ರಾಜ್ಯದಲ್ಲಿ ಕಡಿಮೆಯಾದ ಮಳೆ, ಒಣಹವೆ ಮುಂದುವರಿಕೆ
ಬೆಂಗಳೂರು, ನವೆಂಬರ್ 21: ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದು, ಒಣಹವೆ ಮುಂದುವರೆದಿದೆ. ಈಗ ಕೆಲವು ದಿನಗಳಿಂದ ಚಳಿ ಬೀಳಲು ಆರಂಭಿಸಿದೆ.
ಉಳಿದೆಲ್ಲಾ ದಿನ ಒಣಹವೆ ಮುಂದುವರೆಯಲಿದ್ದು, ನವೆಂಬರ್ 25 ರಂದು ಮಾತ್ರ ಬೆಂಗಳೂರು ಸೇರಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಹಲವೆಡೆ ಮಳೆಯಾಗದಿದ್ದರೂ ಮೋಡಕವಿದ ವಾತಾವರಣ ಮುಂದುವರೆದಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರದಲ್ಲಿ ಮಳೆಯಾಗಲಿದೆ.

ಮುಂದಿನ 24 ಗಂಟೆಗಳ ಕಾಲ ಬೆಂಳೂರಿನಲ್ಲಿ ಮೋಡಕವಿದ, ಮಂಜುಭರಿತ ವಾತಾವರಣವಿರಲಿದ್ದು, 29 ಡಿಗ್ರಿ ಗರಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಿರಲಿದೆ.
ದಾವಣಗೆರೆಯಲ್ಲಿ ಕನಿಷ್ಠ ಉಷ್ಣಾಂಶ 12.3 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ರಾಜ್ಯದ ಯಾವ ಭಾಗದಲ್ಲೂ ಮಳೆಯಾಗಿಲ್ಲ, ಒಣಹವೆ ಮುಂದುವರೆದಿದೆ.
Recommended Video
26 /11 ಅದೇ ದಿನ ಮತ್ತೊಂದು ದಾಳಿ ಸಾಧ್ಯತೆ | Oneindia Kannada












Click it and Unblock the Notifications