ಚುನಾವಣಾ ಹೊತ್ತಲಿ ಆಪರೇಷನ್ ಕಮಲ ಸಕ್ಸಸ್: ಮಂಡ್ಯದ ಹತ್ತಾರು ಮುಖಂಡರು ಬಿಜೆಪಿಗೆ: ಕಟೀಲ್
ಜೆಡಿಎಸ್ ಭದ್ರಕೋಟೆಯಲ್ಲಿ ಕಮಲವನ್ನ ಅರಳಿಸುವ ಬಿಜೆಪಿ ಪಾಳಯದಲ್ಲಿ ಆಪರೇಷನ್ ಕಮಲ ಪ್ಲಾನ್ ಮುಂದುವರೆದಿದೆ.
ಕಾರವಾರ,ಮಾರ್ಚ್ 20: ಚುನಾವಣಾ ರಣಕಣ ರಂಗೇರಿದ್ದು, ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ನಾಯಕರ ಆಪರೇಷನ್ ಕಮಲ ಸಕ್ಸಸ್ ಆಗುತ್ತಿದ್ದು, ಜೆಡಿಎಸ್ ಭದ್ರಕೋಟೆಯಲ್ಲಿ ಕಮಲವನ್ನ ಅರಳಿಸುವ ಪ್ಲಾನ್ ಮುಂದುವರೆದಿದೆ.
ಈಗಾಗಲೇ ಕೆ ಆರ್ ಪೇಟೆಯಲ್ಲಿ ಕಮಲ ಅರಳಿಸಿರುವ ಬಿಜೆಪಿ, ಈ ಬಾರಿಯೂ ಮಂಡ್ಯದ ಕೆಲ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣೀಟ್ಟಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಸಮಾಧಾನಿತರನ್ನ ಸೆಳೆಯುತ್ತಿದೆ. ಇನ್ನೂ ಮಂಡ್ಯ ಮಾಜಿ ಸಂಸದ ಶಿವರಾಮೇಗೌಡ ಅವರು ಸಹ ಈಗಾಗಲೇ ಬಿಜೆಪಿ ಸೇರ್ಪಡೆಗೆ ರೆಡಿಯಾಗಿದ್ದಾರೆ.

ಇನ್ನೂ ಈ ಕುರಿತು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮಾಧ್ಯಮಗಳ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮಂಡ್ಯ ಭಾಗದಲ್ಲಿ ಇನ್ನೂ ಹತ್ತಾರು ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದ್ದಾರೆ. ಮಂಡ್ಯ ಭಾಗದಲ್ಲಿ ರಾಜಕೀಯ ಬದಲಾವಣೆ ಕುರಿತ 'ಕಾದು ನೋಡಿ. ಇನ್ನೂ ಹತ್ತಾರು ನಾಯಕರು ಬಿಜೆಪಿಗೆ ಬರಲಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ಮನಸ್ಸಿನಿಂದ ದೂರವಾಗಿದೆ. ಕರಾವಳಿಯಲ್ಲಿ ಕಳೆದ ಬಾರಿ ಅದು ಒಂದೇ ಒಂದು ಸ್ಥಾನ ಪಡೆದಿತ್ತು. ಈ ಬಾರಿ ಕರಾವಳಿಯಲ್ಲಿ ಕಾಂಗ್ರೆಸ್ ಮುಕ್ತವಾಗುವುದು ಖಚಿತ. ಪಾರ್ಟಿ ಗಟ್ಟಿ ಇದೆ ಎಂದರೆ ಆಂತರಿಕವಾಗಿ ಸಣ್ಣಪುಟ್ಟ ವ್ಯತ್ಯಾಸ ಇರುವುದು ಸಹಜ. ಅದನ್ನು ಸರಿ ಮಾಡುವ ಶಕ್ತಿ ಬಿಜೆಪಿಗೆ ಇದೆ ಎಂದರು.
ಇನ್ನೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಹೇಳಿದ ಅವರು, ಉರಿಗೌಡ- ನಂಜೇಗೌಡರ ಕುರಿತ ಚರ್ಚೆ ನಡೆಯಲಿ. ಸತ್ಯಾಸತ್ಯತೆಗಳು ಹೊರಬರಲಿ, ವಿರೋಧ ಪಕ್ಷಗಳು ಆರೋಪ ಮಾಡಲೇ ಇರುವುದಲ್ಲವೇ ಎಂದು ಕೇಳಿದರು. ಇತಿಹಾಸದಲ್ಲಿ ಹತ್ತಾರು ತಿರುಚುವಿಕೆ ಆಗಿದೆ ಎಂದು ಹೇಳಿದರು.

