Karnataka Election Schedule 2023: ಇಂದೇ ಪ್ರಕಟಗೊಳ್ಳಲಿದೆ ವೇಳಾಪಟ್ಟಿ- ಬೆಳಿಗ್ಗೆ 11:30ಕ್ಕೆ ಚುನಾವಣಾ ಆಯೋಗ ಸುದ್ದಿಗೋಷ್ಠಿ
ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ( Election Commission of India ) ಇಂದು ( ಮಾರ್ಚ್ 29, 2023 - ಬುಧವಾರ ) ಬೆಳಿಗ್ಗೆ 11:30 ಗಂಟೆಗೆ ಕರ್ನಾಟಕ ವಿಧಾನಸಭೆಗೆ ( Karnataka Assembly Elections 2023 ) ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.
ಪ್ರಮುಖ ರಾಜಕೀಯ ಪಕ್ಷಗಳಾದ ಭಾರತೀಯ ಜನತಾ ಪಕ್ಷ ( BJP ), ಕಾಂಗ್ರೆಸ್ ( Congress ) ಮತ್ತು ಜನತಾ ದಳ ( JDS ) ಹಾಗೂ ಆಮ್ ಆದ್ಮಿ ಪಕ್ಷಗಳು ( AAP ) ಕರ್ನಾಟಕ ಚುನಾವಣಾ ಸಮರಕ್ಕೆ ತಯಾರಿ ನಡೆಸುತ್ತಿವೆ.

ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಬಿಜೆಪಿಯು ಚುನಾವಣಾ ದಿನಾಂಕ ಘೋಷಣೆಯ ನಂತರ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದ್ದಾರೆ.
ವರುಣಾದಿಂದ ಕಣಕ್ಕಿಳಿದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ನ ಪ್ರಮುಖ ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲೊಬ್ಬರು. ಪಕ್ಷವು ಕೋಲಾರವನ್ನು ಮಾಜಿ ಸಿಎಂಗೆ ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

124 ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಇತರ ಪ್ರಮುಖ ಹೆಸರುಗಳಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕನಕಪುರದಿಂದ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಚಿತ್ತಾಪುರದಿಂದ (ಎಸ್‌ಸಿ) ಸ್ಪರ್ಧಿಸಲಿದ್ದಾರೆ. ಮಾಜಿ ಡಿಸಿಎಂ ಜಿ ಪರಮೇಶ್ವರ್ ಅವರು ಕೊರಟಗೆರೆಯಿಂದ ಸ್ಪರ್ಧಿಸಲಿದ್ದಾರೆ.
ಮತದಾರರ ಅಂಕಿಅಂಶಗಳು
2.59 ಮಹಿಳೆಯರು ಸೇರಿದಂತೆ 5.21 ಕೋಟಿ ಜನರು ಮತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ. 16,976 ಶತಾಯುಷಿಗಳು, 4,699 ಟ್ರಾನ್ಸ್‌ಜೆಂಡರ್ಸ್ ಮತದಾರರು ಮತ್ತು 9.17 ಲಕ್ಷ ಮೊದಲ ಬಾರಿಯ ಮತದಾರರು ಸೇರಿದ್ದಾರೆ. ಇದಲ್ಲದೆ, 5.55 ಲಕ್ಷ ಮತದಾರರು ಅಂಗವಿಕಲರಾಗಿದ್ದಾರೆ. 12.15 ಲಕ್ಷ ಮತದಾರರು 80 ವರ್ಷಕ್ಕಿಂತ ಮೇಲ್ಪಟ್ಟವರು. ಕೇಂದ್ರ ಚುನಾವಣಾ ಆಯೋಗವು ಮೊದಲ ಬಾರಿಗೆ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸೌಲಭ್ಯಗಳನ್ನು ನೀಡುತ್ತಿದೆ.
ಮತದಾನ ಕೇಂದ್ರಗಳು
ನಗರ ಪ್ರದೇಶಗಳಲ್ಲಿ 24,063 ಸೇರಿದಂತೆ ರಾಜ್ಯವು 58,272 ಮತಗಟ್ಟೆಗಳನ್ನು ಹೊಂದಿದೆ. ಇವರಲ್ಲಿ 1,320 ಮಹಿಳೆಯರು ನಿರ್ವಹಿಸುತ್ತಿದ್ದಾರೆ. 29,141 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ನಡೆಯಲಿದೆ. ಹೆಚ್ಚಿನ ಮತಗಟ್ಟೆಗಳು ಶಾಲೆಗಳಲ್ಲಿದ್ದು, ಕುಡಿಯುವ ನೀರು, ವಿದ್ಯುತ್, ಶೌಚಾಲಯದಂತಹ ಸೌಲ್ಯಭ್ಯಗಳನ್ನು ಹೊಂದಿವೆ ಎಂದು ಕೇಂದ್ರ ಚುನಾವಣಾ ಆಯೋಗವು ಹೇಳಿದೆ.
ಕರ್ನಾಟಕ ವಿಧಾನಸಭೆಯ ಕೆಳಮನೆಯು 224 ಸದಸ್ಯರನ್ನು ಹೊಂದಿದೆ. ವಿಧಾನಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ಕರ್ನಾಟಕವನ್ನು 224 ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ. ಪ್ರತಿ ಕ್ಷೇತ್ರವು ಒಬ್ಬ ಸದಸ್ಯರನ್ನು ಆಯ್ಕೆ ಮಾಡುತ್ತದೆ. ಚುನಾವಣೆಗಳನ್ನು ಭಾರತದ ಚುನಾವಣಾ ಆಯೋಗವು ನಡೆಸುತ್ತದೆ.
ಸದಸ್ಯರ ಸಾಮಾನ್ಯ ಅವಧಿಯು ಐದು ವರ್ಷಗಳವರೆಗೆ ಇರುತ್ತದೆ. ಸದಸ್ಯರ ಮರಣ, ರಾಜೀನಾಮೆ ಅಥವಾ ಅನರ್ಹತೆಯ ಸಂದರ್ಭದಲ್ಲಿ, ಸದಸ್ಯರು ಪ್ರತಿನಿಧಿಸುವ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲಾಗುತ್ತದೆ. ಬಹುಮತ ಹೊಂದಿರುವ ಪಕ್ಷ ಅಥವಾ ಮೈತ್ರಿಕೂಟವು ಆಡಳಿತ ಪಕ್ಷವಾಗುತ್ತದೆ.
ಪ್ರಸ್ತುತ ಕರ್ನಾಟಕದಲ್ಲಿ ಬಸವರಾಜ ನೇತೃತ್ವದ ಬಿಜೆಪಿಯು ಆಡಳಿತದಲ್ಲಿದೆ. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಬಿಜೆಪಿ ಹಿರಿಯ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಗೆ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮೂರನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಕರ್ನಾಟಕದ ಪ್ರಮುಖ ವಿಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ.












Click it and Unblock the Notifications