HD Devegowda: ಹಾಸನಕ್ಕೆ ಭವಾನಿ, ರಾಮನಗರಕ್ಕೆ ಅನಿತಾ; ದೇವೇಗೌಡರು ಕೊಟ್ಟ ಮಾತನ್ನ ಈಡೇರಿಸುತ್ತಾರಾ ಆ ಇಬ್ಬರು ಸೊಸೆಯಂದಿರು!
ಬೆಂಗಳೂರು,ಏಪ್ರಿಲ್21: ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ 93 ಅಭ್ಯರ್ಥಿಗಳನ್ನ ಪಟ್ಟಿಯನ್ನ ಬಿಡುಗಡೆ ಮಾಡಿದ್ದ ದಳಪತಿಗಳು ಈ ಬಾರೀ ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ದಿನೇ ದಿನೇ ಜೆಡಿಎಸ್ ಪ್ರಬಲ್ಯ ಕುಸಿಯುತ್ತಿದ್ದು, ಈ ಬಾರಿ ಹಲವು ನಾಯಕರು ಜೆಡಿಎಸ್ ಪಕ್ಷವನ್ನ ಬಿಟ್ಟು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷವನ್ನ ಸೇರ್ಪಡೆಯಾಗಿದ್ದಾರೆ. ಒಂದು ಕಡೆ ಮತ್ತೆ ಪಕ್ಷವನ್ನ ಸುಭದ್ರಗೊಳಿಸಲು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರು ಹಲವು ತಂತ್ರಗಾರಿಕೆಯನ್ನ ನಡೆಸಿದ್ದಾರೆ.

ಈಗಾಗಲೇ ಪಂಚರತ್ನರಥಯಾತ್ರೆ ಮೂಲಕ ಜನರ ಮನವನ್ನ ಸೆಳೆಯುವ ಮಾಸ್ಟರ್ ಪ್ಲಾನ್ ನಡೆಸಿದ್ದ ಜೆಡಿಎಸ್ ಪಕ್ಷಕ್ಕೆ ಟಿಕೆಟ್ ವಂಚಿತರಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಹಲವು ನಾಯಕರು ಸೇರ್ಪಡೆಯಾಗಿದ್ದು, 224 ಕ್ಷೇತ್ರಗಳ ಪೈಕಿ 211 ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನ ಘೋಷಿಸಿದ್ದಾರೆ.
ಹಳೇ ಮೈಸೂರು ಭಾಗದ ಕೇಲವು ಕೆಲವು ಕ್ಷೇತ್ರಗಳಾದ ಹಾಸನ, ರಾಮನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನ ಗೆಲ್ಲುವ ತಂತ್ರಗಾರಿಕೆಯನ್ನ ದೇವೇಗೌಡರು ನಡೆಸಿದ್ದು, ಹಾಸನ ಕ್ಷೇತ್ರ ಹಾಗೂ ರಾಮನಗರ ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ರಾಜಕೀಯ ಪ್ರಚಾರವನ್ನ ನಡೆಸಲಿದ್ದಾರೆ.
ಇನ್ನೂ ಪುತ್ರನಿಗಾಗಿ ಕ್ಷೇತ್ರ ತ್ಯಾಗ ಮಾಡಿರುವ ಅನಿತಾ ಕುಮಾರಸ್ವಾಮಿ ಹಾಗೂ ಹಾಸನ ಕ್ಷೇತ್ರಕ್ಕಾಗಿ ಪಟ್ಟು ಹಿಡಿದಿದ್ದ ಭವಾನಿ ರೇವಣ್ಣ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಮ್ಮ ಇಬ್ಬರು ಸೊಸೆಯಂದಿರಿಗೆ ಟಾಸ್ಕ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಮಂಡ್ಯ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ರಾಮನಗರ ಕ್ಷೇತ್ರ ಕುರಿತು ದೇವೇಗೌಡರ ಜೊತೆಗೆ ಚರ್ಚೆ ನಡೆಸಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜಕೀಯ ಪಾಠವನ್ನ ದೇವೇಗೌಡ್ರು ನಡೆಸಿದ್ದಾರೆ. ಇತ್ತ ರಾಮನಗರ ಮತ್ತು ಹಾಸನ ಎರಡು ಕ್ಷೇತ್ರಗಳನ್ನು ಶತಾಯಗತಾಯ ಮಾಡಿ ಗೆಲ್ಲಲೇಬೇಕೆಂದು ದೇವೇಗೌಡರು ಹೇಳಿದ್ದಾರೆ ಎನ್ನಲಾಗಿದೆ.
