ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ತವ್ಯಕ್ಕೆ ಹಾಜರಾಗದಿದ್ದರೆ ಬಂಧನ, ಚುನಾವಣಾ ಆಯೋಗ ಎಚ್ಚರಿಕೆ

By Manjunatha
|
Google Oneindia Kannada News

Recommended Video

Karnataka Elections 2018 : ಸರ್ಕಾರಿ ನೌಕರರಿಗೆ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ವಾರ್ನಿಂಗ್

ಬೆಂಗಳೂರು, ಮೇ 03: ಬಾಲಿಷ ನೆವಗಳನ್ನು ಒಡ್ಡಿಯೋ ಅಥವಾ ಬೇಜವಬ್ದಾರಿತನದಿಂದಲೋ ಸರ್ಕಾರಿ ಅಧಿಕಾರಿಗಳು ಚುನಾವಣಾ ಕರ್ತವ್ಯವನ್ನು ತಪ್ಪಿಸಿಕೊಳ್ಳುವಂತಿಲ್ಲ, ಹಾಗೇನಾದರೂ ಕರ್ತವ್ಯದಿಂದ ತಪ್ಪಿಸಿಕೊಂಡಲ್ಲಿ ಜೈಲು ಸೇರಬೇಕಾಗುತ್ತದೆ ಜಾಗೃತೆ.

ಚುನಾವಣಾ ಕರ್ತವ್ಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುವವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಹೇಳಿದ್ದು, ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಇತಿಹಾಸ ಹೊಂದಿರುವವರನ್ನು ಗುರುತಿಸಿ ಎಚ್ಚರಿಕೆ ಸಹ ನೀಡಲಾಗಿದೆ ಎಂದರು.

ಮತ ಹಾಕಲು ಅಂಗವಿಕಲರಿಗೆ ವಿಶೇಷ ಸೌಲಭ್ಯ:ಸಂಜೀವ್ ಕುಮಾರ್ ಮತ ಹಾಕಲು ಅಂಗವಿಕಲರಿಗೆ ವಿಶೇಷ ಸೌಲಭ್ಯ:ಸಂಜೀವ್ ಕುಮಾರ್

ಚುನಾವಣಾ ಕರ್ತವ್ಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುವವರ ಸಂಖ್ಯೆ ಬೆಂಗಳೂರಿನಲ್ಲೇ ಹೆಚ್ಚಿದ್ದು 1500 ಹೆಚ್ಚು ಅಧಿಕಾರಿಗಳು ಕುಂಟು ನೆವ ಹೇಳಿ ಕರ್ತವ್ಯದಿಂದ ತಪ್ಪಿಸಿಕೊಳ್ಳುವ ಗುಣ ಹೊಂದಿದ್ದಾರಂತೆ. ಆದರೆ ಬೇರೆ ಜಿಲ್ಲೆಗಳಲ್ಲಿ ಈ ಸಮಸ್ಯೆ ಇಲ್ಲವಂತೆ.

election duty absentee will be arrested: sanjeev Kumar

ಚುನಾವಣಾ ಆಯೋಗದ ನಿಯಮಾವಳಿ ಸೆಕ್ಷನ್‌ 134 ರ ಪ್ರಕಾರ ಸರ್ಕಾರಿ ನೌಕರರು ಚುನಾವಣಾ ಕರ್ತವ್ಯ ದಿಂದ ತಪ್ಪಿಸಿಕೊಳ್ಳುವುದು ಅಪರಾಧ. ಚುನಾವಣಾ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗಬೇಕು ಎಂದು ಸಂಜೀವ್‌ ಕುಮಾರ್ ಹೇಳಿದರು.

ರಾಜ್ಯಾದ್ಯಂತ ಚುನಾವಣಾ ಕಾರ್ಯಕ್ಕೆ ಒಟ್ಟು 3.50 ಲಕ್ಷ ಸಿಬ್ಬಂದಿ ಬೇಕಾಗುತ್ತದೆ. ಪ್ರತಿ ಮತಗಟ್ಟೆಗೆ ಐವರು ಸಿಬ್ಬಂದಿ ಬೇಕು. ಇವಿಎಂ ಎಂ-3 ಇರುವಲ್ಲಿ ನಾಲ್ಕು ಜನ ಸಾಕು ಎಂದು ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ 5.69 ಕೋಟಿಗೆ ಏರಿಕೆ ಆಗಿದೆ ಎಂದ ಅವರು, ಮಹಿಳಾ ಮತದಾರರ ನೋಂದಣಿ ಪ್ರಮಾಣ ಶೇ.16 ರಷ್ಟು ಹೆಚ್ಚಾಗಿದೆ. ಪುರುಷ ಮತ್ತು ಮಹಿಳಾ ಮತದಾರರ ಅನುಪಾತ 1000 ಕ್ಕೆ 974 ಇದೆ. 2013 ರಲ್ಲಿ ಆ ಪ್ರಮಾಣ 952 ಇತ್ತು. ಈ ಬಾರಿ 15.44 ಲಕ್ಷ ಯುವ ಮತದಾರರು ಹೆಸರು ನೋಂದಾಯಿಸಿದ್ದಾರೆ ಎಂದು ತಿಳಿಸಿದರು.

English summary
Chief Election officer Sanjeev Kumar said that any one officer who absent for the election duty will be arrested and interrogated. He also said 3.50 lack people will work for this election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X