ಮೊಹ್ಮದ್ ಮೊಯ್ಸಿನ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಆಯೋಗ

ಬೆಂಗಳೂರು, ಮೇ 16 : ಐಎಎಸ್ ಅಧಿಕಾರಿ ಮೊಹ್ಮದ್ ಮೊಯ್ಸಿನ್ ಅಮಾನತು ಆದೇಶ ರದ್ದು ಮಾಡಿರುವುದನ್ನು ಚುನಾವಣಾ ಆಯೋಗ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದೆ. ಸಿಎಟಿ ಅಮಾನತು ಆದೇಶವನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಲಿಕಾಪ್ಟರ್ ತಪಾಸಣೆ ನಡೆಸಿದ ಕಾರಣಕ್ಕೆ ಚುನಾವಣಾ ಆಯೋಗ ಐಎಎಸ್ ಅಧಿಕಾರಿ ಮೊಹ್ಮದ್ ಮೊಯ್ಸಿನ್ ಅವರನ್ನು ಅಮಾನತು ಮಾಡಿತ್ತು. ಮೊಹ್ಮದ್ ಮೊಯ್ಸಿನ್ ಇದನ್ನು ಸಿಎಟಿಯಲ್ಲಿ ಪ್ರಶ್ನೆ ಮಾಡಿದ್ದರು.

ಸಿಎಟಿ ಆದೇಶವನ್ನು ಪ್ರಶ್ನಿಸಿ ಚುನಾವಣಾ ಆಯೋಗ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ, ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಮೊಹ್ಮದ್ ಮೊಯ್ಸಿನ್, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಸಿಎಟಿ ಆದೇಶದ ಬಳಿಕ ಮೊಹ್ಮದ್ ಮೊಯ್ಸಿನ್ ಅವರು ಕರ್ನಾಟಕದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಈಗ ಆಯೋಗ ಅವರ ವಿರುದ್ಧ ಕಾನೂನು ಹೋರಾಟ ಆರಂಭಿಸಿದೆ....

ಮೊಹ್ಮದ್ ಮೊಯ್ಸಿನ್ ಯಾರು?

ಮೊಹ್ಮದ್ ಮೊಯ್ಸಿನ್ ಯಾರು?

ಮೊಹ್ಮದ್ ಮೊಯ್ಸಿನ್ ಅವರು 1996ನೇ ಬ್ಯಾಚ್‌ನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ. ಎಸ್‌ಪಿಜಿ ಭದ್ರತೆ ಇರುವ ಗಣ್ಯ ವ್ಯಕ್ತಿಗಳ ಹೆಲಿಕಾಪ್ಟರ್ ತಪಾಸಣೆ ಮಾಡುವಾಗ ಸರಿಯಾದ ಸೂಚನೆ ಪಾಲಿಸಿಲ್ಲ ಎಂಬ ಕಾರಣಕ್ಕೆ ಚುನಾವಣಾ ಆಯೋಗ ಅವರನ್ನು ಅಮಾನತುಗೊಳಿಸಿತ್ತು. ಇದನ್ನು ಮೊಹ್ಮದ್ ಮೊಯ್ಸಿನ್ ಸಿಎಟಿಯಲ್ಲಿ ಪ್ರಶ್ನೆ ಮಾಡಿದ್ದರು. ಸಿಎಟಿ ಅಮಾನತು ಆದೇಶಕ್ಕೆ ತಡೆ ನೀಡಿತ್ತು.

ನರೇಂದ್ರ ಮೋದಿ ಹೆಲಿಪಾಕ್ಟರ್

ನರೇಂದ್ರ ಮೋದಿ ಹೆಲಿಪಾಕ್ಟರ್

13/3/2019ರಂದು ಚುನಾವಣಾ ಆಯೋಗ ಹೊರಡಿಸಿದ ಆದೇಶದಂತೆ ಮೊಹ್ಮದ್ ಮೊಯ್ಸಿನ್ ಅವರನ್ನು ಜನರಲ್ ಅಬ್‌ಜರ್ವರ್ ಆಗಿ ಓಡಿಶಾ ರಾಜ್ಯದ ಸಂಬಲ್‌ಪುರ ಸಂಸದೀಯ ಕ್ಷೇತ್ರಕ್ಕೆ ನಿಯೋಜನೆ ಮಾಡಲಾಗಿತ್ತು. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ತಪಾಸಣೆ ಮಾಡುವಾಗ ನಿಯಮ ಪಾಲಿಸಿಲ್ಲ ಎಂಬುದು ಆರೋಪ.

ಮೊಹ್ಮದ್ ಮೊಯ್ಸಿನ್ ಸ್ಪಷ್ಟನೆ

ಮೊಹ್ಮದ್ ಮೊಯ್ಸಿನ್ ಸ್ಪಷ್ಟನೆ

16/4/2019ರಂದು ಚುನಾವಣಾ ಆಯೋಗ ಮೊಹ್ಮದ್ ಮೊಯ್ಸಿನ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಆದರೆ, ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದ ಮೊಹ್ಮದ್ ಮೊಯ್ಸಿನ್ ಅವರು ನಿಗದಿತ ಸೂಚನೆಗಳನ್ನು ಪಾಲಿಸಿದ್ದೇನೆ. ಈ ಹಿಂದೆ ಸಹ ವಿವಿಧ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ನಾನು ಜನರಲ್ ಅಬ್‌ಜರ್ವರ್ ಆಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದರು.

ಅಮಾನತು ಆದೇಶ ರದ್ದು ಮಾಡಿತ್ತು

ಅಮಾನತು ಆದೇಶ ರದ್ದು ಮಾಡಿತ್ತು

ಸಿಎಟಿ ಮೊಹ್ಮದ್ ಮೊಯ್ಸಿನ್ ಅಮಾನತು ಆದೇಶ ರದ್ದುಪಡಿಸಿದ ಬಳಿಕ ಚುನಾವಣಾ ಆಯೋಗ ಸಹ ಅಮಾನತು ರದ್ದು ಮಾಡಿತ್ತು. ಆದರೆ, ಮೊಹ್ಮದ್ ಮೊಯ್ಸಿನ್ ವಿರುದ್ಧ ಶಿಸ್ತಿನ ನಡಾವಳಿಯನ್ನು ಆರಂಭಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈಗ ಸಿಎಟಿ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+