ಕಾಂಗ್ರೆಸ್ಸಿಗೆ ಆಘಾತ, ಸಚಿವ ರೋಷನ್ ಬೇಗ್ ಗೆ 'ಇಡಿ' ನೋಟಿಸ್

ಬೆಂಗಳೂರು, ಜನವರಿ 15: ಚುನಾವಣೆ ಸಿದ್ಧತೆಯಲ್ಲಿ ನಿರತವಾಗಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಆಘಾತವಾಗಿದೆ. ಸಿದ್ದರಾಮಯ್ಯ ಸಂಪುಟದ ಪ್ರಮುಖ ಸಚಿವ ರೋಷನ್ ಬೇಗ್ ಅವರಿಗೆ ಫೆಮಾ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ನೋಟಿಸ್ ಜಾರಿ ಮಾಡಲಾಗಿದೆ.

ಹಜ್ ಮತ್ತು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಒಡೆತನದ ಕಂಪನಿಯು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ್ದು, ಗಲ್ಫ್ ರಾಷ್ಟ್ರಗಳಿಂದ ಭಾರಿ ಪ್ರಮಾಣದ ಮೊತ್ತ, ಬೇಗ್ ಅವರ ಕಂಪನಿಗೆ ಸಂದಾಯವಾಗಿದೆ ಎಂದು ಆರೋಪ ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ರೋಷನ್ ಬೇಗ್ ಅವರಿಗೆ ಸೋಮವಾರದಂದು ನೋಟಿಸ್ ಕೊಟ್ಟಿದೆ.

Enforcement Directorate issues notice to Karnataka minister Roshan Baig for FEMA violation

ಹವಾಲಾ ಹಣ ವಿನಿಮಯ ಶಂಕೆ ವ್ಯಕ್ತವಾಗಿದ್ದು, ರೋಷನ್ ಬೇಗ್ ಅಲ್ಲದೆ ಅವರ ಪುತ್ರಿ, ಪುತ್ರನಿಗೂ ನೋಟಿಸ್ ಜಾರಿ ಮಾಡಲಾಗಿದೆ. ರೋಷನ್ ಬೇಗ್ ಮಗಳು ಸಬೀಹಾ ಫಾತೀಮಾ ಹಾಗೂ ಮಗ ರುಮಾನ್ ಬೇಗ್ ಒಡೆತನದ ರುಮಾನ್ ಎಂಟರ್ ಪ್ರೈಸಸ್ ಎಂಬ ಸಾಫ್ಟ್ ವೇರ್ ಕಂಪನಿಯು 2007ರಲ್ಲಿ ಆರಂಭವಾಗಿದೆ. ದುಬೈಯಿಂದ ಬಂದಿರುವ ಹಣಕ್ಕೆ ಸಮರ್ಪಕ ಲೆಕ್ಕ ನೀಡಿಲ್ಲ. ಈ ಹಿನ್ನಲೆಯಲ್ಲಿ ಈ ನೋಟಿಸ್ ಜಾರಿಯಾಗಿದೆ.

ಈ ಬೆಳವಣಿಗೆ ನಂತರ ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾಗೆ ದೌಡಾಯಿಸಿರುವ ರೋಷನ್ ಬೇಗ್ ಅವರು ಮುಂದಿನ ನಡೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಖಾಸಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದ ಕಾಂಗ್ರೆಸ್ಸಿಗರಿಗೆ ಇದು ಎರಡನೇ ದೊಡ್ಡ ಹೊಡೆತವಾಗಿದೆ. ಈ ಹಿಂದೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ರೋಷನ್ ಬೇಗ್ ಅವರು ಪ್ರಭಾವಿ ಸಚಿವರಾಗಿದ್ದು, ಮುಂದಿನ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿ, ಗೆಲ್ಲಿಸುವ ಉತ್ಸಾಹದಲ್ಲಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+