ಡಿವೈಎಸ್ಪಿ ಗಣಪತಿ ಯಾರು? ಏನು? ಎತ್ತ?

Posted By:
Subscribe to Oneindia Kannada

ಬೆಂಗಳೂರು, ಜುಲೈ 13: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರ ಆತ್ಮಹತ್ಯೆ ಪ್ರಕರಣ ಕಣ್ಮುಂದೆ ಇರುವಾಗಲೇ ಮಡಿಕೇರಿಯಲ್ಲಿ ಡಿವೈಎಸ್ಪಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬಂದಿದ್ದು ಸಾರ್ವಜನಿಕರಿಗೆ ಆತಂಕ ತಂದಿದ್ದು ಸುಳ್ಳಲ್ಲ.

ಮಂಗಳೂರು ಡಿವೈಎಸ್‌ಪಿಯಾಗಿದ್ದ ಗಣಪತಿ ಅವರು ಮಂಗಳೂರಿನ ಐಜಿಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳೂರಿನಲ್ಲಿ ಮನೆ ಮಾಡಿರಲಿಲ್ಲ. ಸಂಸಾರವೆಲ್ಲ ಕೊಡಗಿನಲ್ಲಿತ್ತು. ವರ್ಗಾವಣೆಯ ಜೊತೆಗೆ ವೃತ್ತಿ ಬದುಕು ಕಟ್ಟಿಕೊಂಡಿದ್ದ ಗಣಪತಿ ಅವರ ಆತ್ಮಹತ್ಯೆಗೆಮಾನಸಿಕ ಖಿನ್ನತೆಯೇ ಕಾರಣ ಎಂದು ಸಿಐಡಿ ಮಧ್ಯಂತರ ವರದಿಯಲ್ಲಿ ಕಂಡು ಬಂದಿದೆ. [ಕರ್ನಾಟಕ : ಪೊಲೀಸರ ಆತ್ಮಹತ್ಯೆಗೆ ಪ್ರಮುಖ ಕಾರಣಗಳೇನು?]

ಸರಿ ಒಪ್ಪಿಕೊಳ್ಳೋಣ, ಮಾನಸಿಕ ಒತ್ತಡ ಅಥವಾ ಖಿನ್ನತೆಯೇ ನಿಜವಾದರೆ ಅದು ಹಿರಿಯ ಅಧಿಕಾರಿಗಳಿಂದ ಮಾತ್ರ ಬಂದಿರಲಿಕ್ಕೆ ಸಾಧ್ಯ. ಕುಟುಂಬದಿಂದ ಯಾವುದೇ ರೀತಿ ಒತ್ತಡ, ಹಿಂಸೆ ಅನುಭವಿಸಿದ್ದಕ್ಕೆ ಉದಾಹರಣೆಗಳಿಲ್ಲ. ಆದರೆ, ದುರಂತವೆಂದರೆ ಹಿರಿಯ ಅಧಿಕಾರಿಗಳ ಕಿರುಕುಳ ನೀಡಿದ್ದಕ್ಕೂ ಸರಿಯಾದ ಸಾಕ್ಷಿಯಿಲ್ಲ.[ಗಣಪತಿ ಅವರಿಗೆ ಅವರ ವಿರುದ್ಧದ ಕೇಸ್ ಗಳು ಕಾಡುತ್ತಿತ್ತು]

ಮಾನಸಿಕ ಖಿನ್ನತೆ, ತಲೆನೋವು, ಮರೆವಿಗಾಗಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ, ಆತ್ಮಹತ್ಯೆಗೆ ಮುಂದಾಗುವ ಸ್ವಭಾವ ಕಂಡು ಬಂದಿರಲಿಲ್ಲ ಎಂದು ಮಂಗಳೂರಿನ ವೈದ್ಯ ಡಾ. ಕಿರಣ್ ಕುಮಾರ್ ಹೇಳಿದ್ದಾರೆ.

ಗಣಪತಿ ಅವರ ಸೋದರ ತಮ್ಮಯ್ಯ ಕೂಡಾ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಆದರೆ, ಡಿವೈಎಸ್ಪಿಯಾಗಿರುವ ತಮ್ಮಯ್ಯ ಅವರಿಗೆ ಕರ್ನಾಟಕ ಸರ್ಕಾರದಿಂದ ಉನ್ನತ ಹುದ್ದೆಯ ಆಮಿಷ ಒಡ್ಡಲಾಗಿದೆ ಎಂಬುದು ವಿಪಕ್ಷಗಳ ಆರೋಪ. ಗಣಪತಿ ಅವರ ಹಿನ್ನಲೆ, ಸೇವಾ ಅವಧಿ, ಸರ್ಕಾರ ನೀಡಿರುವ ಹೇಳಿಕೆಗಳತ್ತ ಮುಂದೆ ಓದಿ...

ಗಣಪತಿ ಹಿನ್ನಲೆ ಏನು?

ಗಣಪತಿ ಹಿನ್ನಲೆ ಏನು?

