ಸೆ.26ರ ತನಕ ದುನಿಯಾ ವಿಜಯ್‌ಗೆ ಜಾಮೀನು ಇಲ್ಲ

ಬೆಂಗಳೂರು, ಸೆಪ್ಟೆಂಬರ್ 24 : ನಟ ದುನಿಯಾ ವಿಜಯ್ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಪೂರ್ಣಗೊಳಿಸಿದೆ. ಸೆ.26ರಂದು ಆದೇಶವನ್ನು ನೀಡಲಿದೆ. ಆದ್ದರಿಂದ, ಎರಡು ದಿನಗಳ ಕಾಲ ದುನಿಯಾ ವಿಜಯ್ ಜೈಲು ವಾಸ ಅನುಭವಿಸಬೇಕಿದೆ.

ಸೋಮವಾರ ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ದುನಿಯಾ ವಿಜಯ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ನ್ಯಾಯಾಧೀಶ ಮಹೇಶ್ ಬಾಬು ಅವರು ಅರ್ಜಿಯ ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿದರು.

Duniya Vijay bail order reserved to September 26

ಹಲ್ಲೆ ಮತ್ತು ಅಪಹರಣ ಪ್ರಕರಣದಲ್ಲಿ ನಟ ದುನಿಯಾ ವಿಜಯ್ ಆರೋಪಿಯಾಗಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದುನಿಯಾ ವಿಜಯ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಮಾರುತಿ ಗೌಡ ಮೇಲೆ ಹಲ್ಲೆ ಮಾಡಿದ, ಅಪಹರಣ ಪ್ರಕರಣದಲ್ಲಿ ದುನಿಯಾ ವಿಜಯ್, ಕಾರು ಚಾಲಕ ಪ್ರಸಾದ್, ವಿಜಯ್ ಸ್ನೇಹಿತ ಪ್ರಸಾದ್, ಮಣಿ ಆರೋಪಿಗಳು. ದುನಿಯಾ ವಿಜಯ್ ಪರ ವಕೀಲರು ಸೋಮವಾರ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.

ಹಲ್ಲೆಗೊಳಗಾ ಮಾರುತಿ ಗೌಡ ಸಂಬಂಧಿಕರಾದ ಪಾನಿಪೂರಿ ಕಿಟ್ಟಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಿಸುವಂತೆ ಮನವಿ ಮಾಡಿದ್ದರು. ಎಸ್‌ಪಿಪಿ ನೇಮಕ ಮಾಡಲಾಗಿದೆ.

ನಟ ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿ ಗೌಡ ಅವರು ಜಾಮೀನು ಸಿಗುವ ನಿರೀಕ್ಷೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ್ದರು. ಪತಿಯನ್ನು ಭೇಟಿ ಮಾಡಲು ಕಾದು ಕುಳಿತಿದ್ದಾರೆ. ಆದರೆ, ಭೇಟಿಗೆ ಇನ್ನೂ ಅವಕಾಶ ಸಿಕ್ಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+