• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಳ್ಳಾರಿ : ಅನಿಲ್ ಲಾಡ್ ವಿರುದ್ಧ ಆಂತರಿಕ ಬಂಡಾಯವೇಕೆ?

By ಜಿಎಂಆರ್, ಬಳ್ಳಾರಿ
|

ಬಳ್ಳಾರಿ, ಫೆಬ್ರವರಿ 23: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಅನಿಲ್ ಎಚ್. ಲಾಡ್ ಅವರ ವಿರುದ್ಧ ಸ್ವಪಕ್ಷೀಯರು ಮತ್ತು ಜನರಲ್ಲಿ 'ವ್ಯಕ್ತಿ ವಿರೋಧಿ ಅಲೆ' ಸೃಷ್ಟಿ ಆಗಿದೆ. ಹೀಗಾಗಲು ಕಾರಣಗಳೇನು?

ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ, ಶಾಸಕರು ಸದಾಕಾಲ ಬೆಂಗಳೂರು - ಸಂಡೂರುಗಳಲ್ಲಿ ನೆಲೆಸಿರುತ್ತಾರೆ. ವಿದೇಶ ಪ್ರವಾಸಗಳಲ್ಲೇ ಕಾಲ ಕಳೆಯುತ್ತಾರೆ. ಸದಾಕಾಲ ವ್ಯವಹಾರ - ಹಣಕಾಸಿನದ್ದೇ ಲೆಕ್ಕಾಚಾರ ಹಾಕುತ್ತಲೇ ಇರುತ್ತಾರೆ. ಸರ್ಕಾರ ಮತ್ತು ಪಕ್ಷದ ಸಭೆ - ಸಮಾರಂಭಗಳಲ್ಲಿ 'ಕಾಣೆಯಾಗಿದ್ದೇ' ಹೆಚ್ಚು.

ಟಿಕೆಟ್ ರಾಜಕೀಯ : ಅನಿಲ್ ಲಾಡ್ ವಿರುದ್ಧ ತಿರುಗಿಬಿದ್ದ ಮುಸ್ಲಿಮರು

ಇನ್ನು ಪಕ್ಷದ ಬೆಂಬಲಿಗರ, ಅಭಿಮಾನಿಗಳ ಮತ್ತು ಅವರನ್ನು ಬೆಂಬಲಿಸಿ ಗೆಲ್ಲಿಸಿದ ಮತದಾರರ ಜೊತೆ ಬೆರೆಯುವ ಶುಭ - ಅಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇ ಅತಿ ವಿರಳ. ಐದು ವರ್ಷಗಳ ಅವರ ಶಾಸಕತ್ವದ ಅವಧಿ ಮತ್ತು ಒಮ್ಮೆ ಸ್ಪರ್ಧಿಸಿ, ಸೋತ ನಂತರದ ದಿನಗಳಲ್ಲಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೇ ಕೈಬೆರಳಿನಷ್ಟು.

ಬೆಂಗಳೂರಿನಲ್ಲಿ ದಿನಗಳನ್ನು ಕಳೆದದ್ದು ವಿಶೇಷ

ಬೆಂಗಳೂರಿನಲ್ಲಿ ದಿನಗಳನ್ನು ಕಳೆದದ್ದು ವಿಶೇಷ

ಯಾರೊಂದಿಗೇ ಮಾತನಾಡಲಿ ಹುಡುಗಾಟಿಕೆ, ಹಾಸ್ಯ, ವ್ಯಂಗ್ಯ, ಟೀಕೆಗಳಿಂದಲೇ ಮಾತು ಆರಂಭ ಮತ್ತು ಕೊನೆ ಆಗುತ್ತದೆ. ಎದುರಾಳಿಗಳನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಲೇ ಅವರೊಂದಿಗೆ ಮಾತನಾಡುವ ಅನಿಲ್ ಲಾಡ್, ಮತದಾರರೊಂದಿಗೆ ಸಹಜವಾಗಿ ಮಾತನಾಡುವ ಸೌಜನ್ಯವನ್ನೇ ಹೊಂದಿಲ್ಲ ಎನ್ನುವುದು ಅನೇಕರ ಅನುಭವದ ಮಾತು.

ಬೆರಳೆಣಿಕೆಯಷ್ಟು ಬೆಂಬಲಿಗರು, ಸ್ವಜಾತಿ ಬಂಧುಗಳನ್ನು ಕೂಡಿಸಿಕೊಂಡು ಅವರಿವರ ಬಗ್ಗೆ ಟೀಕೆ ಮಾಡುವ ಅನಿಲ್ ಲಾಡ್, ತಾವು ಶಾಸಕರು ಎನ್ನುವುದನ್ನೇ ಮರೆತು, ಬಳ್ಳಾರಿಯಲ್ಲಿ - ಬೆಂಗಳೂರಿನಲ್ಲಿ ದಿನಗಳನ್ನು ಕಳೆದದ್ದು ವಿಶೇಷ.

ಸಂತೋಷ್ ಲಾಡ್ ರಿಂದಲೂ ಕಡೆಗಣನೆ

ಸಂತೋಷ್ ಲಾಡ್ ರಿಂದಲೂ ಕಡೆಗಣನೆ

ಪಿ.ಟಿ. ಪರಮೇಶ್ವರನಾಯಕ ಜಿಲ್ಲಾ ಉಸ್ತುವಾರಿ ಸಚಿವರು ಆಗಿದ್ದಾಗ ಅವರೊಂದಿಗಿನ ವೈಯಕ್ತಿಕ ಮುನಿಸಿನ ನೆಪದಲ್ಲಿ ಪಕ್ಷದಿಂದ, ಸರ್ಕಾರಿ ಕಾರ್ಯಕ್ರಮಗಳಿಂದ ಮತ್ತು ವೈಯಕ್ತಿಕ ಕಾರಣಗಳಿಗಾಗಿ ಕ್ಷೇತ್ರದಿಂದ ದೂರವೇ ಇದ್ದರು.

ಸಹೋದರ ಸಂತೋಷ್ ಎಸ್. ಲಾಡ್ ಅವರು ಸಚಿವರಾದ ಮೇಲೆ ಅವರನ್ನು ಬೈಯ್ಯುತ್ತಲೇ ಕಾಲ ಕಳೆದರು. ಮಹಾನಗರ ಪಾಲಿಕೆಯ ಸಭೆಗಳಲ್ಲಿ ಆಗಾಗ್ಗೆ ಪಾಲ್ಗೊಂಡಿದ್ದು ಅವರ ವಿಶೇಷ ಸಾಧನೆ. ಕುಡಿಯುವ ನೀರು, ಬೀದಿದೀಪ, ನೈರ್ಮಲ್ಯ, ಆರೋಗ್ಯ ಇನ್ನಿತರೆ ವಿಚಾರಗಳನ್ನು ಸಂಪೂರ್ಣ ಕಡೆಗಣಿಸಿ, ಜನರ ಆಕ್ರೋಶಕ್ಕೆ ಗುರಿ ಆದರು. 15 ರಿಂದ 25 ದಿನಕ್ಕೆ ಒಮ್ಮೆ ಕುಡಿಯುವ ನೀರು ಪೂರೈಕೆ ಆಗುವ ಸ್ಥಿತಿ ಬಂದರೂ, ಶಾಸಕರು ಮಾತನಾಡಲೇ ಇಲ್ಲ.

ಉದಾಸೀನತೆ ತೋರಿದ ಅನಿಲ್

ಉದಾಸೀನತೆ ತೋರಿದ ಅನಿಲ್

ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಶಿಫ್ಟ್ ಆಗಿ ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸೋತು, ರಾಜ್ಯಸಭಾ ಸದಸ್ಯರಾಗಿದ್ದಾಗಲೂ ಬಳ್ಳಾರಿಯತ್ತ ಗಮನ ಹರಿಸದ ಇವರು, ಸಿದ್ಧರಾಮಯ್ಯ ಅವರ ಪಾದಯಾತ್ರೆ, ಒಮ್ಮೆ ಸೋತ ಅನುಕಂಪ, ಕಾಂಗ್ರೆಸ್ ಅಲೆಯಲ್ಲಿ ಗೆದ್ದುಬಂದ ಅನಿಲ್ ಲಾಡ್, ಗೆಲುವಿನ ಮೌಲ್ಯವನ್ನು ತಿಳಿಯುವಲ್ಲಿ ವಿಫಲರಾದರು.