ಗಣಪತಿ ಅವರು ಮೂಲತಃ ಮಡಿಕೇರಿ ಬಳಿಯ ಸಿದ್ಧಾಪುರದ ಮಂಜರಾಯನಪಟ್ಟಣದವರು. ಎಂ ಕುಶಾಲಪ್ಪ ಅವರ ಪುತ್ರ. ಸಿದ್ದಾಪುರದಲ್ಲಿಯೇ ತಮ್ಮ ಶಾಲಾ, ಕಾಲೇಜು ಶಿಕ್ಷಣವನ್ನು ಮುಗಿಸಿದರು. 1991ರ ಬ್ಯಾಚಿಗೆ ಸೇರಿರುವ ಪೊಲೀಸ್. ಪೊಲೀಸ್‌ ಇಲಾಖೆಗೆ ಕ್ರೀಡಾ ಕೋಟಾದ ಮೂಲಕವೇ ಪ್ರವೇಶಿಸಿದರು. ಸೋಮವಾರಪೇಟೆ ತಾಲೂಕಿನ ರಂಗಸಮುದ್ರದಲ್ಲಿ ಮನೆ, ಪತ್ನಿ ಪಾವನಾ, ಪುತ್ರ ನೇಹಾಲ್ ಅವರೊಂದಿಗೆ ಸುಖಿ ಕುಟುಂಬವಾಗಿತ್ತು.

ವಿವಿಧ ಕಚೇರಿ, ಠಾಣೆಯಲ್ಲಿ ಕಾರ್ಯ ನಿರ್ವಹಣೆ

ವಿವಿಧ ಕಚೇರಿ, ಠಾಣೆಯಲ್ಲಿ ಕಾರ್ಯ ನಿರ್ವಹಣೆ

ಕುಶಾಲನಗರ ಸಮೀಪದ ರಂಗಸಮುದ್ರದ ಗಣಪತಿ ಅವರು ಪೊಲೀಸ್ ಇಲಾಖೆ ಸೇರಿದ ಮೇಲೆ ಪ್ರತಿ 2-3 ವರ್ಷಕ್ಕೊಮ್ಮೆ ವರ್ಗಾವಣೆಯಾಗಿದ್ದರು. ಬಿಇಎಂಎಲ್ ನಲ್ಲೂ ಕಾರ್ಯ ನಿರ್ವಹಿಸಿದರು. ಸಬ್ ಇನ್ಸ್ ಪೆಕ್ಟರ್ ಆಗಿ 1994ರಲ್ಲಿ ಅಧಿಕಾರ. ಆಲ್ದೂರು, ಸಖರಾಯಪಟ್ಟಣ(ಚಿಕ್ಕಮಗಳೂರು)ದಲ್ಲಿ ಮೊದಲ ಅನುಭವ. ನಂತರ ಮಂಗಳೂರು, ಪುತ್ತೂರು, ಉಳ್ಳಾಲ, ಬೆಂಗಳೂರಿನ ಸಿಐಡಿ ಕಚೇರಿ. ನಂತರ ಉಳ್ಳಾಲ, ಬಂಟ್ವಾಲ, ಕದ್ರಿ(ಮಂಗಳೂರು), ಲಷ್ಕರ್(ಮೈಸೂರು), ಬೆಂಗಳೂರಿನ ಡಿಐಜಿ ಕಚೇರಿ, ಯಶವಂತಪುರ, ಮಡಿವಾಳ, ಬೆಂಗಳೂರಿನ ಐಜಿ ಕಚೇರಿ, ಬೆಂಗಳೂರು ಗ್ರಾಮಾಂತರ, ಐಜಿಪಿ(ಪಶ್ಚಿಮ ವಲಯ) ಮಂಗಳೂರು, ಕೊನೆಗೆ ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿದ್ದರು.

ಗಣಪತಿ ಅವರ ಸೇವಾ ಅವಧಿ ನೋಡಿದರೆ

ಗಣಪತಿ ಅವರ ಸೇವಾ ಅವಧಿ ನೋಡಿದರೆ

ಗಣಪತಿ ಅವರ ಸೇವಾ ಅವಧಿ ನೋಡಿದರೆ ಮಾರ್ಚ್ 10, 2014 ರಿಂದ ಏಪ್ರಿಲ್ 10, 2014 ರ ತನಕ ಸಸ್ಪೆಂಡ್ ಆಗಿದ್ದರು. ಯಶವಂತಪುರದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಆಗಸ್ಟ್ 26, 2009 ರಿಂದ ನವೆಂಬರ್ 12, 2011 ರ ತನಕ ಕರ್ತವ್ಯ ನಿರ್ವಹಿಸಿದ್ದರು. ಏಪ್ರಿಲ್ 13, 2016ರಂದು ಡಿವೈಎಸ್ಪಿಯಾಗಿ ಬಡ್ತಿ ನೀಡಲಾಯಿತು. ಬಿಜೆಪಿ ಅಧಿಕಾರದಲ್ಲಿದ್ದಾಗ ಸಸ್ಪೆಂಡ್ ಆಗಿದ್ದರು, ಕಾಂಗ್ರೆಸ್ ಸರ್ಕಾರ ಬಡ್ತಿ ನೀಡಿತು ಎಂದು ಪ್ರತ್ಯೇಕಿಸುವ ಅಗತ್ಯವಿಲ್ಲ. ಬಡ್ತಿ, ಸಸ್ಪೆಂಡ್ ಎಲ್ಲವೂ ರಾಜಕೀಯ ರಹಿತವಾದ ಪ್ರಕ್ರಿಯೆ ಎಂದು ಮನಗಾಣಬೇಕು.

