ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಪ್ಲೊಮಾ ಪರೀಕ್ಷೆಗೂ ಸಿಸಿ ಕ್ಯಾಮರಾ ಅಳವಡಿಕೆ ಕಡ್ಡಾಯ

By Nayana
|
Google Oneindia Kannada News

ಬೆಂಗಳೂರು, ಮೇ 11: ಇನ್ನುಮುಂದೆ ಡಿಪ್ಲೊಮಾ ಪರೀಕ್ಷೆಗೂ ಸಿಸಿಟಿವಿ ಅಳವಡಿಕೆ ಕಡ್ಡಾಯವಾಗಲಿದೆ. ಸಿಸಿ ಕ್ಯಾಮರಾಗಳಲ್ಲಿ ದಾಖಲಾಗುವ ದೃಶ್ಯಾವಳಿಯನ್ನು ಸಿಡಿ ರೂಪದಲ್ಲಿ ಇಲಾಖೆಗೆ ಸಲ್ಲಿಸುವುದು ಕಡ್ಡಾಯವಾಗಿದೆ.

ರಾಜ್ಯದಲ್ಲಿ 81 ಸರ್ಕಾರಿ, 44 ಅನುದಾನಿತ ಹಾಗೂ 170 ಅನುದಾನರಹಿತ ಡಿಪ್ಲೊಮಾ ಕಾಲೇಜುಗಳಿವೆ. ಈ ಕಾಲೇಜುಗಳ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಈ ಹಿಂದೆಯೇ ಸೂಚಿಸಲಾಗಿದೆ.

KSRTC:ಕೇಂದ್ರೀಯ ವಿಭಾಗದಲ್ಲಿ 184 ಸಿಸಿಟಿವಿ ಕಣ್ಗಾವಲುKSRTC:ಕೇಂದ್ರೀಯ ವಿಭಾಗದಲ್ಲಿ 184 ಸಿಸಿಟಿವಿ ಕಣ್ಗಾವಲು

ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಡಿಪ್ಲೊಮಾ ಕಾಲೇಜುಗಳಲ್ಲಿ ಮೇ ವೇಳೆ ಪರೀಕ್ಷೆಗಳು೮ ನಡೆಯುವುದು ವಾಡಿಕೆ, ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಕಟ್ಟಪ್ಪಣೆ ಮಧ್ಯೆಯೂ ಬಹುತೇಕ ಕಾಲೇಜುಗಳ ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸದಿರುವುದನ್ನು ತಾಂತ್ರಿ ಶಿಕ್ಷಣ ಇಲಾಖೆ ಈ ಬಾರಿ ಗಂಭೀರವಾಗಿ ಪರಿಗಣಿಸಿದೆ. ಶಿಸ್ತುಬದ್ಧ ಹಾಗೂ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಹಾಗೂ ನಕಲು ಪ್ರಕರಣ ಸಂಪೂರ್ಣ ತಡೆಯುವುದು ಇದರ ಹಿಂದಿನ ಉದ್ದೇಶವಾಗಿದೆ.

DTE makes compulsory CCTV installation for Diploma exams

ತಾಂತ್ರಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿ , 2018 ಮೇ 8ರಂದು ರಾಜ್ಯದ ಎಲ್ಲ ಡಿಪ್ಲೊಮಾ ಕಾಲೇಜುಗಳ ಎಲ್ಲ ಪ್ರಾಚಾರ್ಯರಿಗೆ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಸಿಸಿ ಕ್ಯಾಮರಾ ತರುವಂತೆ ಸೂಚನೆ ನೀಡಲಾಗಿದೆ. ಕೇವಲ ಸಿಸಿ ಕ್ಯಾಮರಾಗಳನ್ನು ಅಳವಡಿಸಿದರೆ ಸಾಲದು, ಈ ಕ್ಯಾಮರಾಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಪ್ರಾಚಾರ್ಯರಿಗೆ ವಹಿಸಲಾಗಿದೆ.

English summary
Department of Technical Education has issued a notification that submission of CCTV footage of diploma course exams which will be held in all government and private technical institutions in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X