬದಲಿಗೆ ಸಾಮಾನ್ಯ ಪ್ರಯತ್ನದ ಮೂಲಕವೇ ಪರೀಕ್ಷೆ ತೇರ್ಗಡೆಯಾಗುವಂತೆ ರೂಪಿಸಲಾಗುತ್ತದೆ ಎಂದು ಸಮಿತಿ ಹೇಳಿದೆ.

English summary
The fear of Lapse autonomy for the boards of education in the state government has begun.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X