ಕೇಸುಗಳು ಕಾಡುತ್ತಿತ್ತೇ?

ಕೇಸುಗಳು ಕಾಡುತ್ತಿತ್ತೇ?

2011ರಲ್ಲಿ ಯಶವಂತ ಪುರದಲ್ಲಿ ನಡೆದ ರೌಡಿಯನ್ನು ಹತ್ಯೆಗೈದ ಎನ್ ಕೌಂಟರ್ ಪ್ರಕರಣದಲ್ಲಿ ಬಿಜೆಪಿ ಸರ್ಕಾರವೇ ಅವರ ವಿರುದ್ಧ ತನಿಖೆಗೆ ಆದೇಶಿಸಿತ್ತು. ಮೃತ ರೌಡಿ ಪಚ್ಚು ಅಲಿಯಾಸ್ ಪ್ರಶಾಂತ್(20) ಅವರ ಸೋದರ ರವೀಂದ್ರ ಅವರು ಗಣಪತಿ ವಿರುದ್ಧ ಕಾನೂನು ಸಮರ ಸಾರಿದ್ದರು. ಮಾನವಹಕ್ಕುಗಳ ಆಯೋಗಕ್ಕೂ ದೂರು ನೀಡಿದ್ದರು. ರವೀಂದ್ರ ಅವರಿಗೆ ಇಲಾಖೆಯಿಂದಲೇ ಬೆಂಬಲ ಸಿಗುತ್ತಿದೆ ಎಂಬ ಗುಮಾನಿ ಗಣಪತಿ ಅವರ ತಲೆಯಲ್ಲಿತ್ತು. ನಂತರ ಸಸ್ಪೆಂಡ್ ಆಗಿದ್ದ ಗಣಪತಿ ಅವರು ಡಿವೈಎಸ್ಪಿ ಹುದ್ದೆಗೇರಲು ಐದು ವರ್ಷ ಕಾಯಬೇಕಾಯಿತು.

ಕೆಜೆ ಜಾರ್ಜ್ ವಿರುದ್ಧ ಗಣಪತಿ ಕಿಡಿಕಾರಿದ್ದೇಕೆ?

ಕೆಜೆ ಜಾರ್ಜ್ ವಿರುದ್ಧ ಗಣಪತಿ ಕಿಡಿಕಾರಿದ್ದೇಕೆ?

ಮಂಗಳೂರಿನ ಚರ್ಚ್ ದಾಳಿ ಪ್ರಕರಣದಲ್ಲಿ ಗಣಪತಿ ನಡೆದುಕೊಂಡ ರೀತಿಯಿಂದ ಅಸಮಾಧಾನಗೊಂಡ ಅಂದಿನ ಗೃಹ ಸಚಿವ ಕೆಜೆ ಜಾರ್ಜ್ ಅವರು ಸೇಡು ತೀರಿಸಿಕೊಳ್ಳಲು ಗಣಪತಿ ಅವರ ವಿರುದ್ಧ ಷಡ್ಯಂತ್ರ ರೂಪಿಸಿದ್ದರು. ಅವರ ಮೇಲಿದ್ದ ಎನ್ ಕೌಂಟರ್ ಕೇಸ್, ಲೋಕಾಯುಕ್ತ ಕೇಸ್, ಮಾನವ ಹಕ್ಕುಗಳ ಆಯೋಗಕ್ಕೆ ನೀಡಿದ್ದ ದೂರು ಎಲ್ಲದರ ಬಗ್ಗೆ ಜಾರ್ಜ್ ಮಾಹಿತಿ ಕಲೆ ಹಾಕಿದ್ದರು. ಹಿರಿಯ ಅಧಿಕಾರಿಗಳಿಂದ ಗಣಪತಿ ಮೇಲೆ ಸದಾ ನಿಗಾ ಇಡುವಂತೆ ಸೂಚಿಸಿದ್ದರು ಎಂಬ ಸುದ್ದಿ ಇದೆ. ಆದರೆ, ಇದಕ್ಕೆ ಸಾಕ್ಷಿ ಯಾರ ಬಳಿಯೂ ಇಲ್ಲ.

ಡಿವೈಎಸ್ಪಿ ಗಣಪತಿ ಯಾರು? ಏನು? ಎತ್ತ?

ಡಿವೈಎಸ್ಪಿ ಗಣಪತಿ ಯಾರು? ಏನು? ಎತ್ತ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
DySP MK Ganapathi Profile: Deputy Superintendent of Police of Mangaluru M.K. Ganapathy (56) committed suicide in a lodge in Kodagu. Ganapathy had a long tenure serving in various capacities in the Bengaluru city police but it was also marked by controversies with the official being accused of involvement in multiple encounters.
Please Wait while comments are loading...