ಉಪಚುನಾವಣಾ ಫಲಿತಾಂಶಕ್ಕೂ ಮುನ್ನವೇ ಅನರ್ಹರ ಭಾರೀ ಡಿಮಾಂಡ್?

Recommended Video

      Karnataka by Election 2019 : Even Before By Election Result , disqualified MLAs have a demand

      ಉಪಚುನಾವಣೆ ಮುಗಿದು, ಚುನಾವಣೋತ್ತರ ಸಮೀಕ್ಷೆ ಹೊರಬೀಳುತ್ತಿದ್ದಂತೆಯೇ, ಅನರ್ಹ ಶಾಸಕರು, ಸಿಎಂ ಯಡಿಯೂರಪ್ಪನವರಲ್ಲಿ ಭಾರೀ ಡಿಮಾಂಡ್ ಅನ್ನು ಇಟ್ಟಿದ್ದಾರೆಯೇ?

      ಹದಿನೈದು ಅನರ್ಹ ಶಾಸಕರಲ್ಲಿ ಹದಿಮೂರು ಮುಖಂಡರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ರೋಷನ್ ಬೇಗ್ ಮತ್ತು ಆರ್. ಶಂಕರ್ ಇವರಿಬ್ಬರೂ ಕಣದಲ್ಲಿಲ್ಲ.

      ಕಣದಲ್ಲಿರುವ ಹದಿಮೂರು ಅನರ್ಹರಲ್ಲಿ ಗೆದ್ದು ಬಂದವರಿಗೆ ಸಚಿವಸ್ಥಾನ ಖಾಯಂ ಎನ್ನುವ ವಿಚಾರ ಈಗಾಗಲೇ ಬಹಿರಂಗವಾಗಿದೆ. ಇದಕ್ಕಾಗಿಯೇ, ಹತ್ತಕ್ಕೂ ಹೆಚ್ಚು ಸ್ಥಾನವನ್ನು ಖಾಲಿ ಬಿಡಲಾಗಿದೆ.

      ಚುನಾವಣೆಯಲ್ಲಿ ಸೋತವರಿಗೆ, ವಿಧಾನಪರಿಷತ್ತಿನ ಮೂಲಕ ಎಂಟ್ರಿ ಕೊಟ್ಟು, ಸಚಿವ ಸ್ಥಾನ ನೀಡುವ ವಿಚಾರದಲ್ಲಿ, ಬಿಜೆಪಿಯಲ್ಲಾಗಲಿ, ಯಡಿಯೂರಪ್ಪನವರಿಗಾಗಲಿ ಸ್ಪಷ್ಟತೆಯಿಲ್ಲ. ಅನರ್ಹರ ಡಿಮಾಂಡ್..

      ಸ್ಪರ್ಧಿಸಿರುವ ಹದಿಮೂರು ಅನರ್ಹರಲ್ಲಿ ಇಬ್ಬರು ಹಿರಿಯ ಮುಖಂಡರು

      ಸ್ಪರ್ಧಿಸಿರುವ ಹದಿಮೂರು ಅನರ್ಹರಲ್ಲಿ ಇಬ್ಬರು ಹಿರಿಯ ಮುಖಂಡರು

      ಸ್ಪರ್ಧಿಸಿರುವ ಹದಿಮೂರು ಅನರ್ಹರಲ್ಲಿ ಇಬ್ಬರು ಹಿರಿಯ ಮುಖಂಡರು. ಒಂದು, ಗೋಕಾಕ್ ನಿಂದ ಸ್ಪರ್ಧಿಸಿರುವ ರಮೇಶ್ ಜಾರಕಿಹೊಳಿ, ಇನ್ನೊಬ್ಬರು, ಹುಣಸೂರಿನಿಂದ ಎಚ್. ವಿಶ್ವನಾಥ್. ಇವರಿಬ್ಬರ ವಿಚಾರದಲ್ಲಿ, ಭಾರೀ ಡಿಮಾಂಡ್ ಬಂದಿದೆ ಎಂದು ಹೇಳಲಾಗುತ್ತಿದೆ.

      ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

      ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

      ಇವರಿಬ್ಬರು (ಜಾರಕಿಕೊಳಿ, ವಿಶ್ವನಾಥ್) ಗೆದ್ದರೆ, ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎನ್ನುವ ಬೇಡಿಕೆ ಬಂದಿದೆ ಎನ್ನುವ ಮಾಹಿತಿಯಿದೆ. ಇದಕ್ಕೆ, ಪೂರಕ ಎನ್ನುವಂತೆ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೀಡಿರುವ ಹೇಳಿಕೆ.

      ಈಗಾಗಲೇ ಮೂವರು ಡಿಸಿಎಂ ಇದ್ದಾರೆ

      ಈಗಾಗಲೇ ಮೂವರು ಡಿಸಿಎಂ ಇದ್ದಾರೆ

      "ಈಗಾಗಲೇ ಮೂವರು ಡಿಸಿಎಂ ಇದ್ದಾರೆ, ಇನ್ನೆರಡು ಹುದ್ದೆಯನ್ನು ಸೃಷ್ಟಿಸಿದರೆ ಅದರಲ್ಲಿ ತಪ್ಪೇನಿದೆ" ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿರುವುದು, ಗುಸುಗುಸು ಸುದ್ದಿಗೆ ಇಂಬು ನೀಡುವಂತಿದೆ. ಆದರೆ, ಸಿಎಂ ಇದಕ್ಕೆ ಯಾವ ರೀತಿ ಸ್ಪಂದಿಸಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿಯಿಲ್ಲ.

      ಎಚ್.ವಿಶ್ವನಾಥ್ ಮತ್ತು ರಮೇಶ್ ಜಾರಕಿಹೊಳಿ

      ಎಚ್.ವಿಶ್ವನಾಥ್ ಮತ್ತು ರಮೇಶ್ ಜಾರಕಿಹೊಳಿ

      ಎಚ್.ವಿಶ್ವನಾಥ್ ಮತ್ತು ರಮೇಶ್ ಜಾರಕಿಹೊಳಿಗೆ, ಕ್ರಮವಾಗಿ, ಹುಣಸೂರು ಮತ್ತು ಗೋಕಾಕ್ ನಲ್ಲಿ ತೀವ್ರ ಪೈಪೋಟಿಯಿದೆ. ಎಕ್ಸಿಟ್ ಪೋಲ್ ಪ್ರಕಾರ, ಕಾಂಗ್ರೆಸ್ ಗೆಲ್ಲಬಹುದು ಎನ್ನುವ ಕ್ಷೇತ್ರಗಳಲ್ಲಿ ಹುಣಸೂರು ಕೂಡಾ ಒಂದು. ಅನರ್ಹರನ್ನು ಉಪಚುನಾವಣೆಯಲ್ಲಿ ಮತದಾರ ಮತ್ತೆ ಅನರ್ಹರು ಎಂದು ತೀರ್ಪು ನೀಡಿದರೆ, ಇವರುಗಳ ಮುಂದಿನ ಭವಿಷ್ಯವೇನು ಎನ್ನುವ ವಿಚಾರದಲ್ಲಿ ಬಿಜೆಪಿಯಲ್ಲಿ ಗೊಂದಲ, ವಿರೋಧವಿದೆ.

      ಸೋತ ಅಭ್ಯರ್ಥಿಗಳಿಗೆ ಬಿಜೆಪಿಯಲ್ಲಿ ಸಚಿವಸ್ಥಾನ ನೀಡುವ ವಿಚಾರ

      ಸೋತ ಅಭ್ಯರ್ಥಿಗಳಿಗೆ ಬಿಜೆಪಿಯಲ್ಲಿ ಸಚಿವಸ್ಥಾನ ನೀಡುವ ವಿಚಾರ

      "ಸೋತ ಅಭ್ಯರ್ಥಿಗಳಿಗೆ ಬಿಜೆಪಿಯಲ್ಲಿ ಸಚಿವಸ್ಥಾನ ನೀಡುವ ವಿಚಾರದಲ್ಲಿ ಯಾವುದೇ ನಿರ್ಧಾರ ಇನ್ನೂ ಆಗಿಲ್ಲ" ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಯನ್ನು ನೀಡಿದ್ದಾರೆ. ಆದರೆ, ಇವರ ತ್ಯಾಗದ, ಖುಣ ಸಂದಾಯ ಮಾಡಬೇಕು ಎನ್ನುವುದು ಯಡಿಯೂರಪ್ಪನವರ ಆಸೆ. ಮುಂದೇನಾಗುತ್ತೋ?

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+