• search

ರಾಹುಲ್ ಕೊರಳಿಗೆ ಕರೆಕ್ಟಾಗಿ ಬಿದ್ದ ಹೂವಿನ ಹಾರ: ಭೇಷ್ ಅಂದ ರಮ್ಯಾ

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ರಮ್ಯಾ, ನಟಿ ಹಾಗು ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಕರ್ನಾಟಕದ ಪ್ರತಿಭೆಗೆ ಫಿದಾ | Oneindia Kannada

    ತುಮಕೂರಿನಲ್ಲಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದು, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ, ವ್ಯಕ್ತಿಯೊಬ್ಬರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದೂರದಿಂದ ಹೂವಿನ ಹಾರ ಎಸೆದಿದ್ದರು. ಅದು ಕರೆಕ್ಟಾಗಿ ರಾಹುಲ್ ಕೊರಳಿಗೆ ಬಿದ್ದಿತ್ತು.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ, ವ್ಯಕ್ತಿ ಎಸೆದ ಹೂಹಾರ ರಾಹುಲ್ ಕೊರಳಿಗೆ ಬೀಳುವ ದೃಶ್ಯದ ವಿಡಿಯೋವನ್ನು ಶೇರ್ ಮಾಡಿ, ಕರ್ನಾಟಕದ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತಿ ಪಡಿಸಿ, ಟ್ವೀಟ್ ಮಾಡಿದ್ದರು.

    ನಮೋ ಆಪ್ ಡಿಲಿಟ್ ಮಾಡಿ ಎಂದ ರಮ್ಯಾ, ಮಂಗಳಾರತಿ ಮಾಡಿದ ಟ್ವಿಟ್ಟಿಗರು

    ತೆರೆದ ವಾಹನದ ಮೂಲಕ, ಭಾರೀ ಭದ್ರತೆಯೊಂದಿಗೆ ರೋಡ್ ಶೋ ನಡೆಸುತ್ತಿದ್ದ ವೇಳೆ ರಾಹುಲ್ ಗಾಂಧಿಯ ಜೊತೆ ಭದ್ರತಾ ಸಿಬ್ಬಂದಿಗಳು ಇದ್ದರು. ಅಭಿಮಾನಿಗಳು, ಕಾರ್ಯಕರ್ತರು ಇಕ್ಕೆಲಗಳಲ್ಲಿ ನಿಂತು ರಾಹುಲ್ ಗಾಂಧಿಗೆ ಜಯಘೋಷ ಹಾಕುತ್ತಿದ್ದರು.

    ಆ ವೇಳೆ, ಅಭಿಮಾನಿಯೊಬ್ಬ ಕೈಯಲ್ಲಿದ್ದ ಹೂವಿನ ಹಾರವನ್ನು ತೆರೆದ ವಾಹನದತ್ತ ಎಸೆದಿದ್ದಾರೆ, ಅದು ಸರಿಯಾಗಿ ರಾಹುಲ್ ಗಾಂಧಿ ಕೊರಳಿಗೆ ಬಂದು ಬಿದ್ದಿದೆ. ಒಂದು ಕ್ಷಣ ಅವಕ್ಕಾದ ರಾಹುಲ್, ಹಾರವನ್ನು ಕತ್ತಿನಿಂದ ತೆಗೆದು ಮತ್ತೆ ಜನರತ್ತ ಕೈಬೀಸಲು ಆರಂಭಿಸಿದರು. ಇದನ್ನು ಹಿಂದೆ ನಿಂತಿದ್ದ ವ್ಯಕ್ತಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದ.

    ಫೇಸ್ ಬುಕ್ ಮಾಹಿತಿ ಸೋರಿಕೆ; ರವಿಶಂಕರ್ ಪ್ರಸಾದ್ ವರ್ಸಸ್ ರಮ್ಯಾ

    ಈ ವಿಡಿಯೋದ ತುಣಕನ್ನು ಶೇರ್ ಮಾಡಿರುವ ರಮ್ಯಾ, "Karnataka's got talent!" ಎಂದು ಟೈಟಲ್ ನೀಡಿ ಟ್ವೀಟ್ ಮಾಡಿದ್ದರು. ಇದಕ್ಕೆ ನೂರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ರಾಹುಲ್ ಭದ್ರತೆಯ ಬಗ್ಗೆ ಕೂಡಾ ಟ್ವಿಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.

    ರಮ್ಯಾ ಟ್ವೀಟಿಗೆ ಮಿಶ್ರ ಪ್ರತಿಕ್ರಿಯೆ

    @divyaspandana ಅಕೌಂಟಿನ ಮೂಲಕ ರಮ್ಯಾ ಮಾಡಿರುವ ಈ ಟ್ವೀಟಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಟ್ವೀಟ್ 1,907 ಬಾರಿ ರಿಟ್ವೀಟ್ ಆಗಿದ್ದು ಜೊತೆಗೆ 4,500ಕ್ಕೂ ಹೆಚ್ಚು ಜನ ಇದನ್ನು ಲೈಕ್ ಮಾಡಿದ್ದಾರೆ. ಹಾಗೂ, 475ಕ್ಕೂ ಹೆಚ್ಚು ಪರವಿರೋಧ ಕಾಮೆಂಟುಗಳು ಇದಕ್ಕೆ ಬಂದಿವೆ. Karnataka's got talent! 😉 ಎಂದು ರಮ್ಯಾ ಟ್ವೀಟ್ ಮಾಡಿದ್ದರು.