ಬಿಜೆಪಿಗೆ ನಿರೀಕ್ಷೆಗೂ ಮೀರಿ ಪ್ರತಿಸ್ಪಂದನೆ: ಬಿ.ಎಸ್.ಯಡಿಯೂರಪ್ಪ
ರಾಜ್ಯದಲ್ಲಿ ಬಿಜೆಪಿಗೆ ನಿರೀಕ್ಷೆಗೂ ಮೀರಿ ಪ್ರತಿಸ್ಪಂದನೆ ಸಿಗುತ್ತಿದೆ. ಪಕ್ಷವು 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು. ಪಕ್ಷದ ಸಾಧನೆಗಳು, ಅಭಿವೃದ್ಧಿ ಕಾರ್ಯದಿಂದಾಗಿ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಜನಪರವಾಗಿ ಕೆಲಸ ಮಾಡಲಿದೆ ಎಂದ ಮುಖಂಡರು, ಅಭಿವೃದ್ಧಿ ಕಾರ್ಯಗಳಿಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಬಿಜೆಪಿಗೆ ದೇಶ ಮೊದಲು; ಕಾಂಗ್ರೆಸ್ಸಿಗೆ ಕುಟುಂಬ ಪ್ರಥಮ: ಸಿ.ಟಿ.ರವಿ
ಬಿಜೆಪಿಗೆ ದೇಶ ಮೊದಲು; ಕಾಂಗ್ರೆಸ್ ಪಕ್ಷದವರಿಗೆ ಕುಟುಂಬ ಮತ್ತು ಜಾತಿ ಮೊದಲು ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಹೇಳಿದರು. ಇನ್ನೂ ಕಾಂಗ್ರೆಸ್ಸಿನ ನಾಯಕರಿಗೆ ಮತ್ತು ಆ ಪಕ್ಷಕ್ಕೆ ದೇಶದ ಬಗ್ಗೆ ಕಾಳಜಿ ಇಲ್ಲ. ಅವರಿಗೆ ಎನಿದ್ದರೂ ಅವರ ಕುಟುಂಬದ ಬಗ್ಗೆ ಮಾತ್ರ ಕಾಳಜಿ ಇದೆ.
ಜಾತಿ ಜಾತಿಗಳ ಮಧ್ಯೆ ಒಡೆದು ಆಳಿ ಧರ್ಮ ಧರ್ಮಗಳನ್ನು ಎತ್ತಿ ಕಟ್ಟಿ, ಸಮಾಜವನ್ನು ಒಡೆದಾಳುವ ನೀತಿಯನ್ನು ಕಾಂಗ್ರೆಸ್ ಹೊಂದಿದೆ. ಬಿಜೆಪಿ ಸಾಧನೆಗಳ ರಿಪೋರ್ಟ್ ಕಾರ್ಡ್ ಮತ್ತು ಕಾರ್ಯಕರ್ತರ ಶ್ರಮದಿಂದ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಪ್ರಕಾರ ಸಿದ್ಧರಾಮಯ್ಯ ವರುಣಾ ಕ್ಷೇತ್ರದಲ್ಲೂ ನಿಲ್ಲಲ್ಲ ಅನ್ನಿಸುತ್ತೆ. ಯಾಕೆಂದರೇ ಅಲ್ಲೂ ಸಿದ್ದರಾಮಯ್ಯ ಸೋಲುತ್ತಾರೆ ಎಂದು ಭವಿಷ್ಯ ನುಡಿದರು. ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸದಂತೆ ಸಲಹೆ ನೀಡಿದ್ದು, ಸಿದ್ಧರಾಮಯ್ಯ ನೋಡಿ ನನಗೆ ಮರುಕವಾಗ್ತಿದೆ. ಕಳೆದ 6 ತಿಂಗಳಿನಿಂದ ಕ್ಷೇತ್ರಕ್ಕಾಗಿ ಸಿದ್ಧರಾಮಯ್ಯ ಓಡಾಡುತ್ತಿದ್ದಾರೆ. ರಾಜ್ಯದ ಯಾವುದೇ ಮೂಲೆಗೆ ಹೋದರೂ ಕ್ಷೇತ್ರ ಸಿಕ್ಕಿಲ್ಲ ಎಂದು ಸಚಿವ ಆರ್.ಅಶೋಕ್ ಟೀಕಿಸಿದರು.












Click it and Unblock the Notifications