ಹೀಗಾಗಿ ರಾಮನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿಯೇ ಪುತ್ರನ ಪರ ಪ್ರಚಾರ ಮಾಡಿ ಕ್ಷೇತ್ರವನ್ನು ಗೆದ್ದುಕೊಂಡು ಬರಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿಗೆ ಹೆಗಲಿಗೆ ರಾಮನಗರ ಜವಾಬ್ದಾರಿಯನ್ನ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಸ್ವರೂಪ್ ಪ್ರಕಾಶ್ ರನ್ನು ಗೆಲ್ಲಿಸಿಕೊಂಡು ಬರುವ ಹೊಣೆ ಹೊರಿಸಲಾಗಿದೆ. ಹಲವು ವರ್ಷಗಳಿಂದ ಜೆಡಿಎಸ್ ಭದ್ರಕೋಟೆಯಾಗಿದ್ದ ಹಾಸನ ಕ್ಷೇತ್ರವನ್ನ ಮತ್ತೆ ಜೆಡಿಎಸ್ ವಶಕ್ಕೆ ಪಡೆಯಲು ದೇವೇಗೌಡರು ಮಾಸ್ಟರ್ ಪ್ಲಾನ್ ನಡೆಸಿದ್ದು, ಭವಾನಿ ರೇವಣ್ಣ ಅವರಿಗೆ ಈ ಟಾಸ್ಕ್ ನ ನೀಡಿದ್ದು, ಸ್ವರೂಪ್ ಪ್ರಕಾಶ್ ಅವರನ್ನ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನ ಭವಾನಿ ಹೆಗಲಿಗೆ ಹಾಕಿದ್ದಾರೆ.
ಈಗಾಗಲೇ ಹಾಸನ ಟಿಕೆಟ್ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸಹ ದೂರವಾಣಿ ಕರೆ ಮಾಡಿ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಉತ್ತಮ ಸ್ಥಾನದ ಭರವಸೆಯನ್ನ ನೀಡಿದ್ದು, ಇದೀಗ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬಂದರೆ, ಮುಂದಿನ ದಿನಗಳಲ್ಲಿ ನಿಮಗೂ ಅವಕಾಶ ನೀಡುತ್ತೇವೆ ಎಂದು ಹೇಳುವ ಮೂಲಕ ದೇವೇಗೌಡರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಒಗ್ಗಟ್ಟಿನ ಚುನಾವಣ ವೇದಿಕೆ ಸಜ್ಜಾಗಿರುವ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ಸೈಲೆಂಟ್ ಆಗಿಯೇ ದೇವೇಗೌಡ್ರು ಚುನಾವಣಾ ಅಖಾಡಕ್ಕಿಳಿದಿದ್ದು, ಜೆಡಿಎಸ್ ಕೋಟೆಯಲ್ಲಿ ಭದ್ರ ಪಡಿಸಿಕೊಳ್ಳಲು ರಣತಂತ್ರ ಎಣೆದಿದ್ದಾರೆ. ಹಾಸನದಲ್ಲಷ್ಟೇ ಅಲ್ಲ, ಕುಟುಂಬದಲ್ಲೂ ಒಗ್ಗಟ್ಟಿನ ಸಂದೇಶ ಸಾರಿದ್ದಾರೆ ಎನ್ನಲಾಗಿದೆ.
ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರು ಹಾಸನದ ಸ್ವರೂಪ್ ಪ್ರಕಾಶ್ ನಾಮಪತ್ರ ಸಲ್ಲಿಸುವಾಗ ಖುದ್ದು ಭಾಗಿಯಾಗಿದ್ದು, ಹಳೇ ಮೈಸೂರು ಭಾಗದ ಹಲವು ಕ್ಷೇತ್ರಗಳಲ್ಲಿ ಮಾಜಿ ಪ್ರಧಾನಿಗಳಾಗಿರುವ ಹೆಚ್ ಡಿ ದೇವೇಗೌಡರು ಚುನಾವಣಾ ಪ್ರಚಾರವನ್ನ ನಡೆಸಲಿದ್ದಾರೆ ಎನ್ನಲಾಗಿದೆ.












Click it and Unblock the Notifications