• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಸೆಂಬ್ಲಿ ಚುನಾವಣೆ: 'ಅಲ್ಲಾ ಹಾಗೂ ರಾಮನ ವಿರುದ್ಧದ ಸೆಣಸು'

By ಅನುಷಾ ರವಿ
|
   ಅಸೆಂಬ್ಲಿ ಚುನಾವಣೆ: 'ಅಲ್ಲಾ ಹಾಗೂ ರಾಮನ ವಿರುದ್ಧದ ಸೆಣಸು' | Oneindia Kannada

   ಬಂಟ್ವಾಳ, ಜನವರಿ 23: ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿವಾದಿತ ಹೇಳಿಕೆ ನೀಡಿದ್ದಾರೆ. ಬಂಟ್ವಾಳ ಕ್ಷೇತ್ರದ ಕಲ್ಲಡ್ಕದಲ್ಲಿ ನಡೆದ ಬಿ.ಜೆ.ಪಿ. ಸಮಾವೇಶದಲ್ಲಿ ಮಾತನಾಡುತ್ತಾ, ಮುಂಬರುವ ವಿಧಾನಸಭೆ ಚುನಾವಣೆಯು ಅಲ್ಲಾ ಹಾಗೂ ರಾಮನ ನಡುವಿನ ಯುದ್ಧ ಎಂದು ಘೋಷಿಸಿದ್ದಾರೆ.

   ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಈ ಮೂಲಕ ಬಿಜೆಪಿಯ ಮುಖ್ಯ ಅಜೆಂಡಾ ಎನಿಸಿಕೊಂಡಿರುವ ಹಿಂದೂತ್ವ ಪ್ರತಿಪ್ರಾದನೆಯನ್ನು ಮತ್ತೊಮ್ಮೆ ಹೊರಹಾಕಿದ್ದಾರೆ.

   ಮುಂದಿನ ವಿಧಾನಸಭೆ ಚುನಾವಣೆ ರಮಾನಾಥ್ ರೈ ಮತ್ತು ರಾಜೇಶ್ ನಾಯಕ್ ಅವರ ನಡುವಿನ ಸ್ಪರ್ಧೆಯಲ್ಲ, ಅಲ್ಲಾ ಮತ್ತು ರಾಮನ ನಡುವಿನ ಸ್ಪರ್ಧೆಯಾಗಿದೆ, ಬಂಟ್ವಾಳ ಯಾರನ್ನು ಆಯ್ಕೆಮಾಡಲಿದೆ? ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.

   ಅಲ್ಲಾನನ್ನು ಮತ್ತೊಮ್ಮೆ ಆಯ್ಕೆ ಮಾಡುವಿರಾ? ಅಥವಾ ರಾಮನನ್ನು ನಂಬಿದವರನ್ನು ಆಯ್ಕೆ ಮಾಡುತ್ತೀರಾ?ಬಂಟ್ವಾಳಕ್ಕೆ ಯಾರು ಬೇಕೆನ್ನುವುದನ್ನು ಜನ ತೀರ್ಮಾನಿಸಬೇಕು ಎಂದು ಪ್ರಶ್ನಿಸಿದ್ದಾರೆ.

   ಈ ಮೂಲಕ 'ಬಂಟ್ವಾಳದಲ್ಲಿ ಮುಸ್ಲಿಮರ ಮತಗಳಿಂದ 6 ಸಲ ಆಯ್ಕೆಯಾಗಿದ್ದೇನೆ' ಎಂದು ಸಚಿವ ರಮಾನಾಥ ರೈ ನೀಡಿದ್ದ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಹಿಂದೂಗಳ ಮತಗಳು ಬೇಡವೆನ್ನುವವರಿಗೆ ನಾವು ಬೆಂಬಲಿಸಬೇಕಾ? ನೀವೇ ತೀರ್ಮಾನಿಸಿ ಎಂದಿದ್ದಾರೆ.

   ಬಿಜೆಪಿ ಹಾಗೂ ಕಾಂರ್ಗೆಸ್ ನಡುವಿನ ಹೋರಾಟವಲ್ಲ, 6 ಸಲ ಶಾಸಕನಾಗಿ ಆಯ್ಕೆಯಾಗಿರುವ ವ್ಯಕ್ತಿಗೆ ಹಿಂದೂಗಳ ವೋಟು ಬೇಡವಾಗಿದೆ. ಇದು ಬಂಟ್ವಾಳದ ವಿಷ್ಯ ಮಾತ್ರವಲ್ಲ, ಇಡೀ ಜಿಲ್ಲೆಯ ಘನತೆಯ ಪ್ರಶ್ನೆಯಾಗಿದೆ ಎಂದು ಸುನೀಲ್ ಕುಮಾರ್ ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   A Bharatiya Janata Party (BJP) MLA has declared that the upcoming Karnataka Assembly Elections 2018 will be a fight between Allah and Ram. V Sunil Kumar, BJP MLA from Karkala made the comments while addressing a rally in Bantwal constituency of communally sensitive Coastal Karnataka.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more