ಹಸಿವು ಮುಕ್ತ ಸಮಾಜ ನಮ್ಮ ಸಾಧನೆ: ಸಿದ್ದರಾಮಯ್ಯ

ಕಳೆದ 5 ವರ್ಷಗಳಿಂದ ರಾಜ್ಯ ಸರ್ಕಾರವು ಹಸಿವು ಮತ್ತು ಅಪೌಷ್ಟಿಕತೆ ಮುಕ್ತ ಸಮಾಜವನ್ನು ನಿರ್ಮಿಸಲು ಬದ್ಧವಾಗಿದೆ. ಕರ್ನಾಟಕದ ಯಾವುದೇ ವ್ಯಕ್ತಿ, ಮಹಿಳೆ ಅಥವಾ ಮಗು ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್, ಮಾತೃಪೂರ್ಣ, ಸವಿರುಚಿ ಮುಂತಾದ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ.
'ಹಸಿವು ಮುಕ್ತ ಸಮಾಜ ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಕಲ್ಯಾಣ ಕಾರ್ಯಕ್ರಮಗಳ ಮೂಲಕ ಆಹಾರ ಭದ್ರತೆಯನ್ನು ಸಾಧಿಸಿದ್ದೇವೆ. ನಮ್ಮ ಯೋಜನೆಗಳು ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೊಂಡಿದ್ದಾರೆ.
ಸಮೀಕ್ಷೆ: ಸಿದ್ದರಾಮಯ್ಯ ಅವರ ಕೈ ಹಿಡಿದ ಅನ್ನಭಾಗ್ಯ ಯೋಜನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಅನ್ನಭಾಗ್ಯ ಯೋಜನೆಗೆ 4 ಸಾವಿರ ಕೋಟಿ ರು ವೆಚ್ಚ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ದಾರ ಕುಟುಂಬದ ಒಬ್ಬರಿಗೆ 7 ಕೆ.ಜಿಯಂತೆ ಒಂದು ರುಪಾಯಿದರದಲ್ಲಿ ಪಡಿತರ ಅಕ್ಕಿ ವಿತರಿಸಲಾಗುತ್ತಿದೆ. ಇದರ ಜತೆಗೆ ಉಪ್ಪು, ತಾಳೆ ಎಣ್ಣೆ ಸಬ್ಸಿಡಿ ದರದಲ್ಲಿ ಲಭ್ಯದಲ್ಲಿ ಪೂರೈಸಲಾಗುತ್ತಿದೆ.
ಅನ್ನಭಾಗ್ಯ ಯೋಜನೆ : ಬೆಂಗಳೂರಲ್ಲಿ ಬಡವರ ಅಕ್ಕಿಗೆ ಕನ್ನ!
ಆದರೆ, ಪ್ರತಿಷ್ಠಿತ ಬಡಾವಣೆಗಳ ನ್ಯಾಯಬೆಲೆ ಅಂಗಡಿಗಳಲ್ಲಿ 49 ಕೆಜಿ ಕೊಡಬೇಕಾದಲ್ಲಿ 30 ಕೆಜಿ ಕೊಡುತ್ತಿದ್ದಾರೆ. ತಿಂಗಳಿಗೆ ಕನಿಷ್ಠವೆಂದರೂ 2 ಲಕ್ಷ ರೂಪಾಯಿಯಷ್ಟು ಬಡವರ ಅಕ್ಕಿ ಅನ್ಯರ ಪಾಲಾಗುತ್ತಿದೆ ಎಂದು ದೂರಲಾಗಿದೆ. ಆದರೆ, ಈ ಬಗ್ಗೆ ಕ್ರಮ ಜರುಗಿಸಲಾಗಿದೆ ಎಂದು ಸಚಿವ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ. ಯೋಜನೆಗಳ ಸಂಕ್ಷಿಪ್ತ ವಿವರ ಮುಂದಿದೆ.

