ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಪ್ರತಿ ತಾಲೂಕಲ್ಲಿ 2 PM SHRI ಶಾಲೆ ಸ್ಥಾಪನೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 05; ಕರ್ನಾಟಕ ಸರ್ಕಾರ PM SHRI ಶಾಲೆಗಳನ್ನು ಆರಂಭಿಸುವ ಕುರಿತು ಆದೇಶ ಹೊರಡಿಸಿದೆ. ರಾಜ್ಯದ ಪ್ರತಿ ತಾಲೂಕಿನಲ್ಲಿ 2 ಶಾಲೆ ಆರಂಭವಾಗಲಿದೆ. ಇದಕ್ಕಾಗಿ ಸ್ಥಳೀಯ ಸಂಸ್ಥೆಗಳ ಒಪ್ಪಿಗೆ ಪಡೆಯಲು ಸಹ ಸೂಚನೆ ನೀಡಲಾಗಿದೆ.

PM SHRI ಶಾಲೆಗಳನ್ನು ಆರಂಭಿಸಲು ಸ್ಥಳೀಯ ಸಂಸ್ಥೆಗಳಿಂದ ಒಪ್ಪಿಗೆ ಪತ್ರ ಪಡೆಯುವ ಬಗ್ಗೆ ಆದೇಶ ಹೊರಡಿಸಲಾಗಿದೆ. ಇದು ಕೇಂದ್ರದ ಪ್ರಾಯೋಜಿತ ಹೊಸ ಯೋಜನೆಯಾಗಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ರ ಅಂತಿಮ ವೇಳಾಪಟ್ಟಿ ಪ್ರಕಟ, ಇಲ್ಲಿದೆ ವಿವರ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ರ ಅಂತಿಮ ವೇಳಾಪಟ್ಟಿ ಪ್ರಕಟ, ಇಲ್ಲಿದೆ ವಿವರ

ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ಮತ್ತು ರಾಜ್ಯ ಸಚಿವ ಸಂಪುಟ ಈಗಾಗಲೇ PM SHRI schools (PM ScHools for Rising India) ಆರಂಭಿಸಲು ಅನುಮೋದನೆ ನೀಡಿದೆ. ಈ ಯೋಜನೆಯಡಿ ದೇಶಾದ್ಯಂತ 14500ಕ್ಕೂ ಹೆಚ್ಚು ಶಾಲೆಗಳನ್ನು PM SHRI ಶಾಲೆಗಳಾಗಿ ಅಭಿವೃದ್ಧಿ ಪಡಿಸಲಾಗುತ್ತದೆ.

ಗೋ ರಕ್ಷಣೆ ಎಲ್ಲರ ಕರ್ತವ್ಯ, ರಾಜ್ಯದಲ್ಲಿ 31 ಜಿಲ್ಲೆಗಳಲ್ಲಿ ಗೋ ಶಾಲೆ ನಿರ್ಮಾಣ: ಸುಧಾಕರ್ ಗೋ ರಕ್ಷಣೆ ಎಲ್ಲರ ಕರ್ತವ್ಯ, ರಾಜ್ಯದಲ್ಲಿ 31 ಜಿಲ್ಲೆಗಳಲ್ಲಿ ಗೋ ಶಾಲೆ ನಿರ್ಮಾಣ: ಸುಧಾಕರ್

Each Taluk Of Karnataka To Get 2 PM SHRI Schools

ಉನ್ನತೀಕರಿಸಿದ ಮೂಲಸೌಕರ್ಯ, ನವೀನ ಬೋಧನಾಶಾಸ್ತ್ರ ಮತ್ತು ತಂತ್ರಜ್ಞಾನದೊಂದಿಗೆ, ಅನುಕರಣೀಯ ಶಾಲೆಗಳಾಗಲಿರುವ PM SHRI ಶಾಲೆಗಳು, 21ನೇ ಶತಮಾನದ ಪ್ರಮುಖ ಕೌಶಲ್ಯಗಳೊಂದಿಗೆ ಸಜ್ಜುಗೊಂಡ ಸಮಗ್ರ ಮತ್ತು ಉತ್ತಮ ಪರಿಪೂರ್ಣ ವ್ಯಕ್ತಿಗಳನ್ನು ರೂಪಿಸುತ್ತವೆ ಮತ್ತು ಪೋಷಿಸುತ್ತವೆ.

ಸರ್ಕಾರಿ ಶಾಲೆ ಅವ್ಯವಸ್ಥೆ ಕುರಿತು ವಿಡಿಯೋ ಬಿಡುಗಡೆ ಮಾಡಿದ ಡಿಕೆಶಿಸರ್ಕಾರಿ ಶಾಲೆ ಅವ್ಯವಸ್ಥೆ ಕುರಿತು ವಿಡಿಯೋ ಬಿಡುಗಡೆ ಮಾಡಿದ ಡಿಕೆಶಿ

ಈ ಯೋಜನೆಯು ಜಾರಿಯಲ್ಲಿರುವ ಯೋಜನೆಗಳು/ ಪಂಚಾಯತ್ ರಾಜ್ ಸಂಸ್ಥೆಗಳು/ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಶಾಲೆಯ ಮೂಲಸೌಕರ್ಯ, ಉನ್ನತೀಕರಣ ಮತ್ತು ಸೌಲಭ್ಯಗಳ ಸೃಷ್ಠಿಗಾಗಿ ಸಮುದಾಯದ ಭಾಗವಹಿಸುವಿಕೆಗೆ ಅವಕಾಶವನ್ನು ಕಲ್ಪಿಸುತ್ತದೆ.