    ಶಕ್ತಿಶಾಲಿಯಲ್ಲದ ಚೌಕೀದಾರ ಪಾಕಿಸ್ತಾನ ಬಯಸುವುದಿಲ್ಲ

    ಶಕ್ತಿಶಾಲಿಯಲ್ಲದ ಚೌಕೀದಾರ ಪಾಕಿಸ್ತಾನ ಬಯಸುವುದಿಲ್ಲ

    ಭವಿಷ್ಯದ ಪ್ರಧಾನಿಯ ಭದ್ರತೆಯ ಬಗ್ಗೆ ಚಿಂತಿಸಬೇಕಾಗಿದೆ. ಭಕ್ತರಿಗೆ ರಾಹುಲ್ ಗಾಂಧಿಯ ಜನಪ್ರಿಯತೆ ಹೆಚ್ಚಾಗುತ್ತಿರುವುದಕ್ಕೆ ಆತಂಕವಾಗಿರಬಹುದು.. ಭಕ್ತರು ಭಾರತೀಯರು, ಚಿಂತಿಸಬೇಕಾಗಿರುವ ವಿಚಾರವೆಂದರೆ, ಶಕ್ತಿಶಾಲಿಯಲ್ಲದ ಚೌಕೀದಾರರೊಬ್ಬರರು ಇರುವುದನ್ನು ಬಹುಷ: ಪಾಕಿಸ್ತಾನ ಬಯಸುವುದಿಲ್ಲ.

    ಜಾತ್ರೇ'ಲಿ ರಿಂಗ್ ಹಾಕಿ ಸೋಪ್ ಗೆಲ್ಲುವುದು ಹಿಂಗೇನೇ

    ಜಾತ್ರೇ'ಲಿ ರಿಂಗ್ ಹಾಕಿ ಸೋಪ್ ಗೆಲ್ಲುವುದು ಹಿಂಗೇನೇ

    ಪ್ರಸಕ್ತ ದೇಶದ ರಾಜಕೀಯದಲ್ಲಿ ನಿಮ್ಮ ಜೀವ ನಮಗೆ ಮುಖ್ಯ, ಹಾಗಂತ ಜನ ಕೊಡುವುದನ್ನೆಲ್ಲಾ ಸ್ವೀಕರಿಸಬೇಕೆಂದು ಏನೂ ಇಲ್ಲ. .. ಹಾರದ ಬದಲು ಚಪ್ಪಲಿ ಬಿಸಾಕಿದ್ದರೆ... ಜಾತ್ರೇ'ಲಿ ರಿಂಗ್ ಹಾಕಿ ಸೋಪ್ ಗೆಲ್ಲುವುದು ಹಿಂಗೇನೇ!!! ಕನ್ನಡಿಗರು ಟ್ಯಾಲೆಂಟ್ ಗಳೇ ಆದರೆ ರಾಹುಲ್ ಅಲ್ಲ...ಈ ರೀತಿಯ ಕಾಮೆಂಟುಗಳೂ ಬಂದಿವೆ.

    ನಾನು ನಿಮ್ಮ ದೊಡ್ಡ ಅಭಿಮಾನಿ..ನೀವು ಮಂಡ್ಯದಲ್ಲೇ ಸ್ಪರ್ಧಿಸಬೇಕು

    ನಾನು ನಿಮ್ಮ ದೊಡ್ಡ ಅಭಿಮಾನಿ..ನೀವು ಮಂಡ್ಯದಲ್ಲೇ ಸ್ಪರ್ಧಿಸಬೇಕು

    ಹಾರ ಎಸೆದವರಿಗೆ ಟ್ಯಾಲೆಂಟ್ ಇದೆ, ನಮ್ಮ ಚಿಂತೆ ರಾಹುಲ್ ಬಗ್ಗೆ... ನಾನು ನಿಮ್ಮ ದೊಡ್ಡ ಅಭಿಮಾನಿ..ನೀವು ಮಂಡ್ಯದಲ್ಲೇ ಸ್ಪರ್ಧಿಸಬೇಕು..ಹೂವಿನ ಬದಲು ಚಪ್ಪಲಿ ಬೀಳಲಿಲ್ಲ.. ಇಲ್ಲದಿದ್ದರೆ ಆ ಟ್ಯಾಲೆಂಟ್ ಎಲ್ಲಿ ಕಾಣಿಸುತ್ತಿದ್ದ.. ಚಪ್ಪಲಿ ನಿಮ್ಮಂತಹ ಕುರುಡು ಭಕ್ತರು ಬಿಸಾಕುತ್ತಾರೆ....

    ಈಗಾಗಲೇ ರಾಜೀವ್ ಗಾಂಧಿಯನ್ನು ಕಳೆದುಕೊಂಡಿದ್ದೇವೆ

    ಈಗಾಗಲೇ ರಾಜೀವ್ ಗಾಂಧಿಯನ್ನು ಕಳೆದುಕೊಂಡಿದ್ದೇವೆ

    ಇದೊಂದು ದೊಡ್ಡ ಭದ್ರತಾ ವೈಫಲ್ಯ, ಸಾಕು ಈಗಾಗಲೇ ರಾಜೀವ್ ಗಾಂಧಿಯನ್ನು ಕಳೆದುಕೊಂಡಿದ್ದೇವೆ.. ರಾಹುಲ್ ಗಾಂಧಿಗೆ ಭದ್ರತೆ ಹೆಚ್ಚಿಸಿ.. ಮೋದಿಯವರು ನೂರಾರು ವರ್ಷ ಬಾಳಲಿ ಎಂದು ಪ್ರಾರ್ಥಿಸುತ್ತೇವೆ ... ಹೀಗೆ ಹಲವಾರು ಟ್ವೀಟುಗಳು ಬಂದಿವೆ...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Fan thrown garland to Rahul Gandhi during election campaign in Tumakuru, AICC Sociam Media head Ramya appreciating tweet. Ramya tweeted, "Karnataka’s got talent!", twitterite response for this tweet.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more