ಜೀವಮಾನದಲ್ಲಿ ನೀವು ಉದ್ಧಾರಾಗಲ್ಲ: ಟ್ರೋಲರ್ಸ್‌ಗಳಿಗೆ ಶಿಕ್ಷಣ ಸಚಿವರ ಹಿಡಿ-ಹಿಡಿ ಶಾಪ

ಬೆಂಗಳೂರು, ಮೇ 19: ಈ ಉಪಯೋಗ ಇಲ್ಲದ ಇರುವ ಕೆಲವರು ಟ್ರೋಲ್‌ ಮಾಡುತ್ತಾರೆ. ಕೆಟ್ಟ ಕೆಟ್ಟ ರೀತಿಯಲ್ಲಿ ಟ್ರೋಲ್‌ ಮಾಡುವುದು. ಟ್ರೋಲ್‌ ಮಾಡುವವರು ನಿಮ್ಮ ಜೀವಮಾನದಲ್ಲಿ ಉದ್ಧಾರಾಗಲ್ಲ. ಇನ್ಮೇಲಿಂದ ನಿಮಗೆ ನಮ್ಮ ಶಾಪ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಟ್ರೋಲರ್ಸ್‌ಗಳಿಗೆ ಮಾಧ್ಯಮದ ಎದುರು ಹಿಡಿ ಶಾಪ ಹಾಕಿದ್ದಾರೆ.

ಈ ಹೇಳಿಕೆ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಿಮ್ಮ ನರೇಂದ್ರ ಮೋದಿ ಅವರಿಗೆ ಕನ್ನಡ ಬರುತ್ತಾ? ಇಲ್ಲಿ ಬಂದು ಕನ್ನಡ ಮಾತಾಡ್ತಾರೆ, ತಮಿಳುನಾಡಿಗೆ ಹೋಗಿ ತಮಿಳಲ್ಲಿ ಮಾತಾಡ್ತಾರೆ. ಯಾರೋ ಬರೆದು ಕೊಟ್ಟಿದ್ದನ್ನು ಹೇಳ್ತಾರೆ, ಅದನ್ನು ತಳಿದುಕೊಳ್ಳಿ. ನನ್ನ ಕನ್ನಡವನ್ನು ಟ್ರೋಲ್‌ ಮಾಡುವುದರಿಂದ ನಿಮ್ಮ ಹೊಟ್ಟೆ ಏನು ತುಂಬಲ್ಲ.

Education Minister Madhu Bangarappa Lashes Out At Social Media Trollers

ನನಗೆ ಕನ್ನಡ ಓದೋದು ಸ್ವಲ್ಪ ಕಷ್ಟ. ಆದರೆ, ಮಾತಾಡುವಾಗ ಕನ್ನಡ ಚೆನ್ನಾಗಿಯೇ ಮಾತಾಡ್ತೀನಿ. ಈಗ ಏನಾದ್ರೂ ತಡವರಿಸುತ್ತಿದ್ದೇನಾ? ಟ್ರೋಲ್ ಮಾಡೋರಿಗೆ ಬೇರೆ ಕೆಲಸ ಇಲ್ಲ. ಅವರಿಗೆ ಶಾಪ ಹಾಕ್ತೀನಿ ಅಂದಿದ್ದೆ, ಅನಿವಾರ್ಯವಾಗಿ ಅದನ್ನು ಮತ್ತೆ ಹೇಳಬೇಕಾಗುತ್ತದೆ ಎಂದು ಟ್ರೋಲ್ ಮಾಡುವವರ ವಿರುದ್ಧ ಕಿಡಿಕಾರಿದರು.

ನನ್ನ ಕನ್ನಡವನ್ನು ಟ್ರೋಲ್‌ ಮಾಡುವ ಬದಲು ಸೋಶಿಯಲ್‌ ಮೀಡಿಯಾದಲ್ಲಿ ಒಳ್ಳೆಯದು ಇದೆ. ಅದನ್ನು ಟ್ರೋಲ್ ಮಾಡಿ. ನಾನೇನು ನಿಮ್ಮ ಮಕ್ಕಳಿಗೆ ಕನ್ನಡ ಹೇಳಿಕೊಡಲ್ಲ, ನನ್ನ ಕನ್ನಡದ ಬಗ್ಗೆ ತಲೆಕೆಡಿಸಿ ಕೊಳ್ಳಬೇಡಿ. ನಾನು ಕೇವಲ ಶಿಕ್ಷಣ ಇಲಾಖೆಯನ್ನು ನಡೆಸುತ್ತೇನೆ ಅಷ್ಟೇ. ಯಾವುದೇ ಪೋಷಕರು, ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ಈ ಟ್ರೋಲ್‌ನಿಂದ ಯಾವನ ಹೊಟ್ಟೆನೂ ತುಂಬಲ್ಲ, ಯಾರಿಗೂ ಏನು ಬರಲ್ಲ ಎಂದು ವಾಗ್ದಾಳಿ ನಡೆಸಿದರು.

ಶಾಪ ಹಾಕಿದ ಕೂಡಲೇ ತಟ್ಟೋಕೆ ಅವರೇನು ವಿಶ್ವಾಮಿತ್ರ ಮುನಿಗಳಾ-ಕುಮಾರ್ ಬಂಗಾರಪ್ಪ ವ್ಯಂಗ್ಯ

ಶಿಕ್ಷಣ ಸಚಿವ ಮಧು ಬಂಗಾರಪ್ಪ ಟ್ರೋಲರ್ಸ್‌ಗಳಿಗೆ ಶಾಪ ಹಾಕಿದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರ್ ಬಂಗಾರಪ್ಪ, 'ಮಂತ್ರಿಗಳು ಚುನಾವಣೆಗಿಂತ ಹೆಚ್ಚಾಗಿ ಟ್ರೋಲ್ ನಿಂದಲೇ ಇನ್ನೂ ಹೊರಗೆ ಬಂದಿಲ್ಲ. ಯಾರೋ ಟ್ರೋಲ್ ಮಾಡುತ್ತಿದ್ದಾರೆಂದು ಅವರ ಮೇಲೆ ಮಾತನಾಡೋಕೆ ಹೊರಟಿದ್ದಾರೆ, ಶಾಪ ಹಾಕಿದ ಕೂಡಲೇ ತಟ್ಟೋಕೆ ಅವರೇನು ವಿಶ್ವಾಮಿತ್ರ ಮುನಿಗಳಾ'ಎಂದು ಲೇವಡಿ ಮಾಡಿದ್ದಾರೆ.

Education Minister Madhu Bangarappa Lashes Out At Social Media Trollers

ಸಚಿವರಿಗೆ ಕಾನೂನು ಏನು ಎನ್ನುವುದು ಗೊತ್ತಿಲ್ಲ, ಅದನ್ನು ತಿಳಿದುಕೊಳ್ಳಬೇಕೆಂದಿದ್ದರೆ ಓದಿರಬೇಕು. ಇವರಿಗೆ ಓದಲು ಸಮಯವಿಲ್ಲ, ಓದಲು ಬರುವುದೂ ಇಲ್ಲ. ಯಾರ್ಯಾರು ಟ್ರೋಲ್ ಮಾಡುತಿದ್ದಾರೋ ಅವರಿಗೆ ಶಾಪ ಹಾಕುವುದರಲ್ಲೇ ಇದ್ದಾರೆ. ಆ ಮಟ್ಟದಲ್ಲಿ ಆಡಳಿತ ಮಾಡಿದರೆ ಹೇಗೆ ಎಂದು ಕುಮಾರ್ ಬಂಗಾರಪ್ಪ ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+