ಹಸಿವಿನಿಂದ ಮುಕ್ತ ರಾಜ್ಯಕ್ಕಾಗಿ -ಅನ್ನಭಾಗ್ಯ
ಕರ್ನಾಟಕವನ್ನು "ಹಸಿವಿನಿಂದ ಮುಕ್ತ ರಾಜ್ಯ" ಮಾಡಲು ಸರಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ "ಅನ್ನಭಾಗ್ಯ" ಯನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಜುಲೈ 2013 ರಿಂದ ಜಾರಿಗೆ ತಂದಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಪ್ರಕಾರ, "ಗಣಕೀಕರಣವನ್ನು ಅಂತ್ಯಗೊಳಿಸಲು" ಸಾರ್ವತ್ರಿಕ ವಿತರಣಾ ವ್ಯವಸ್ಥೆಯನ್ನು ಪಾರದರ್ಶಕವಾಗಿ ಮಾಡಲು, ಎಲ್ಲಾ ರೇಷನ್ ಕಾರ್ಡುಗಳು ತಮ್ಮ ಆಧಾರ್ ಸಂಖ್ಯೆಗಳೊಂದಿಗೆ ಜೋಡಣೆಗೊಂಡಿವೆ.
ಪರಿಣಾಮ: 1.08 ಕೋಟಿ ಕುಟುಂಬಗಳು ಅನ್ನ ಭಾಗ್ಯದಿಂದ ಪ್ರಯೋಜನ ಪಡೆಯುತ್ತಿವೆ. ಪ್ರತಿ ಸದಸ್ಯ ಮಾಸಿಕ ತಲಾ 7 ಕೆ.ಜಿ. ಉಚಿತ ಅಕ್ಕಿ ಮತ್ತು ಇತರ ಆಹಾರ ಧಾನ್ಯಗಳನ್ನು ಕಡಿಮೆ ಬೆಲೆಗೆ ಪಡೆಯುತ್ತಿದ್ದಾರೆ.

ಶಾಲಾ ಮಕ್ಕಳಿಗೆ ಹಾಲು ವಿತರಣೆ
ರಾಜ್ಯ ಸರ್ಕಾರದಿಂದ ಶಾಲಾ ಮಕ್ಕಳಿಗೆ ಹಾಲು ವಿತರಣೆ ಮಾಡುವ ನವೀನ ಕಾರ್ಯಕ್ರಮವನ್ನು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಹಯೋಗದೊಂದಿಗೆ ರಾಜ್ಯದಲ್ಲಿ ಆಗಸ್ಟ್ 1, 2013 ರಂದು ಪ್ರಾರಂಭಿಸಿದೆ.
ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ವಾರಕ್ಕೆ 5 ದಿನಗಳು 150 ಮಿ.ಗ್ರಾಂ ಹಾಲು ರಾಜ್ಯದ 51000 ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯಲ್ಲಿ ಓದುವ ವಿದ್ಯಾರ್ಥಿಗಳು ಮತ್ತು 64,000 ಅಂಗನವಾಡಿ ಕೇಂದ್ರಗಳಲ್ಲಿ 39 ಲಕ್ಷ ಅಂಗನವಾಡಿ ಮಕ್ಕಳನ್ನು ಉಚಿತವಾಗಿ ನೀಡಲಾಗುತ್ತಿದೆ.
ಕೆಎಂಎಫ್ ನ 13 ಹಾಲು ಒಕ್ಕೂಟಗಳ ಮೂಲಕ ರೂ.384 ಕೋಟಿ ವೆಚ್ಚದಲ್ಲಿ ದಿನಕ್ಕೆ 5 ಲಕ್ಷ ಲೀಟರ್ ಗಳನ್ನು ಕೊಳ್ಳುವ ಮೂಲಕ ವಿತರಣೆ ಮಾಡಲಾಗುತ್ತಿದೆ.
ಪರಿಣಾಮ: "ಕ್ಷೀರ ಭಾಗ್ಯ" ಒಂದು ದೊಡ್ಡ ಯಶಸ್ವಿ ಯೋಜನೆಯಾಗಿದ್ದು, ಮಕ್ಕಳಿಗೆ ಶಾಲೆಯಲ್ಲಿ ಪೌಷ್ಟಿಕ ಬೆಂಬಲವನ್ನು ಪಡೆಯಲು ಸಹಾಯ ಮಾಡುತ್ತದೆ. ಇದಲ್ಲದೆ, ಈ ಸರ್ಕಾರವು ಡೈರಿ ರೈತರಿಗೆ ಒಂದು ಲೀಟರ್ ಗೆ ಹೆಚ್ಚುವರಿಯಾಗಿ ಪ್ರೋತ್ಸಾಹಕವಾಗಿ 5 ರೂಪಾಯಿಗಳನ್ನು ನೀಡಲು ಪ್ರಾರಂಭಿಸಿದೆ, ಇದರಿಂದ ಹಾಲು ಉತ್ಪಾದನೆಯಲ್ಲಿ ಭಾರಿ ಹೆಚ್ಚಳವಾಗಿದೆ.

