ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ದರ ಹೆಚ್ಚಳ ಮಾಡಿ : ಎಸ್ಕಾಂ ಮನವಿ

|
Google Oneindia Kannada News

electricity
ಬೆಂಗಳೂರು, ಡಿ.14 : ವಿದ್ಯುತ್‌ ದರ ಏರಿಕೆ ಶಾಕ್ ಎದುರಿಸಲು ಗ್ರಾಹಕರು ಸಜ್ಜಾಗಬೇಕಾಗಿದೆ. ಎಸ್ಕಾಂಗಳು ಪ್ರತಿ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ ಸರಾಸರಿ 66 ಪೈಸೆ ಹೆಚ್ಚಳ ಮಾಡಬೇಕು ಎಂದು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಏಪ್ರಿಲ್ ನಲ್ಲಿ ನೂತನ ದರಗಳು ಅನ್ವಯವಾಗುವ ಸಾಧ್ಯತೆ ಇದೆ.

ರಾಜ್ಯದ ಎಲ್ಲ ಐದು ವಿದ್ಯುತ್ ವಿತರಣಾ ಕಂಪನಿಗಳು (ಎಸ್ಕಾಂ)ಗಳು ಶುಕ್ರವಾರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಿವೆ. ಐದು ಕಂಪನಿಗಳು ಸರಾಸರಿ 66 ಪೈಸೆ ಹೆಚ್ಚಳ ಕೋರಿವೆ. ಕಳೆದ ಸಾಲಿನಲ್ಲಿಯೂ ಎಸ್ಕಾಂಗಳು ಪ್ರತಿ ಯೂನಿಟ್‌ಗೆ ಸರಾಸರಿ 70 ಪೈಸೆ ಹೆಚ್ಚಳ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದವು. ಆದರೆ, ಕೆಇಆರ್‌ಸಿ 23 ಪೈಸೆ ಹೆಚ್ಚಳ ಮಾಡಿತ್ತು.

ಪ್ರಸ್ತಾವನೆಯಲ್ಲಿ ದರ ಹೆಚ್ಚಳಕ್ಕೆ ಸಮರ್ಥನೆ ನೀಡಿದರು ಎಸ್ಕಾಂಗಳು ಸದ್ಯ 61,705 ಮಿ.ಯೂ. ವಿದ್ಯುತ್‌ ಪೂರೈಕೆ ಮಾಡುತ್ತಿದ್ದೇವೆ. ಮುಂದಿನ ವರ್ಷದಲ್ಲಿ 62,959 ಮಿ.ಯೂ. ವಿದ್ಯುತ್‌ ಪೂರೈಸುವ ಗುರಿ ಹೊಂದಿದ್ದೇವೆ. ಆದ್ದರಿಂದ, ಒಟ್ಟಾರೆ ಅಂದಾಜು ವಹಿವಾಟು 24,469 ಕೋಟಿಯಿಂದ 27,772 ಕೋಟಿ ರೂ.ಗಳಿಗೆ ಹೆಚ್ಚಳವಾಗಲಿದೆ ಎಂದು ತಿಳಿಸಿವೆ. (ಹೊಸ ಸರ್ಕಾರ ಬರುವ ಮೊದಲೇ ಕರೆಂಟ್ ಶಾಕ್)

ರೈತರ ಪಂಪ್‌ಸೆಟ್‌ಗಳು, ಸರ್ಕಾರದ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆ ಗ್ರಾಹಕನ್ನು ಹೊರತುಪಡಿಸಿ, ಇತರ ಎಲ್ಲ ಗ್ರಾಹಕರಿಗೆ ಅನ್ವಯವಾಗುವಂತೆ ದರ ಪರಿಷ್ಕರಣೆ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿದೆ. ಕೆಇಆರ್‌ಸಿಯು ಈ ಪ್ರಸ್ತಾವನೆ ಬಗ್ಗೆ ಮುಂದಿನ ಮೂರು ತಿಂಗಳಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದೆ.

ಪ್ರಸ್ತಾವನೆ ಬಗ್ಗೆ ಕೆಇಆರ್‌ಸಿ ಪರಿಶೀಲಿಸಿ, ವಿವಿಧ ಭಾಗಗಳಲ್ಲಿ ಸಾರ್ವಜನಿಕರಿಂದಲೂ ಅಹವಾಲು ಸ್ವೀಕರಿಸಲಿದೆ. ನಂತರ ದರ ಏರಿಕೆಯನ್ನು ನಿರ್ಧರಿಸಲಿದೆ. ಆದ್ದರಿಂದ ಏಪ್ರಿಲ್‌ ಹೊತ್ತಿಗೆ ಗ್ರಾಹಕರಿಗೆ ತಕ್ಕಮಟ್ಟಿಗೆ ವಿದ್ಯುತ್‌ ದರ ಏರಿಕೆ ಬಿಸಿ ತಟ್ಟುಲಿದೆ.

English summary
Five electricity supply companies (Escoms) of Bangalore, Mangalore, Mysore (Chamundeshwari), Gulbarga and Hubli have filed for revision of tariff for the year 2014-2015 seeking an increase of 66 paise per unit of power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X