ಬಾಬಾ ಸಾಹೇಬ್ ಅಂಬೇಡ್ಕರ್ & ಮನುಸ್ಮೃತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದು ಏನು?
ಸಿಎಂ ಸಿದ್ದರಾಮಯ್ಯ ಹಾಗೂ ಆರ್‌ಎಸ್‌ಎಸ್ & ಬಿಜೆಪಿ ನಡುವೆ ಆಗಾಗ ನೇರ ಯುದ್ಧವೇ ನಡೆಯುತ್ತದೆ. ಆದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪಟ್ಟಕ್ಕೆ ಏರಿದ ನಂತರ, ಈ ಫೈಟಿಂಗ್ ಒಂದಷ್ಟು ತಣ್ಣಗಾಗಿತ್ತು. ಆದರೆ ಇದೀಗ ದಿಢೀರ್ ಮತ್ತೆ ಕಿಚ್ಚು ಹೊತ್ತಿಕೊಂಡಿದೆ & ಇನ್ನೊಮ್ಮೆ ಘೋರ ಮಾತಿನ ಯುದ್ಧ ನಡೆಯುವ ಮುನ್ಸೂಚನೆ ಸಿಕ್ಕಿದೆ. ಈ ಸಮಯದಲ್ಲೇ, ಸಿಎಂ ಸಿದ್ದರಾಮಯ್ಯ ಬಾಬಾ ಸಾಹೇಬ್ ಅಂಬೇಡ್ಕರ್ & ಮನುಸ್ಮೃತಿ ಬಗ್ಗೆ ಮಾತನಾಡಿದ್ದಾರೆ.
ಯೆಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಬಾಬಾ ಸಾಹೇಬ್ ಅಂಬೇಡ್ಕರ್ & ಮನುಸ್ಮೃತಿ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ವಿರುದ್ಧ, ಸಾಲು ಸಾಲು ಆರೋಪ ಮಾಡುತ್ತಿರುವ ಸಮಯದಲ್ಲೇ ತಕ್ಕ ತಿರುಗೇಟು ನೀಡುವ ರೀತಿಯೇ ರೀಪ್ಲೇ ಕೊಟ್ಟಿದ್ದಾರೆ. ಅದರಲ್ಲೂ 'ಮನುಸ್ಮೃತಿ' ಬಗ್ಗೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ. ಇದರ ಜೊತೆಗೆ ಭಾರಿ ಚರ್ಚೆಗೆ ಕೂಡ ವೇದಿಕೆಯ ಒದಗಿಸಿದೆ. ಹಾಗಾದ್ರೆ 'ಮನುಸ್ಮೃತಿ' & ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ನಿಜಕ್ಕೂ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? ಮುಂದೆ ಓದಿ.

'ಮನುಸ್ಮೃತಿಯನ್ನು ಸುಟ್ಟುಹಾಕಿದ್ದರು...'
ಈ ಬಗ್ಗೆ ಟ್ವೀಟ್ ಮಾಡಿದ ಸಿಎಂ ಬಿಜೆಪಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ. 'ಅಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಾತಿ ಮತ್ತು ಲಿಂಗತಾರತಮ್ಯವನ್ನು ಸಾರುವ ಅಲಿಖಿತ ಸಂವಿಧಾನ ಮನುಸ್ಮೃತಿಯನ್ನು ಸುಟ್ಟುಹಾಕಿದ್ದರು. ಇಂದು ನಾವೆಲ್ಲರೂ ನಮ್ಮೊಳಗೆ ಇನ್ನೂ ಉಳಿದಿರಬಹುದಾದ ಆ ಮನುಸ್ಮೃತಿಯ ಪಳೆಯುಳಿಕೆಗಳನ್ನು ಸುಟ್ಟು ಹಾಕಬೇಕು. ಆ ಅಲಿಖಿತ ಸಂವಿಧಾನದ ನಾಶವಾಗದೆ ಬಾಬಾ ಸಾಹೇಬ್ ಅಂಬೇಡ್ಕರ್ ದೇಶಕ್ಕೆ ನೀಡಿರುವ ಲಿಖಿತ ಸಂವಿಧಾನದ ಸಂಪೂರ್ಣ ಅನುಷ್ಠಾನ ಅಸಾಧ್ಯ. ನಾಡಿನ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನವೇ ಧರ್ಮಗ್ರಂಥವಾಗಲಿ. ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಬದುಕುವ ಮೂಲಕ ಮನುವಾದವನ್ನು ಹಿಮ್ಮೆಟ್ಟಿಸೋಣ.' ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಅಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಾತಿ ಮತ್ತು ಲಿಂಗತಾರತಮ್ಯವನ್ನು ಸಾರುವ ಅಲಿಖಿತ ಸಂವಿಧಾನ ಮನುಸ್ಮೃತಿಯನ್ನು ಸುಟ್ಟುಹಾಕಿದ್ದರು.
— Siddaramaiah (@siddaramaiah) December 25, 2023
ಇಂದು ನಾವೆಲ್ಲರೂ ನಮ್ಮೊಳಗೆ ಇನ್ನೂ ಉಳಿದಿರಬಹುದಾದ ಆ ಮನುಸ್ಮೃತಿಯ ಪಳೆಯುಳಿಕೆಗಳನ್ನು
ಸುಟ್ಟು ಹಾಕಬೇಕು.
ಆ ಅಲಿಖಿತ ಸಂವಿಧಾನದ ನಾಶವಾಗದೆ ಬಾಬಾ ಸಾಹೇಬ್ ಅಂಬೇಡ್ಕರ್
ದೇಶಕ್ಕೆ ನೀಡಿರುವ ಲಿಖಿತ… pic.twitter.com/126R8vjTNM

ಬಿಜೆಪಿ ರಿಯಾಕ್ಷನ್ ಹೇಗಿರಬಹುದು?
ಒಟ್ನಲ್ಲಿ 2024ರ ಲೋಕಸಭೆ ಚುನಾವಣೆಗೆ ಮೊದಲು ಹೊಸ ಚರ್ಚೆ ಶುರುವಾಗಿದೆ. ಇದು, ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ & ಆರ್‌ಎಸ್‌ಎಸ್ ನಡುವೆ ನೇರ ಯುದ್ಧಕ್ಕೆ ವೇದಿಕೆಯ ಒದಗಿಸುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ. ಹೀಗಾಗಿ ಇದೀಗ ಸಿಎಂ ಸಿದ್ದರಾಮಯ್ಯ ಅವರು ಪೋಸ್ಟ್ ಮಾಡಿರುವ ಟ್ವೀಟ್‌ಗೆ, ಕರ್ನಾಟಕ ಬಿಜೆಪಿ ಯಾವ ರೀತಿ ರಿಯಾಕ್ಷನ್ ಕೊಡುತ್ತದೆ? ಅಂತಾ ಕಾದು ನೋಡಬೇಕಿದೆ.












Click it and Unblock the Notifications