ಅಯ್ಯಪ್ಪ ಸ್ತುತಿ ದುರ್ಬಳಕೆ ಮಾಡಿಲ್ಲ : ಶಾಸಕ ಬಾವಾ

Posted By:
Subscribe to Oneindia Kannada

ಮಂಗಳೂರು, ಮಾರ್ಚ್ 11: 'ಅಯ್ಯಪ್ಪ ಸ್ವಾಮಿಯ ವಿಶೇಷ ಭಕ್ತರಲ್ಲಿ ನಾನೂ ಒಬ್ಬ. ಸ್ವಾಮಿ ಅಯ್ಯಪ್ಪ ಸ್ತುತಿ ದುರ್ಬಳಕೆ ಮಾಡಿಕೊಂಡಿರುವುದರಲ್ಲಿ ನನ್ನ ಕೈವಾಡವಿಲ್ಲ' ಎಂದು ಮಂಗಳೂರು ಉತ್ತರ ಕ್ಷೇತ್ರ ದ ಶಾಸಕ ಮೊಯ್ದೀನ್ ಬಾವಾ ಸ್ಪಷ್ಟಪಡಿಸಿದ್ದಾರೆ.

ಮಂಗಳೂರಿನಲ್ಲಿ ಅಯ್ಯಪ್ಪ ದೇವರ ಭಕ್ತಿಗೀತೆ ದುರುಪಯೋಗ ವಿಚಾರವಾಗಿ ಮಾತನಾಡಿದ ಅವರು, ನಾನು, ಮಕರಸಂಕ್ರಮಣದ‌ ದಿನ ಅಯ್ಯಪ್ಪ ಸ್ವಾಮಿಯ ಗುಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಅಯ್ಯಪ್ಪ ಸ್ವಾಮಿಯ ವಿಶೇಷ ಭಕ್ತರಲ್ಲಿ ನಾನೂ ಒಬ್ಬ. ಹಲವು ಅಯ್ಯಪ್ಪ ಗುಡಿಗೆ ಕೈಲಾದಷ್ಟು ಸಹಾಯ ಮಾಡಿದ್ದೇನೆ ಎಂದು ಹೇಳಿದರು.

ಅಯ್ಯಪ್ಪ ಸ್ವಾಮಿ ಸ್ತುತಿ ರಾಗದಲ್ಲಿ ಶಾಸಕ ಬಾವಾ 'ಭಜನೆ', ಹಿಂದೂಗಳ ಆಕ್ರೋಶ

ಆದರೆ, ನನ್ನ ಗಮನಕ್ಕೆ ಬಾರದೆ ಅಭಿಮಾನಿಗಳು ಅಥವಾ ವಿರೋಧಿಗಳು ಈ ಹಾಡು ರಚಿಸಿದ್ದಾರೆ ಎಂದು ಆರೋಪಿಸಿದ ಅವರು ಕ್ಷೇತ್ರ ದಲ್ಲಿ ಪಾದಯಾತ್ರೆ ನಡೆಸುತ್ತಿದ್ದಾಗ ಈ ವಿಷಯ ನನ್ನ ಗಮನಕ್ಕೆ ಬಂದಿದೆ.

Election Campaign : Mohiuddin Bava denies misusing Ayyappa Swamy song

ಯಾರದ್ದಾದರೂ ಮನಸ್ಸು ನೋವಾಗಿದ್ದಲ್ಲಿ ಕ್ಷಮೆ ಕೇಳುತ್ತೇನೆ. ವಾಟ್ಸಪ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಪದ್ಯ ವೈರಲ್ ಮಾಡಲಾಗಿದೆ ಎಂದು ದೂರಿದ ಅವರು ಧಾರ್ಮಿಕ ಭಾವನೆ ಕೆಣಕುವ ಕೆಲಸ ಮಾಡಬೇಡಿ ಎಂದು ಕಿಡಿಕಾರಿದರು.

ಇದನ್ನೇ ಬಳಸಿಕೊಂಡು ಕೆಲವರು ರಾಜಕೀಯ ಮಾಡುತ್ತಿದ್ದಾರೆ. ನನ್ನ ಕ್ಷೇತ್ರದ ಹೆಚ್ಚಿನ ದೇಗುಲಗಳಿಗೆ ಅನುದಾನ ದೊರಕುವಂತೆ ಮಾಡಿದ್ದೇನೆ. ಯಾರೋ‌ ಮಾಡಿದ‌ ತಪ್ಪನ್ನು ಮೊಯ್ದೀನ್ ಬಾವಾ ಮಾಡಿದ್ದಾರೆಂದು ಹೇಳುವುದು ಸರಿಯಲ್ಲ ಎಂದು ಅವರು ತಿಳಿಸಿದರು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನಾನು ತಪ್ಪು ಮಾಡಿದ್ದರೆ ದೇವರು ಕೂಡಾ ಕ್ಷಮಿಸಲ್ಲ. ನಾನು ಆಣೆ, ಪ್ರಮಾಣ ಮಾಡಿ ಹೇಳುತ್ತೇನೆ ನಾನು ಈ ವಿಚಾರದಲ್ಲಿ ತಪ್ಪು ಮಾಡಿಲ್ಲ ಎಂದರು.

ಜಾಕೀರ್ ನಾಯಕ್, ಓವೈಸಿ ಜೊತೆಗಿದ್ದ ಪೊಟೋ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಹಿಂದು ವಿರೋಧಿಯಾಗಿ ತೋರಿಸಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದರು.

ಜಾಕೀರ್ ನಾಯಕ್ ಓರ್ವ ನಾಗರಿಕ ಅವರು ಸಿಕ್ಕಿದಾಗ ಜೊತೆಯಾಗಿ ಪೊಟೋ ತೆಗೆದಿದ್ದೇನೆ. ಇದನ್ನು ‌ತೋರಿಸಿ ಈಗ ನಾನು ಹಿಂದು‌ವಿರೋಧಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru City North constituency MLA Mohiuddin Bava reacted a day after complaint was made against him for alleged distorting Ayyappa Swamy devotional song for his election campaign.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