ಆಸ್ತಿ ತೆರಿಗೆ ಪಾವತಿ ಇನ್ನು ತಲೆನೋವಲ್ಲ

ಬೆಂಗಳೂರು, ಜೂನ್ 05: ಆಸ್ತಿ ತೆರಿಗೆ ಪಾವತಿಗೆ ಗಂಟೆಗಟ್ಟಲೆ ಕಾಯುವ, ಅಧಿಕಾರಿಗಳಿಗೆ ಅಷ್ಟೋ ಇಷ್ಟೋ 'ಕೈ ಬೆಚ್ಚಗೆ' ಮಾಡುವ ತಲೆನೋವುಗಳಿಗೆ ರಾಜ್ಯ ಸರ್ಕಾರ ಅಂತ್ಯ ಹಾಡಿದೆ.

ರಾಜ್ಯದ ಎಲ್ಲಾ 10 ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಆನ್‌ಲೈನ್ ಮೂಲಕ ಆಸ್ತಿ ತೆರಿಗೆಯನ್ನು ಮಾಡುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಯು.ಟಿ.ಖಾದರ್, ಇ-ಆಸ್ತಿ ಪೋರ್ಟಲ್ ಮೂಲಕ ತೆರಿಗೆ ಪಾವತಿಯ ಜೊತೆಗೆ ಖಾತಾ ಬದಲಾವಣೆ ಸೇವೆಯನ್ನೂ ಸಹ ಆನ್‌ಲೈನ್ ಮೂಲಕವೇ ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

e-asset introduced in Karnataka for easy asset tax paying

ನಗರಪಾಲಿಕೆಯ ಜೊತೆಗೆ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿಯೂ ಈ ವ್ಯವಸ್ಥೆ ಅತಿ ಶೀಘ್ರದಲ್ಲಿ ಜಾರಿಯಾಗಲಿದೆ, ಆ ಮೂಲಕ ಆಸ್ತಿ ತೆರಿಗೆ ಅತ್ಯಂತ ಸರಳವಾಗಿ ಆಗಲಿದೆ ಎಂದು ಅವರು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಆಸ್ತಿ ತೆರಿಗೆ ಪಾವತಿಗೆ ಆನ್‌ಲೈನ್ ವ್ಯವಸ್ಥೆ ಜಾರಿಯಲ್ಲಿದೆ. ಈ ಸೇವೆಯು ಈಗ ರಾಜ್ಯದಾದ್ಯಂತ ವಿಸ್ತರಣೆ ಆಗಲಿದೆ.

ಅರ್ಜಿ ನಮೂನೆ 3/2 ಪರಿಶೀಲನೆ, ವಿವಿಧ ಬಗೆಯ ಸ್ವತ್ತುಗಳ ಹುಡುಕಾಟಕ್ಕೂ ಅವಕಾಶವಿದೆ, ಅನುಮೋದಿತ ಸ್ವತ್ತುಗಳು, ಜಿಲ್ಲಾವಾರು ಅನುಮೋದಿತ ಸ್ವತ್ತುಗಳ ಮಾಹಿತಿಯನ್ನೂ ಸಹ ಆನ್‌ಲೈನ್‌ನಲ್ಲೇ ಪಡೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+