ಬಳ್ಳಾರಿ ನಗರದ ಮಹಾನಗರ ಪಾಲಿಕೆಯ ಕಾಂಗ್ರೆಸ್ ಕಾರ್ಪೊರೇಟರ್‍ಗಳ ಜೊತೆ ಉತ್ತಮ ಸಂಬಂಧ ಹೊಂದುವಲ್ಲಿ ಉದಾಸೀನತೆ ತೋರಿದ ಅನಿಲ್, ಶಾಸಕರಾಗಿ ಪುನರಾಯ್ಕೆಯ ಕಸರತ್ತನ್ನು ಗೆಲುವಿನ ಆರಂಭದ ದಿನದಿಂದ ಪ್ರಾರಂಭಿಸಲೇ ಇಲ್ಲ. ವಿರೋಧ ಪಕ್ಷಗಳ ದೌರ್ಬಲ್ಯವನ್ನು ವಿಭಿನ್ನವಾಗಿ ಪರಿಗಣಿಸಿದ ಅನಿಲ್ ಲಾಡ್, ಶಾಸನಸಭೆಯಲ್ಲೂ ಬಳ್ಳಾರಿಯ ಬಗ್ಗೆ ಮೌನವಹಿಸಿದ್ದೇ ಹೆಚ್ಚು.

ಮುಸ್ಲಿಮರ ವಿರೋಧ

ಮುಸ್ಲಿಮರ ವಿರೋಧ

ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜನನಾಯಕ ಶಾಸಕರ ಆಡಳಿತಕ್ಕಿಂತಲೂ ಅಧಿಕಾರಿಗಳು ನಡೆಸಿದ ಆಡಳಿತ - ಅಧಿಕಾರವೇ ಹೆಚ್ಚು. ಉತ್ತಮ ಅಧಿಕಾರಿಗಳು ಜನಪರವಾಗಿ ಕಾರ್ಯನಿರ್ವಹಿಸಿ ಕುಡಿಯುವ ನೀರು, ಬೀದಿದೀಪಗಳ ನಿರ್ವಹಣೆ ನಿರ್ವಹಿಸಿದ್ದಾರೆ.

ಗುರುವಾರ ಪಕ್ಷದ ಸಭೆಯಲ್ಲಿ ಮುಸ್ಲಿಮರು ತೀವ್ರ ವಿರೋಧಿಸಿದ ನಂತರ, ಸಂಜೆ ಮಬ್ಬುಕತ್ತಲಲ್ಲಿ ದ್ವಿಚಕ್ರ ವಾಹನದಲ್ಲಿ ಅಲ್ಲಲ್ಲಿ ತಿರುಗಾಡಿ ಜನರೊಂದಿಗೆ ಕಾಲಕಳೆದು, ಮಾತನಾಡಿದ್ಧೇ ಇವರು ಮಾಡಿದ ಮೊದಲನೆಯ ಮುಂದಿನ ಚುನಾವಣೆಯ ಪ್ರಚಾರ ಸಭೆ.

ಮುಸ್ಲಿಮರು ಇವರು ಪುನಃ ಸ್ಪರ್ಧಿಸುವುದನ್ನು ತೀವ್ರವಾಗಿ ವಿರೋಧಿಸುವುದರ ಜೊತೆ ಜೊತೆಯಲ್ಲೇ ಜನಸಾಮಾನ್ಯರು ಇವರ ಸ್ಪರ್ಧೆಯನ್ನು ತೀವ್ರ ಗೌಣವಾಗಿ ಪರಿಗಣಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Elections 2018: Why many are angry over Anil Lad's ticket politics. Why Ballari Congress is facing crisis situation now, Here is a analysis on the ahead of poll.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more