'ಆರಂಭದಲ್ಲಿ ಇವಿಎಂ ಚೆನ್ನಾಗಿತ್ತು, ನಂತ್ರ ಹ್ಯಾಕ್ ಆಗಿದೆ ಅಂತಿದ್ದಾರೆ'
ಬೆಂಗಳೂರು, ಡಿಸೆಂಬರ್ 18 : "ಬೆಳಗ್ಗೆ 8.45 ರಿಂದ 9.45ರವರೆಗೆ ಕಾಂಗ್ರೆಸ್ಸಿನವರಿಗೆ ಇವಿಎಂ ತುಂಬಾ ಚೆನ್ನಾಗಿ ಕೆಲಸ ಮಾಡಿತ್ತು. ಬಳಿಕ ಇವಿಎಂನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ" ಎಂದು ಚಿಕ್ಕಮಗಳೂರು ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.
ಇಂದು (ಸೋಮವಾರ) ಗುಜರಾತ್ ಮತ್ತು ಹಿಮಾಚಲ ಪ್ರದೇಶ ಅಸೆಂಬ್ಲಿ ಚುನಾವಣೆ ಮತ ಎಣಿಕೆಯ ಆರಂಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದಲ್ಲಿ ಮುನ್ನಡೆ ಸಾಧಿಸಿದ್ದವು. ಇದನ್ನೇ ಸಿಟಿ ರವಿ ಅವರು ಈ ರೀತಿಯಾಗಿ ಟ್ರಾಲ್ ಮಾಡಿ ಸರಣಿ ಟ್ವೀಟ್ ಮಾಡಿದ್ದಾರೆ.

ಅಭಿವೃದ್ಧಿಯನ್ನು ನೋಡಿ ನಮ್ಮ ಪಕ್ಷಕ್ಕೆ ಗುಜರಾತಿನ ಜನ ಸ್ಪಷ್ಟ ಬಹುಮತ ನೀಡಿದ್ದಾರೆ. ಮೀಸಲಾತಿ ಹೋರಾಟ ಮತ್ತು ರಾಹುಲ್ ಗಾಂಧಿಯ ದೇವಾಲಯ ಭೇಟಿಯನನ್ನು ಜನ ತಿರಸ್ಕರಿಸಿದ್ದಾರೆ.
For one hour between 8:45 to 9:45 this morning the EVMs worked extremely well but after that they started showing signs of hacking.
— C.T.Ravi (@CTRavi_BJP) December 18, 2017
ಗುಜರಾತಿನಲ್ಲಿ ನಿಜವಾಗಿ ಬಿಜೆಪಿ ಜಯಗಳಿಸಿದರೂ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಹೊಗಳುತ್ತಿರುವುದೇಕೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಸಿಟಿ ರವಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications