ಜಾಲತಾಣದಲ್ಲಿ ಹರಿದಾಡುತ್ತಿವೆ ಕಾಡ್ಗಿಚ್ಚಿನ ಸುಳ್ಳು ಚಿತ್ರಗಳು, ಎಚ್ಚರ

ಬೆಂಗಳೂರು, ಫೆಬ್ರವರಿ 25: ಬಂಡಿಪುರ, ಚಾಮುಂಡಿ ಬೆಟ್ಟ, ನಂದಿಬೆಟ್ಟ ಇನ್ನೂ ಹಲವು ಕಡೆ ಎರಡು ದಿನದಿಂದ ಕಾಡ್ಗಿಚ್ಚು ತನ್ನ ರೌದ್ರ ನರ್ತನ ತೋರುತ್ತಿದೆ. ರಾಜ್ಯದ ಪ್ರಕೃತಿ ಸಂಪತ್ತು ಬೆಂಕಿಗೆ ಆಹುತಿಯಾಗುತ್ತಿರುವುದಕ್ಕೆ ಹಲವರು ಮರುಗುತಿದ್ದಾರೆ.

ಮಾಮೂಲಿನಂತೆ ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಹಲವರು ಕಾಳಜಿ ವ್ಯಕ್ತಪಡಿಸಿದ್ದಾರೆ. ಆದರೆ ಇದೇ ಸಮಯದಲ್ಲಿ ಕಾಡ್ಗಿಚ್ಚಿನ ಬಗ್ಗೆ ಸುಳ್ಳು ಸುದ್ದಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಆಗುತ್ತಿವೆ.

ಮೊಲ, ಜಿಂಕೆ, ಹಾವುಗಳು, ಕೋತಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಹರದಾಡುತ್ತಿವೆ. ಆದರೆ ಇವು ರಾಜ್ಯದಲ್ಲಿ ಹಬ್ಬಿರುವ ಕಾಡ್ಗಿಚ್ಚಿನಿಂದ ಸತ್ತ ಪ್ರಾಣಿಗಳಲ್ಲ. ಅಷ್ಟಕ್ಕೂ ಇವ್ಯಾವುವು ನಮ್ಮ ರಾಜ್ಯದ ಚಿತ್ರಗಳೇ ಅಲ್ಲ.

Fake pictures of forest fire cerculating in social media

ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಸಹ ಈ ಬಗ್ಗೆ ಎಚ್ಚರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರಗಳು ನಿಜವಲ್ಲ ಎಂದು ಹೇಳಿದೆ. ಅಲ್ಲದೆ ಈ ವರೆಗೆ ಕಾಡ್ಗಿಚ್ಚಿನಿಂದ ಪ್ರಾಣಿಗಳ ಜೀವಕ್ಕೆ ಹಾನಿ ಆಗಿರುವ ವರದಿಗಳು ಕಂಡು ಬಂದಿಲ್ಲ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+