Lok Sabha News18 Exit Poll Result: ಲೋಕಸಭೆ ಚುನಾವಣೆ 2024ರಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು?

ಭಾರತದ ಲೋಕಸಭೆ ಚುನಾವಣೆ ಮುಕ್ತಾಯವಾಗಿದ್ದು, ಇಂದು ಕೊನೆಯ ಹಂತದ ವೋಟಿಂಗ್ ಮುಗಿದಿದೆ. ಈ ಮೂಲಕ 2024ರ ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರು ಆಗಿದ್ದು, ಇಂದು ಚುನಾವಣೋತ್ತರ ಸಮೀಕ್ಷೆ ವರದಿ ಹೊರಬಿದ್ದಿದೆ. ಅದರಲ್ಲೂ ಜಗತ್ತಿನ ಗಮನ ಸೆಳೆದಿದ್ದ ಭಾರತದ ಲೋಕಸಭೆ ಚುನಾವಣೆಯಲ್ಲಿ ಗೆಲುವು ಯಾರಿಗೆ? ಬಿಜೆಪಿ ಅಥವಾ ಕಾಂಗ್ರೆಸ್? ಎಂಬ ಬಿಲಿಯನ್ ಡಾಲರ್ ಕುತೂಹಲದ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಮಾಹಿತಿ ತಿಳಿಯಲು ಮುಂದೆ ಓದಿ.

2024ರ ಲೋಕಸಭೆ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ನಡೆಯಿತು. ಹೀಗೆ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮತದಾನ ನಡೆಸಲಾಗಿತ್ತು. ಇಂದು ಅಂತಿಮ ಹಂತದ ಮತದಾನ ಮುಕ್ತಾಯವಾಗಿದ್ದು, ಚುನಾವಣೋತ್ತರ ಫಲಿತಾಂಶ ಹೊರಬಿದ್ದಿದೆ. ಈ ಪೈಕಿ 'ನ್ಯೂಸ್18 ಪೋಲ್ ಹಬ್' ಎಕ್ಸಿಟ್ ಪೋಲ್ ಪ್ರಕಾರ ಯಾವ ಪಕ್ಷ 2024ರ ಲೋಕಸಭೆ ಎಲೆಕ್ಷನ್‌ನ ಗೆದ್ದು ಬೀಗಲಿದೆ? ಬಿಜೆಪಿ ಹ್ಯಾಟ್ರಿಕ್ ಬಾರಿಸೋದು ಗ್ಯಾರಂಟಿ ಆಗಿದೆಯಾ? ಸಂಪೂರ್ಣವಾದ ಮಾಹಿತಿಗೆ ಮುಂದೆ ಓದಿ.

Exit Poll Result 2024 India News18 Lok Sabha Exit Poll Result For India

ಬಿಜೆಪಿಗೆ ಎಷ್ಟು ಸ್ಥಾನ? ಕಾಂಗ್ರೆಸ್‌ಗೆ ಎಷ್ಟು?

ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ 23 ರಿಂದ 26 ಸ್ಥಾನ ಸಿಗಬಹುದು ಎನ್ನಲಾಗಿದ್ದು, ಅದೇ ರೀತಿಯಾಗಿ ಕಾಂಗ್ರೆಸ್ ಕರ್ನಾಟಕದಲ್ಲಿ 3 ರಿಂದ 7 ಸ್ಥಾನ ಗೆಲ್ಲಬಹುದು ಎನ್ನುತ್ತಿದೆ 'ನ್ಯೂಸ್18 ಪೋಲ್ ಹಬ್' ಸಮೀಕ್ಷೆ. ಈ ಮೂಲಕ ಕರ್ನಾಟಕದಲ್ಲಿ ಬಿಜೆಪಿಗೆ ಭಾರಿ ಭರ್ಜರಿ ಗೆಲುವು ಸಿಗುವ ನಿರೀಕ್ಷೆ ಇದ್ದು, ತಮಿಳುನಾಡು ರಾಜ್ಯದಲ್ಲಿ ಇದೇ ಮೊದಲ ಬಾರಿ ಬಿಜೆಪಿ ಖಾತೆ ತೆರೆಯಲಿದೆ ಎನ್ನಲಾಗಿದೆ. ತಮಿಳುನಾಡು ರಾಜ್ಯದಲ್ಲಿ ಒಟ್ಟು 39 ಸ್ಥಾನಗಳು ಇದ್ದು, ಈ ಪೈಕಿ ಬಿಜೆಪಿ 1 ರಿಂದ 3 ಸ್ಥಾನದಲ್ಲಿ ಗೆಲ್ಲಬಹುದು ಎನ್ನಲಾಗಿದೆ. ಹಾಗೇ ಕಾಂಗ್ರೆಸ್ & ಡಿಎಂಕೆ 36 ರಿಂದ 39 ಸ್ಥಾನ ಗೆಲ್ಲಬಹುದು ಎಂಬ ನಿರೀಕ್ಷೆ ಇದ್ದು, ಇತರರು ಒಟ್ಟು 02 ಸ್ಥಾನದಲ್ಲಿ ಗೆಲ್ಲುವ ನಿರೀಕ್ಷೆಯನ್ನ 'ನ್ಯೂಸ್18 ಪೋಲ್ ಹಬ್' ಸಮೀಕ್ಷೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+