ಮಾತೃಪೂರ್ಣ ಯೋಜನೆ
ಗರ್ಭಿಣಿಯರಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ ಹಾಗೂ ರಕ್ತಹೀನತೆಯನ್ನು ಹೋಗಲಾಡಿಸಲು ಕರ್ನಾಟಕ ಸರ್ಕಾರವು 'ಮಾತೃಪೂರ್ಣ' ಯೋಜನೆ ಜಾರಿಗೊಳಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಗರ್ಭಿಣಿ ಮಹಿಳೆಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕಾಂಶವುಳ್ಳ ತರಕಾರಿ, ಬೇಳೆ ಹಾಗೂ ಬಿಸಿಯೂಟವನ್ನು ನೀಡಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದರ ಉಸ್ತುವಾರಿ ನೋಡಿಕೊಳ್ಳುತ್ತದೆ. ಪೌಷ್ಟಿಕಾಂಶದ ಆಹಾರ ಸೇವಿಸಲು ಇಚ್ಛಿಸುವವರು ಪ್ರತಿ ಊಟಕ್ಕೆ 10 ರೂ. ನೀಡಬೇಕು.
ಪರಿಣಾಮ: ಗರ್ಭಿಣಿ ಮತ್ತು ಬಾಣಂತಿಯರಿಗೆ ಶುಚಿಯಾದ ಬಿಸಿಯಾದ ಪೌಷ್ಟಿಕ ಊಟ, ಗರ್ಭಾವಸ್ಥೆ ಮತ್ತು ಬಾಣಂತನದ ಆರು ತಿಂಗಳ ವರೆಗೆ ದಿನಕ್ಕೆ ಒಂದು ಹೊತ್ತು ಪೌಷ್ಟಿಕ ಊಟ ಲಭ್ಯವಾಗಿದೆ. ಇದರ ಜತೆಗೆ, ಹೆರಿಗೆ ಪೂರ್ವ ಮತ್ತು ಹೆರಿಗೆ ನಂತರ ಕ್ಯಾಲ್ಸಿಯಂ ಮತ್ತು ಐಎಎಫ್ ಪೂರೈಸಲಾಗಿದೆ.

ಇಂದಿರಾ ಕ್ಯಾಂಟೀನ್ ಹಾಗೂ ಸವಿರುಚಿ
- ಬೆಂಗಳೂರಿನ 198 ವಾರ್ಡ್‍ಗಳಲ್ಲಿ ತಲಾ ಒಂದು ಇಂದಿರಾ ಕ್ಯಾಂಟೀನ್
- ರೂ.5ಕ್ಕೆ ಉಪಹಾರ, ರೂ.10ಕ್ಕೆ ಶುಚಿ ರುಚಿಯಾದ ಊಟ
- ನಿತ್ಯ 3 ಲಕ್ಷ ಜನರಿಗೆ ಯೋಜನೆಯ ಲಾಭ
- ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೂ ವಿಸ್ತರಣೆ
***
- 30 ಜಿಲ್ಲೆಗಳಿಗೆ ಒಂದರಂತೆ ಸವಿರುಚಿ ಕ್ಯಾಂಟೀನ್
- ತರಬೇತಿ ಹೊಂದಿದ ಮಹಿಳೆಯರಿಂದ ಕ್ಯಾಂಟೀನ್ ನಿರ್ವಹಣೆ
- ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