ಯು-ಡ್ರೆಸ್ ಕೋಡ್ ಹೊಂದಿರುವ ಸಮಗ್ರ ಶಿಕ್ಷಣ ಕರ್ನಾಟಕ ಅಡಿಯಲ್ಲಿ ಬರುವ ಸರ್ಕಾರಿ ಪ್ರಾಥಮಿಕ ಶಾಲೆಗಳು (1-5/ 1-8ನೇ ತರಗತಿ) ಮತ್ತು ಮಾಧ್ಯಮಿಕ/ ಹಿರಿಯ ಮಾಧ್ಯಮಿಕ ಶಾಲೆಗಳನ್ನು (1-10/ 1-12/ 6-10/ 6-12ನೇ ತರಗತಿ) ಈ ಯೋಜನೆಯಡಿ ಆಯ್ಕೆಗೆ ಪರಿಗಣಿಸಲಾಗುತ್ತದೆ.

ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಪ್ರತಿ ತಾಲ್ಲೂಕಿಗೆ ಎರಡರಂತೆ PM SHRI ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಈಗಾಗಲೇ ಮೊದಲ ಹಂತದಲ್ಲಿ ಆಯ್ಕೆಗೊಂಡ ಶಾಲೆಗಳಿಗೆ ಆಯಾಯ ನಗರ ಸ್ಥಳೀಯ ಸಂಸ್ಥೆ ಇವರಿಂದ ಒಪ್ಪಿಗೆ ಪತ್ರ ನೀಡಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಒಪ್ಪಿಗೆ ಪತ್ರ ನೀಡಲು ನಿರ್ದೇಶನವನ್ನು ನೀಡಲಾಗಿದೆ.

PM SHRI ಶಾಲೆ ಯೋಜನೆ; ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪಿಎಂ ಶ್ರೀ ಶಾಲೆಗಳ ಆರಂಭಕ್ಕೆ ಅನುಮೋದನೆ ನೀಡಲಾಗಿದೆ. ಇದು ಕೇಂದ್ರ/ ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶ ಸರ್ಕಾರ/ ಸ್ಥಳೀಯ ಸಂಸ್ಥೆಗಳು ನಿರ್ವಹಿಸುತ್ತಿರುವ ಆಯ್ದ ಅಸ್ತಿತ್ವದಲ್ಲಿರುವ ಶಾಲೆಗಳನ್ನು ಬಲಪಡಿಸುವ ಹೊಸ ಯೋಜನೆಯಾಗಿದೆ.

ಈ ಶಾಲೆಗಳು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಎಲ್ಲಾ ಅಂಶಗಳನ್ನು ಒಳಗೊಂಡಿವೆ ಮತ್ತು ಅನುಕರಣೀಯ ಶಾಲೆಗಳಾಗಿ ಕಾರ್ಯನಿರ್ವಹಿಸುತ್ತವೆ, ತಮ್ಮ ಸುತ್ತಮುತ್ತಲಿನ ಇತರ ಶಾಲೆಗಳಿಗೆ ಮಾರ್ಗದರ್ಶನವನ್ನು ಸಹ ನೀಡುತ್ತವೆ.

ಪಿಎಂ ಶ್ರೀ ಶಾಲೆಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆಯನ್ನು ನೀಡುತ್ತವೆ ಮತ್ತು 21ನೇ ಶತಮಾನದ ಪ್ರಮುಖ ಕೌಶಲ್ಯಗಳನ್ನು ಹೊಂದಿರುವ ಸಮಗ್ರ ಮತ್ತು ಉತ್ತಮ ಪರಿಪೂರ್ಣ ವ್ಯಕ್ತಿಗಳನ್ನು ರೂಪಿಸಲು ಮತ್ತು ಪೋಷಿಸಲು ಸಹಕಾರಿಯಾಗಲಿವೆ.

ಈ ಯೋಜನೆಗಾಗಿಯೇ 2022-23 ರಿಂದ 2026-27ರವರೆಗಿನ 5 ವರ್ಷಗಳ ಅವಧಿಗೆ 18128 ಕೋಟಿ ರೂ.ಗಳ ಕೇಂದ್ರದ ಪಾಲನ್ನು ಒಳಗೊಂಡಿರುವ 27360 ಕೋಟಿ ರೂ. ಗಳ ಒಟ್ಟು ಯೋಜನಾ ವೆಚ್ಚದೊಂದಿಗೆ ಪಿಎಂ ಶ್ರೀ ಶಾಲೆಗಳ ಯೋಜನೆಯನ್ನು ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಅನುಷ್ಠಾನಗೊಳಿಸಲಾಗುತ್ತದೆ.

ಈ ಶಾಲೆಗಳಲ್ಲಿ ಸೌರ ಫಲಕಗಳು ಮತ್ತು ಎಲ್ಇಡಿ ದೀಪಗಳು, ನೈಸರ್ಗಿಕ ಕೃಷಿಯೊಂದಿಗೆ ಪೌಷ್ಠಿಕಾಂಶ ಉದ್ಯಾನಗಳು, ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ಮುಕ್ತ, ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು, ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ರೂಢಿಗಳು/ ಸಂಪ್ರದಾಯಗಳ ಅಧ್ಯಯನ, ಹವಾಮಾನ ಬದಲಾವಣೆಗೆ ಸಂಬಂಧಿಸಿದ ಹ್ಯಾಕಥಾನ್ ಮತ್ತು ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಜಾಗೃತಿ ಮೂಡಿಸುವುದು ಮುಂತಾದ ಪರಿಸರ ಸ್ನೇಹಿ ಅಂಶಗಳು ಒಳಗೊಂಡಿವೆ.

English summary
Karnataka government ordered to set up 2 PM SHRI schools in every taluk of state. It is the union government scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X