ರೀ ಪ್ರತಾಪ್ ಸಿಂಹ ಅವ್ರೇ.. 2024ರಲ್ಲಿ ನಿಮ್ಮ ಪೊಲಿಟಿಕಲ್ ಲೈಫ್ ಎಂಡ್: ಎಂ.ಲಕ್ಷ್ಮಣ್ ಹೀಗೆ ಹೇಳಿದ್ಯಾಕೆ?
ಮೈಸೂರು, ಜೂನ್ 17: 2024ರ ಚುನಾವಣೆಯಲ್ಲಿ ನಿಮ್ಮ ಪೊಲಿಟಿಕಲ್ ಲೈಫ್ ಎಂಡ್ ಆಗುತ್ತೆ. ಬಿಜೆಪಿಯವರೆ ನಿಮ್ಮನ್ನ ಸೋಲಿಸುವ ಕೆಲಸ ಮಾಡ್ತಾರೆ ಎಂದು ಪ್ರತಾಪ್ ಸಿಂಹ ವಿರುದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗುಡುಗಿದ್ದಾರೆ.
ಈ ಕುರಿತು ಶುಕ್ರವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಯಾಕೆ ಪ್ರಚಾರ ಮಾಡಲಿಲ್ಲ. ನೀವು ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡಿದ್ದೀರಾ. 2014ರಲ್ಲಿ ಹೇಗೆ ಗೆದ್ರಿ ಅನ್ನೋದನ್ನ ನೆನಪು ಮಾಡಿಕೊಳ್ಳಿ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

ನಿಮ್ಮ ಜೊತೆಗೆ ಯಾವ ಒಬ್ಬ ನಾಯಕ ಬರಲ್ಲ. ಹೋಗಿ ಪಿರಿಯಾಪಟ್ಟಣ, ಚಾಮುಂಡೇಶ್ವರಿ, ಹುಣಸೂರು ಭಾಗದಲ್ಲಿ ಪ್ರೆಸ್ ಮೀಟ್ ಮಾಡಿ ನೋಡಣ. ಅಲ್ಲಿ ಹೋದ ತಕ್ಷಣ ನಿಮ್ಮ ಕಾರ್ಯಕರ್ತರೇ ಹೊಡಿತಾರೆ ನಿಮಗೆ. ಮಡಿಕೇರಿಗೆ ಪ್ರತಾಪ್ ಸಿಂಹ ಯಾವಾಗ ಬರ್ತಾರೆ ಅಂತಾ ಭೋಪಯ್ಯ, ಅಪ್ಪಚ್ಚು ರಂಜನ್ ಕಾಯುತ್ತಿದ್ದಾರೆ. ಮೈಸೂರಿನಲ್ಲಿ ನಾಗೇಂದ್ರ ಕಾಯುತ್ತಿದ್ದಾರೆ. ಅಡ್ಜಸ್ಟ್ಮೆಂಟ್ ರಾಜಕೀಯ ಮಾಡುತ್ತಿರುವ ಪ್ರತಾಪ್ ಸಿಂಹ ನಿಮಗೆ ಚಳಿ ಬಿಡಿಸ್ತಾರೆ ಎಂದು ವಾಗ್ದಾಳಿ ನಡೆಸಿದರು.
ವಿರೋಧ ಪಕ್ಷವಾಗಿ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿರೋದು ರಾಜ್ಯದ ದುರಂತ. ಸಂಸದ ಪ್ರತಾಪ್ ಸಿಂಹ, ಸಿ.ಟಿ ರವಿ, ಅಶೋಕ್ ಚುನಾವಣೆ ಸೋತ ದಿನದಿಂದ ಕಾಂಗ್ರೆಸ್ ಪಕ್ಷವನ್ನ ಅಟ್ಯಾಕ್ ಮಾಡ್ತಿದ್ದಾರೆ. ಪ್ರತಾಪ್ ಸಿಂಹ ಅಡ್ಜಸ್ಟ್ಮೆಂಟ್ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ನಿಮ್ಮ ಪಕ್ಷದಲ್ಲಿ ಯಾರು ಅಡ್ಜಸ್ಟ್ಮೆಂಟ್ ಮಾಡ್ಕೊಂಡಿದ್ರು ಹೇಳಿ..? ಎಂದು ಪ್ರಶ್ನಿಸಿದರು.

2014 ರಲ್ಲಿ ನೀವು ಹೇಗೆ ಗೆದ್ರಿ ಹೇಳಿ. ನೀವು ಗೆಲ್ಲಲು ಯಾರು ಸಪೋರ್ಟ್ ಮಾಡಿದ್ರು, ಯಾವ ಪಕ್ಷದವ್ರನ್ನ ಕಾಲಿಡ್ಕೊಂಡಿದ್ರಿ 2019 ರಲ್ಲಿ ಹೇಗೆ ಗೆದ್ರಿ ಹೇಳಿ...? ನೀವು ಪ್ರತಿನಿಧಿಸುವ ಮೈಸೂರು ಕೊಡಗು ವ್ಯಾಪ್ತಿಯಲ್ಲಿ ಎಲ್ಲಿ ಪ್ರಚಾರ ಮಾಡಿದ್ರಿ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮಾಡಿದ್ರಿ..? ವರುಣ ಕ್ಷೇತ್ರದಲ್ಲಿ ಪ್ರಚಾರ ಮಾಡ್ತಿದ್ರಿ. ನಿಮ್ಮ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಯಾಕೆ ಪ್ರಚಾರ ಮಾಡ್ಲಿಲ್ಲ. ಅಲ್ಲೆಲ್ಲಾ ನೀವು ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡಿದ್ದೀರಾ ಎಂದು ಕುಟುಕಿದರು.
ಸಿದ್ದರಾಮಯ್ಯನವರ ವಿರುದ್ಧ ತೊಡೆ ತಟ್ಟಿದ್ರಿ. ಜನ ಏನು ಮಾಡಿದ್ರು ಗೊತ್ತಾಯ್ತಾ..? 2018ರಲ್ಲಿ ಪಾಪ ನಿಮ್ಮ ಮನೆಯವರು ಒಟ್ಟಾಗಿ ಕ್ಯಾನ್ವಾಸ್ ಮಾಡಿದ್ರಿ. 2019ರಲ್ಲೂ ನೀವು ನಿಮ್ಮ ಮನೆಯವರು ಕ್ಯಾನ್ವಾಸ್ ಮಾಡಿದ್ರಿ. ಆದ್ರೆ ಈ ಬಾರಿ ಚುನಾವಣೆಯಲ್ಲಿ ನಿಮ್ಮ ಮನೆಯವರು ಎಲ್ಲೂ ಕಾಣಲಿಲ್ಲ. ಯಾಕೆ ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡಿದ್ರಿ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಿಮ್ಮ ಕಾರ್ಯ ಏನು...?ಎಂದರು.












Click it and Unblock the Notifications